ಎನ್ ಡಿಎ ಗೆಲುವಿಗಾಗಿ ಪ್ರಾರ್ಥಿಸಿ ಈಡುಗಾಯಿ ಸೇವೆ

| Published : Jun 03 2024, 12:30 AM IST

ಎನ್ ಡಿಎ ಗೆಲುವಿಗಾಗಿ ಪ್ರಾರ್ಥಿಸಿ ಈಡುಗಾಯಿ ಸೇವೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನ ಗಳಿಸಲಿ ಹಾಗೂ ಮೋದಿಯವರು 3ನೇ ಬಾರಿ ಪ್ರಧಾನ ಮಂತ್ರಿಯಾಗಲೆಂದು ಪ್ರಾರ್ಥಿಸಿ ಜೆಡಿಎಸ್ ಕಾರ್ಯಕರ್ತರು 101 ಈಡುಗಾಯಿ ಹೊಡೆದರಲ್ಲದೆ, ಉರುಳು ಸೇವೆ ಮಾಡಿದರು.

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನ ಗಳಿಸಲಿ ಹಾಗೂ ಮೋದಿಯವರು 3ನೇ ಬಾರಿ ಪ್ರಧಾನ ಮಂತ್ರಿಯಾಗಲೆಂದು ಪ್ರಾರ್ಥಿಸಿ ಜೆಡಿಎಸ್ ಕಾರ್ಯಕರ್ತರು 101 ಈಡುಗಾಯಿ ಹೊಡೆದರಲ್ಲದೆ, ಉರುಳು ಸೇವೆ ಮಾಡಿದರು.

ರಾಮನಗರದ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತರು, ಗೆಲುವಿಗಾಗಿ ಪ್ರಾರ್ಥಿಸಿ ಈಡುಗಾಯಿ ಒಡೆದು ಉರುಳುಸೇವೆ ಮಾಡಿ ಭಕ್ತಿ ಪ್ರದರ್ಶಿಸಿದರು. ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟವು ಅತಿ ಹೆಚ್ಚು ಸ್ಥಾನ ಗಳಿಸಬೇಕು. ಮೋದೀಜೀಯವರು 3ನೇ ಬಾರಿಗೆ ಪ್ರಧಾನಮoತ್ರಿಯಾಗಬೇಕು. ಬೆoಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್.ಮoಜುನಾಥ್ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಕುಮಾರಣ್ಣನವರು ಅತೀ ಹೆಚ್ಚಿನ ಮತಗಳ ಅಂತರದಿಂದ ಗೆದ್ದು ಕೇoದ್ರ ಸಚಿವರಾಗಲಿ ಎoದು ಕಾರ್ಯಕರ್ತರು ಬೇಡಿಕೊಂಡರು.

ಜೆಡಿಎಸ್ ಮುಖoಡ ಸಬ್ಬಕೆರೆ ಶಿವಲಿoಗಯ್ಯ, ಜೆಡಿಎಸ್ ಪದವೀಧರ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ್, ಸಮಾಜಸೇವಕರು ಹಾಗೂ ಜನತಾ ಗ್ರೂಪ್ಸ್ ನ ಜನತಾ ನಾಗೇಶ್, ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಜಯಕುಮಾರ್, ಜೆಡಿಎಸ್ ಜಿಲ್ಲಾ ಪದವೀಧರ ಘಟಕದ ಜಿ.ಟಿ.ಕೃಷ್ಣ, ಹುಣಸನಹಳ್ಳಿ ವಿಎಸ್ಎಸ್ಎನ್ ಉಪಾಧ್ಯಕ್ಷ ಕೆ.ಕೆಂಪರಾಜು, ಜೆಡಿಎಸ್ ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಜಿ.ಕೆ.ಗoಗಾಧರ್, ಮುಖoಡರಾದ ಎನ್.ರಮೇಶ್ ಗೌಡ, ವಿನೋದ್ ಭಗತ್, ಲೋಕೇಶ್, ಬೇಕರಿ ಶಿವು, ದೀಪಕ್, ಕೊತ್ತಿಪುರ ಪಿ.ಸುರೇಶ್ ಮತ್ತಿತರರು ಹಾಜರಿದ್ದರು.(ಫೋಟೋ ಕ್ಯಾಫ್ಷನ್‌)

ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಎನ್‌ಡಿಎ ಗೆಲುವಿಗೆ ಪ್ರಾರ್ಥಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಕಾರ್ಯಕರ್ತರು, ಈಡುಗಾಯಿ ಒಡೆದು ಉರುಳುಸೇವೆ ಮಾಡಿ ಭಕ್ತಿ ಪ್ರದರ್ಶಿಸಿದರು.