ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರತರಲು ಶಿಕ್ಷಕರು ನಿಷ್ಠೆ, ಪ್ರಾಮಾಣಿಕತೆ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯ ಮಾಡಬೇಕೆಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಹೇಳಿದರು.ಘೊಡಗೇರಿಯಲ್ಲಿ ನಡೆದ ಹಿಡಕಲ್ ಡ್ಯಾಮ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಮೊಬೈಲ್‌ಗಳ ಪ್ರಭಾವದಿಂದಾಗಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಇದರಿಂದ ಶಬ್ಧ ಸಂಗ್ರಹ ಕಡೆಮೆಯಾಗುತ್ತಿದೆ. ಉತ್ತಮ ಸಾಹಿತಿಯಾಗಬೇಕಾದರೆ ಶಬ್ಧ ಭಂಡಾರ ಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಹಳಗನ್ನಡ ಅಧ್ಯಯನ ಮಾಡುವುದರಿಂದ ಶಬ್ಧ ಸಂಗ್ರಹವಾಗುವದಲ್ಲದೆ, ಬರವಣಿಗೆ ಕೂಡ ಸುಧಾರಿಸುತ್ತದೆ. ಭಾಷೆಯಲ್ಲಿ ಸೌಂದರ್ಯತೆ ತುಂಬಿದಾಗ ಮಾತ್ರ ಉತ್ತಮ ಲೇಖನ ಬರೆಯಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಹುದಗಿರುವ ಪ್ರತಿಭೆ ಗುರುತಿಸಿ ರಾಜ್ಯಮಟ್ಟಕ್ಕೆ ಪರಿಚಯಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಹೇಳಿದರು.ಹಿಡಕಲ್ ಡ್ಯಾಂ ಸಿ.ಆರ್.ಪಿ ರಾಜಗೋಪಾಲ ಮಿತ್ರನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಘೋಡಗೇರಿ ಗ್ರಾಪಂ. ಅಧ್ಯಕ್ಷೆ ಅರುಂಧತಿ ಮಾದರ, ಉಪಾಧ್ಯಕ್ಷ ಶಿವಾನಂದ ಮುಗಳಿ, ಸದಸ್ಯರಾದ ಟಿ.ಎ. ಬಸ್ತವಾಡ, ಮಹಾಂತೇಶ ಶಿರಹಟ್ಟಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಕ್ಕೇರಿ ತಾಲೂಕಾಧ್ಯಕ್ಷ ಎನ್.ಎಸ್. ದೇವರಮನಿ, ಉಪಾಧ್ಯಕ್ಷೆ ಉಮಾದೇವಿ ಪಡೆಪ್ಪನವರ, ಬಿಆರ್‌ಪಿ ಮಾಸ್ತಮರಡಿ,ಇಸಿಒ ಪಾರ್ಥನಹಳ್ಳಿ. ವಿ.ಎಂ. ನಾಯಿಕ, ರೊಟ್ಟಯ್ಯನವರ ಮತ್ತು ಗಣ್ಯರಾದ ಇಬ್ರಾಹಿಂ ಮೋಕಾಶಿ ಮತ್ತು ಕನ್ನಡ ಗಂಡು ಮಕ್ಕಳ, ಹೆಣ್ಣು ಮಕ್ಕಳ, ಉರ್ದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.