ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸಂಘದ ಕಚೇರಿಯಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಬಿ.ಎಸ್. ಸುಧಾಕರ್ ಕಾರ್ಯನಿರ್ವಹಿಸಿದರು.
ಚನ್ನಪಟ್ಟಣ: ತಾಲೂಕಿನ ಬಿ.ವಿ. ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿ.ಎನ್. ಪ್ರವೀಣ್ ಕುಮಾರ್, ಉಪಾಧ್ಯಕ್ಷರಾಗಿ ಬೀರಯ್ಯ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸಂಘದ ಕಚೇರಿಯಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಬಿ.ಎಸ್. ಸುಧಾಕರ್ ಕಾರ್ಯನಿರ್ವಹಿಸಿದರು.ಈಚೆಗೆ ಸಂಘದ ಆಡಳಿತ ಮಂಡಳಿಯ ೧೧ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿ.ಎನ್. ಪ್ರವೀಣ್ ಕುಮಾರ್, ಬೀರಯ್ಯ, ಬಿ.ಸಿ. ಪ್ರಕಾಶ್, ಬಿ.ಜೆ.ಲೋಕೇಶ್, ಬಿ.ಪಿ.ಶ್ರೀನಿವಾಸ, ಕೆಂಚೇಗೌಡ, ಎಂ.ದೇವರಾಜು, ಕೃಷ್ಣೇಗೌಡ, ಸುಶೀಲಮ್ಮ, ರತ್ನಮ್ಮ, ಕುಮಾರ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರು, ನಿರ್ದೇಶಕರನ್ನು ಗ್ರಾಮ ಮುಖಂಡರಾದ ಬಿ.ಇ.ದೊಡ್ಡೇಗೌಡ, ಬಿ.ಜೆ.ಯಧುನಂದನ್, ಜಿ.ರಾಘವೇಂದ್ರ, ಬಿ.ಎಂ.ರಾಜು, ಬಿ.ಕೆ.ಲೋಕೇಶ್, ಬಿ.ವಿ. ರಾಜಣ್ಣ ಇತರರು ಅಭಿನಂದಿಸಿದರು.