ಸಾರಾಂಶ
ಶ್ರೀ ವಾಸವಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಗರೇಶ್ವರ ಆರ್ಯವೈಶ್ಯ ಸಂಘದಿಂದ ಪ್ರತಿಭಾ ಪುರಷ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಮಾನ್ವಿ: ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ನಗರೇಶ್ವರ ಆರ್ಯವೈಶ್ಯ ಸಂಘದಿಂದ ಪ್ರತಿಭಾ ಪುರಷ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯರು ಉದ್ಘಾಟಿಸಿ, ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಕೇವಲ ಹೆಚ್ಚಿನ ಅಂಕ ಪಡೆದರೆ ಮಾತ್ರ ಸಾಲದು, ವ್ಯಕ್ತಿತ್ವ ಹೆಚ್ಚಿಸಿಕೊಳ್ಳುವುದಕ್ಕೆ ದೊರೆತ್ತಿರುವ ಸಮಯ ಸದ್ಬಳಕೆ ಮಾಡಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಸ್ವತಂತ್ರವಾಗಿ ಜೀವಿಸುವುದಕ್ಕೆ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ತಿಳಿಸಿಕೋಡುವ ಜವಾಬ್ದರಿ ನಿಮ್ಮ ಮೇಲಿದೆ. ನಿಮ್ಮ ಮಕ್ಕಳನ್ನು ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆಯಾಗುವಂತೆ ಬೆಳೆಸಬೇಕು. ಶೈಕ್ಷಣಿಕವಾಗಿ ಉನ್ನತ ಸಾಧನೆ ತೋರಿದ್ದಾಗ ಪ್ರೋತ್ಸಾಹಿಸಿದಲ್ಲಿ ಅವರು ಜೀವನದಲ್ಲಿ ಉನ್ನತ ಗುರಿ ತಲುಪುವುದಕ್ಕೆ ಸಾಧ್ಯವಾಗುತ್ತದೆ ಎಂದರು.ಸಂಘದ ತಾಲೂಕು ಅಧ್ಯಕ್ಷ ಆರ್.ಮುತ್ತುರಾಜ್ ಶೆಟ್ಟಿ ಮಾತನಾಡಿದರು. ಕಾರ್ಯದರ್ಶಿ ಬಿ.ಈರಣ್ಣ ಶೆಟ್ಟಿ , ಮುಖಂಡರಾದ ಆರ್.ಪುರುಪೋತ್ತಮ ಶೆಟ್ಟಿ,ಆರ್. ರಾಮಾಂಜನೇಯ ಶೆಟ್ಟಿ, ಸಿ.ರಾಘವೇಂದ್ರ ಶೆಟ್ಟಿ, ದ್ವಾರಕನಾಥ ಶೆಟ್ಟಿ ಸೇರಿದಂತೆ ಇತರರಿದ್ದರು.