ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಸಮಾಜಕ್ಕೆ ಪರಿಚಯಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸಿ, ಅವುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಸಮಾಜಕ್ಕೆ ಪರಿಚಯಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣ ಸಂಯೋಜಕ ಆರ್.ಬಿ. ಪವಾರ ಹೇಳಿದರು.ಸಮೀಪದ ಅಡರಕಟ್ಟಿ ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಶಿರಹಟ್ಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದೊಡ್ಡೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆಯಿದೆ. ಆದರೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹದ ಕೊರತೆಯಿಂದ ಅನೇಕ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ. ಇಂತಹ ಪ್ರತಿಭೆಗಳನ್ನು ಗುರುತಿಸಿ, ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಕೆಲಸವನ್ನು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಾಡುತ್ತಿವೆ ಎಂದರು.ಎಸ್ಡಿಎಂಸಿ ಅಧ್ಯಕ್ಷ ಜಿ.ಡಿ. ಹವಳದ, ಕ.ರಾ.ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಎನ್. ಭರಮಗೌಡರ, ಎಸ್ ಡಿ ಎಮ್ ಸಿ ಅಧ್ಯಕ್ಷ ಮಲ್ಲೇಶಪ್ಪ ಅಡರಕಟ್ಟಿ, ಉಪಾಧ್ಯಕ್ಷೆ ಪವಿತ್ರಾ ಮೂಲಿಮನಿ, ಕರಾಸನೌ ಸಂಘದ ಅಧ್ಯಕ್ಷ ಗುರುರಾಜ ಹವಳದ, ಪ್ರಧಾನ ಕಾರ್ಯದರ್ಶಿ ಎಮ್.ಎ. ನದಾಫ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಂದೆಣ್ಣವರ, ಬಿಆರ್ ಪಿ ಬಿ.ಎಮ್. ಯರಗುಪ್ಪಿ, ಪ್ರಧಾನ ಶಿಕ್ಷಕ ಬಸವರಾಜ ಕುಂಬಾರ, ಮಹಾಂತೇಶ ಹವಳದ, ನಿಂಗನಗೌಡ ಪಾಟೀಲ, ಬಸವರಾಜ ಶಿರಹಟ್ಟಿ ಮತ್ತು ಸಂಘದ ನಿರ್ದೇಶಕ ಎಸ್.ವಿ. ಸೋಗಿ, ಮುತ್ತಣ್ಣ ಹುಬ್ಬಳ್ಳಿ, ಗೀತಾ ಹಳ್ಯಾಳ, ಎಫ್.ಎಸ್. ತಳವಾರ, ಅಶೋಕ ಅರಗಂಜಿ, ಎಮ್.ಎಸ್. ಹಿರೇಮಠ, ಎಲ್.ಎನ್. ನಂದೆಣ್ಣವರ, ಎಸ್.ಸಿ. ಹಿರೇಮಠ, ಎಚ್.ಬಿ. ಪಟ್ಟಣದ, ರವಿ ಉಮಚಗಿ, ವಿಶಾಲಾಕ್ಷಿ ಫಿರಂಗಿ, ಭಾರತಿ ಸಿ., ಜಿ.ಪಿ.ನಾವಿ, ವಾಯ್.ಎನ್. ಬಾಲಣ್ಣವರ, ಹಮೀದಾಬೇಗಂ, ಸತೀಶ ಸ್ವಾದಿ, ಎಸ್ ಡಿಎಮ್ ಸಿ ಸದಸ್ಯ ವೀರಯ್ಯ ಪೂಜಾರ, ನಿಂಗಪ್ಪ ರೊಳ್ಳಿ, ಇಮಾಮಹುಸೇನ್ ಸಂಕ್ಲೀಪುರ, ಅಶೋಕ ಲಮಾಣಿ, ಖಾನಪ್ಪ ಲಮಾಣಿ, ರಾಜೇಶ್ವರಿ ಅಳ್ಳಳ್ಳಿ, ಸಲ್ಮಾ ಜಾಲಗಾರ, ಗೀತಾ ಭಂಗಿ, ಶೈಲಾ ಭಾವಿಕಟ್ಟಿ, ಯಲ್ಲವ್ವ ಕುಂಬಾರ ಹಾಗೂ ಶಾಲಾ ಸಿಬ್ಬಂದಿ ಎಮ್.ವಾಯ್. ನೀಲನಾಯ್ಕರ, ಕೆ.ಎಮ್. ಕೊಟ್ರಮ್ಮ, ಎಸ್.ಎಮ್. ಕೌಜಗೇರಿ, ಪಿ.ಬಿ. ಗುರಮಠ, ಪ್ರಶಾಂತ ಕೆರಿ, ವಂದನಾ, ಸುನಿತಾ, ಪೂಜಾ, ವೀಣಾ, ಸಂತೋಷ ಮತ್ತು ಸಿ ಆರ್ ಪಿ ಉಮೇಶ ನೇಕಾರ, ಜ್ಯೋತಿ ಗಾಯಕವಾಡ, ಗಿರೀಶ್ ನೇಕಾರ, ನವೀನ ಅಂಗಡಿ, ಶ್ರೀನಿವಾಸ ಮತ್ತೂರ ಇದ್ದರು.
ಮುಖ್ಯೋಪಾಧ್ಯಾಯ ಪಿ.ಸಿ. ಕಾಳಶೆಟ್ಟಿ ಸ್ವಾಗತಿಸಿದರು. ಸಿಆರ್ ಪಿ ಶಿವಾನಂದ ಅಸುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಡಿ. ಲಮಾಣಿ ನಿರೂಪಿಸಿದರು. ರಶ್ಮಿ ಹವಳದ ವಂದಿಸಿದರು.