ಮಕ್ಕಳಲ್ಲಿ ಅಡಗಿರುವಂತಹ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಉತ್ತಮವಾದ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹನೂರು

ಮಕ್ಕಳಲ್ಲಿ ಅಡಗಿರುವಂತಹ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಉತ್ತಮವಾದ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.

ತಾಲೂಕಿನ ಹೊಸಳ್ಳಿ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೌದಳ್ಳಿ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಟ್ಟಣ ಮಕ್ಕಳಿಂಗಿಂತಲೂ ಗ್ರಾಮೀಣ ಮಕ್ಕಳೇ ತುಂಬಾ ಪ್ರತಿಭಾವಂತರಾಗಿರುತ್ತಾರೆ. ಮಕ್ಕಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಅಡಕವಾಗಿರುತ್ತದೆ. ಇಂತಹ ಪ್ರತಿಭೆಗಳು ಹೊರತೆಗೆದಾಗ ಮಾತ್ರ ಅನಾವರಣಗೊಳ್ಳುತ್ತದೆ ಎಂದರು.

ಮುಖ್ಯ ಶಿಕ್ಷಕ ಕೃಷ್ಣಪ್ಪ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ಒಳ್ಳೆಯ ಪ್ರತಿಭೆ ಅಡಗಿರುತ್ತದೆ. ತೀರ್ಪುಗಾರರು ಸರಿಯಾದ ತೀರ್ಪನ್ನು ನೀಡಬೇಕು ಎಂದರು.

ಬಿ ಆರ್ ಸಿ ವೆಂಕಟೇಶ್, ಇ ಸಿ ಒ ಚಿನ್ನಪ್ಪಯ್ಯ, ಅಶೋಕ್, ,ಮುಖ್ಯ ಶಿಕ್ಷಕ ಕೃಷ್ಣಪ್ಪ, ಮುತ್ತುಸ್ವಾಮಿ, ಶಿವು, ಹಾಗೂ ಸಿ ಆರ್ ಪಿ ಅನಿಲ್ ಕುಮಾರ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಗಿರೀಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಕೆಂಪರಾಜು ಇದ್ದರು.