ಸಾರಾಂಶ
ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಅಂಕಲಗಿ ಗ್ರಾಮದ ಮುಖಂಡ ವಿ.ಜಿ. ಬಳೊಲದ ಹೇಳಿದರು.
ಕನ್ನಡಪ್ರಭ ವಾರ್ತೆ ಕಲಾದಗಿ
ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಅಂಕಲಗಿ ಗ್ರಾಮದ ಮುಖಂಡ ವಿ.ಜಿ. ಬಳೊಲದ ಹೇಳಿದರು.ಸಮೀಪದ ಅಂಕಲಗಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲಾದಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಕಾರ್ಯಕ್ರಮ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಜೀವನದ ಕೌಶಲ್ಯ ಹೊಂದುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ ಹೆಡಗಿ ಮಾತನಾಡಿದರು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಲಾದಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಬಿಲಕೇರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುಂಚೆ ತೆರೆದ ಎತ್ತಿನ ಬಂಡಿಯಲ್ಲಿ ಮಕ್ಕಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ವೇದಿಕೆಗೆ ಜಾನಪದ ಕಲಾತಂಡಗಳ ಮೂಲಕ ಕರೆತರಲಾಯಿತು.ಖಜ್ಜಿಡೋಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಲ್ಲವ್ವ ಮಾದರ, ಉಪಾಧ್ಯಕ್ಷೆ ರುಕ್ಮಿಣಿ ಪರಚನಗೌಡರ, ಶಾಲಾ ಮೇಲುಸ್ತುವಾರಿ ಅಧ್ಯಕ್ಷೆ ಬಿ.ಎಚ್. ಮಾರಂಗಪ್ಪನವರ, ಉಪಾಧ್ಯಕ್ಷ ಸುರೇಶ ಮಾದರ, ಗ್ರಾಮದ ಹಿರಿಯರಾದ ಕೆ.ಎಲ್. ಬಿಲಕೇರಿ, ಲಕ್ಷ್ಮಣಗೌಡ ಗೌಡರ, ಲಕ್ಷ್ಮಣ ಗೌಡ ಬಿಲಕೇರಿ, ತಿಮ್ಮಣ್ಣ ಬಿಲಕೇರಿ, ನಾರಾಯಣ ಪೆಟ್ಲೂರ, ಶಕುಂತಲಾ ಬಳೊಲದ, ಲತಾ ಪಾಟೀಲ, ಗೌಡಪ್ಪ ಬಳೊಲದ, ಶಾಲಾ ಮುಖ್ಯ ಶಿಕ್ಷಕಿ ವೈ.ಎಲ್. ತಿಗಳಪ್ಪನವರ ಇದ್ದರು. ಶಿಕ್ಷಕಿ ಅರ್.ಬಿ. ಸೌದಾಗರ ನಿರೂಪಿಸಿದರು, ಶಿಕ್ಷಕ ಸುನಿಲ್ ಬಾಗೇವಾಡಿ ಸ್ವಾಗತಿಸಿದರು, ಶಿಕ್ಷಕ ಬಿ.ಬಿ. ತಿಮ್ಮಾಪುರ ವಂದಿಸಿದರು.
;Resize=(128,128))
;Resize=(128,128))
;Resize=(128,128))