ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಬಿಜಾಪುರ ಜಿಲ್ಲಾ ಆಫಸೆಟ್ ಪ್ರಿಂಟರ್ಸ್ ಅಸೋಸಿಯೇಷನ್‌ನಿಂದ ನಗರದ ಶಹಾಪೇಟೆ ಗಲ್ಲಿಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಪ್ರಕಾಶ ಅಕ್ಕಲಕೋಟ ಮಾತನಾಡಿ, 2017ರಲ್ಲಿ ಆರಂಭವಾಗಿರುವ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಆಫಸೆಟ್ ಪ್ರಿಂಟಿಂಗ್ ಪ್ರೆಸ್ ವೃತ್ತಿಯಲ್ಲಿ ಸಾಕಷ್ಠು ಬದಲಾವಣೆಗಳು ಆಗಿವೆ.
ಕನ್ನಡಪ್ರಭ ವಾರ್ತೆ ವಿಜಯಪುರ:
ಬಿಜಾಪುರ ಜಿಲ್ಲಾ ಆಫಸೆಟ್ ಪ್ರಿಂಟರ್ಸ್ ಅಸೋಸಿಯೇಷನ್‌ನಿಂದ ನಗರದ ಶಹಾಪೇಟೆ ಗಲ್ಲಿಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಪ್ರಕಾಶ ಅಕ್ಕಲಕೋಟ ಮಾತನಾಡಿ, 2017ರಲ್ಲಿ ಆರಂಭವಾಗಿರುವ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಆಫಸೆಟ್ ಪ್ರಿಂಟಿಂಗ್ ಪ್ರೆಸ್ ವೃತ್ತಿಯಲ್ಲಿ ಸಾಕಷ್ಠು ಬದಲಾವಣೆಗಳು ಆಗಿವೆ. ಇನ್ನೂ ಸಹ ಆಫಸೆಟ್‌ನಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಉತ್ತಮ ಬೆಳವಟಣಿಗೆ ಆಗಬೇಕಿದೆ. ಈ ವೃತ್ತಿ ಮಾಡಲು ಇಂದಿನ ಯುವಕರು ಮುಂದಾಗಬೇಕಿದೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಕಿರಣ ಪಾಟೀಲ್ ಮಾತನಾಡಿ, ತಂತ್ರಜ್ಞಾನಗಳು, ಕಾರ್ಡ್‌ಗಳು, ಪತ್ರಿಕೆಗಳಿಗಾಗಿ ಹಾಗೂ ಡಿಸೈನ್‌ಗಳಿಗಾಗಿ ಬಹುತೇಕ ಆಫಸೆಟ್ ಮಾಲೀಕರು ಮಹಾರಾಷ್ಟ್ರದ ಮೊರೆ ಹೋಗುತ್ತಿದ್ದಾರೆ. ಬದಲಾಗಿ ವಿಜಯಪುರ ಹಾಗೂ ಕರ್ನಾಟಕದಲ್ಲೇ ಖರೀದಿ ಮಾಡಿದರೆ ನಮ್ಮ ಜಿಲ್ಲೆಯ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಮುಂದಿನ ಪೀಳಿಗೆಯವರು ತಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಮುದ್ರಣಕಾರ ವೃತ್ತಿಗೆ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಸ್ವಾತಿ ಹಂಚನಾಳ, ಗಂಗೋತ್ರಿ ಗೊಳಸಂಗಿಮಠ, ಅಮೃತಾ ಹಿರೇಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಫಸೆಟ್ ಪ್ರಿಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಆನಂದ ಬಾಗಾದಿ, ಉಪಾಧ್ಯಕ್ಷ ರಾಜಶೇಖರ ಮುತ್ತಿನಪೆಂಡಿಮಠ, ಖಜಾಂಚಿ ಶಿವಮೂರ್ತಿ ಗೊಳಸಂಗಿಮಠ, ಗೌರವ ಸಲಹೆಗಾರರಾದ ರಾಮಚಂದ್ರ ಕುಲಕರ್ಣಿ, ಬಂಡುರಾವ ಕುಲಕರ್ಣಿ ಸೇರಿದಂತೆ ನಿರ್ದೇಶಕ ಮಂಡಳಿ ಸದಸ್ಯರು ಮುದ್ರಣಕಾರ ಸಿಬ್ಬಂದಿ ಹಾಗೂ ಮುದ್ರಣಕಾರ ಬಂಧುಗಳು ಉಪಸ್ಥಿತರಿದ್ದರು.