ಸಾರಾಂಶ
ಹೊಸಕೋಟೆ: ಜನರಲ್ಲಿ ಸಮಾನತೆ, ಸಹಬಾಳ್ವೆಯ ತತ್ವ ಮೂಡಿಸುವಲ್ಲಿ ಗುರುಪೀಠಗಳ ಪಾತ್ರ ಹಿರಿದು, ಮಠ ಮಾನ್ಯಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಗಬೇಕು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಶಿವನಾಪುರದ ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ದ್ರೌಪದಿ ವರ್ಧಂತಿ ಜಯಂತಿ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸುವಲ್ಲಿ ಮಠ ಮಾನ್ಯಗಳು ಸಹಕಾರಿ. ಗುರುಪೀಠಗಳು ಆರ್ಥಿಕವಾಗಿ ಸದೃಢವಾಗಿ ಬೆಳೆಯಲು ಎಲ್ಲ ಸಮುದಾಯಗಳ ಸಹಕಾರ ಮುಖ್ಯ. ಧಾರ್ಮಿಕ ಕೇಂದ್ರಗಳು ಶಾಂತಿ ನೆಮ್ಮದಿ ನೀಡುತ್ತವೆ. ದಾನಿಗಳು ಸಹಾಯಹಸ್ತ ನೀಡಿ ಮಠದ ಬೆಳವಣಿಗೆಗೆ ಶಕ್ತಿ ತುಂಬಬೇಕು ಎಂದರು.ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಶ್ರಮ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮಾಜದ ಎದುರು ಗೌರವಿಸುವುದು ಇದರ ಪ್ರಮುಖ ಉದ್ದೇಶ. ಇದು ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧರಾಗಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತದೆ ಎಂದರು.
ಶ್ರೀಆದಿಶಕ್ತಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಹೋಗಲಿ ಎನ್ನುವ ಒಂದು ಮುಖ್ಯ ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮಗಳು ನೆರವೇರಿಸಲಾಗುತ್ತಿದೆ. ಇವುಗಳನ್ನು ನೋಡಿ ಮುಂದಿನ ಪೀಳಿಗೆ ನಾವು ಸಹ ಉತ್ತಮ ಅಂಕ ಪಡೆದರೆ ನಮ್ಮನ್ನು ಈ ರೀತಿ ಗುರುತಿಸುತ್ತಾರೆ ಎಂದು ಆ ವಿದ್ಯಾರ್ಥಿಗಳಿಗೆ ಹುಮ್ಮಸ್ಸು ಬರಲಿ ಎಂದು ತಿಳಿಸಿದರು.ಶ್ರೀಆದಿಶಕ್ತಿ ಮಹಾ ಸಂಸ್ಥಾನ ಮಠದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ರಾಜ್ಯ ಮಟ್ಟದ ಪ್ರಥಮ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ೩೫೦ ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ನೂರಾರು ಜನರು ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾನಂದ ಸ್ವಾಮೀಜಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಎಂಎಲ್ಸಿ ಪಿ.ಆರ್.ರಮೇಶ್, ವಿಶ್ರಾಂತ ಕುಲಪತಿ ವೇಣುಗೋಪಾಲ್, ಐಪಿಎಸ್ ಅಧಿಕಾರಿ ಸವಿತಾ, ತೋಟಗಾರಿಕೆ ಪ್ರಶಸ್ತಿ ಪುರಸ್ಕೃತ ರಮೇಶ್, ಎಂವಿಜೆ ಆಸ್ಪತ್ರೆ ಉಪ ವೈದ್ಯಾಧಿಕಾರಿ ಡಾ.ಪ್ರಮೋದ್, ವಹ್ನಿಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಕೃಷ್ಣಮೂರ್ತಿ, ಕೆ.ಲಕ್ಷ್ಮಣ್‌ಗೌಡ, ಜೆ.ಎನ್.ನಾಗರಾಜು, ಮುಖಂಡರಾದ ಎಚ್.ಎಂ.ಸುಬ್ಬರಾಜು, ಕೆ.ನಾರಾಯಣಸ್ವಾಮಿ, ಲಕ್ಕೊಂಡಹಳ್ಳಿ ಮಂಜುನಾಥ್, ಸಿ.ಜಯರಾಜ್, ವಿಜಯಕುಮಾರ್, ಸೋಮನಾಥ್, ಸುನೀಲ್, ರಾಕೇಶ್, ಮುರಳಿ, ಅಂಜನ್‌ಕುಮಾರ್, ಅರುಣ್‌ಕುಮಾರ್, ನಾಗರಾಜ್, ಮುನಿಯಪ್ಪ, ಶೇಖರ್ ಪದಾಧಿಕಾರಿಗಳು ಹಾಜರಿದ್ದರು.6 ಹೆಚ್‌ಎಸ್‌ಕೆ 3 ಮತ್ತು 4
3: ಹೊಸಕೋಟೆ ತಾಲೂಕಿನ ಶಿವನಾಪುರದ ಶ್ರೀಆದಿಶಕ್ತಿ ಮಹಾ ಸಂಸ್ಥಾನ ಮಠದಲ್ಲಿ ದ್ರೌಪದಿ ವರ್ಧಂತಿ ಜಯಂತಿ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ಅಭಿನಂದಿಸಲಾಯಿತು.4: ದ್ರೌಪದಿ ವರ್ಧಂತಿ ಜಯಂತಿ ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಉದ್ಘಾಟಿಸಿದರು.