ಗದಗ: ನಾರಾಯಣಗೌಡರ ಬಿಡುಗಡೆಗೆ ದೇವರಿಗೆ ಪ್ರಾರ್ಥನೆ

| Published : Jan 06 2024, 02:00 AM IST / Updated: Jan 06 2024, 02:25 PM IST

ಸಾರಾಂಶ

ನರಗುಂದದ ಸೋಮಾಪುರ ಓಣಿಯ ಮಾರುತೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮಾರುತೇಶ್ವರ ದೇವರಿಗೆ ತಾಲೂಕು ಕರವೇ ಕಾರ್ಯಕರ್ತರು ಕನ್ನಡ ಹೋರಾಟಗಾರ ಟಿ. ನಾರಾಯಣಗೌಡವರು ಬೇಗ ಬಂಧನದಿಂದ ಬಿಡುಗಡೆ ಆಗಬೇಕೆಂದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.

ನರಗುಂದ: ಪಟ್ಟಣದ ಸೋಮಾಪುರ ಓಣಿಯ ಮಾರುತೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಮಾರುತೇಶ್ವರ ದೇವರಿಗೆ ತಾಲೂಕು ಕರವೇ ಕಾರ್ಯಕರ್ತರು ಕನ್ನಡ ಹೋರಾಟಗಾರರಾದ ಟಿ. ನಾರಾಯಣಗೌಡವರು ಬೇಗ ಬಂಧನದಿಂದ ಬಿಡುಗಡೆ ಆಗಬೇಕೆಂದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.

ಆನಂತರ ತಾಲೂಕು ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ ಮಾತನಾಡಿ, ರಾಜ್ಯದಲ್ಲಿ ಅನ್ಯ ಭಾಷೆಯ ನಾಮಫಲಕಗಳನ್ನು ತೆರವು ಸಂದರ್ಭದಲ್ಲಿ ಪೊಲೀಸರು ಕನ್ನಡ ಹೋರಾಟಗಾರರನ್ನು ಹತ್ತಿಕ್ಕವ ಉದ್ದೇಶದಿಂದ ರಾಜ್ಯ ಕರವೇ ಅಧ್ಯಕ್ಷ ನಾರಾಯಣಗೌಡರು ಮತ್ತು ಇತರ ಕರವೇ ಪದಾಧಿಕಾರಿಗಳನ್ನು ಬಂಧಿಸಿ ನಮ್ಮಲ್ಲಿ ಭಯ ಹುಟ್ಟಿಸುವ ಹುನ್ನಾರ ಪೊಲೀಸರು ಮತ್ತು ಸರ್ಕಾರ ಮಾಡುತ್ತಿದೆ. ಆದರೆ ರಾಜ್ಯದಲ್ಲಿ 70 ಸಾವಿರಕ್ಕಿಂತ ಹೆಚ್ಚು ಕನ್ನಡಕ್ಕಾಗಿ ಪ್ರಾಣ ಕೊಡುವ ಹೋರಾಟಗಾರರ ಇದ್ದೇವೆ. 

ನಾವು ಜೈಲು, ನಿಮ್ಮ ಲಾಟಿ ಏಟು, ಭಯಕ್ಕೆ ಭಯ ಪಡುವುದಿಲ್ಲ. ಆದ್ದರಿಂದ ಸರ್ಕಾರ ನಮ್ಮ ನಾರಾಯಣಗೌಡರನ್ನು ಬೇಗ ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಏನೆ ಅನಾಹುತವಾದರೂ ಕೂಡ ಅದಕ್ಕೆ ರಾಜ್ಯ ಸರ್ಕಾರವೆ ಹೊಣೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

ಕರವೇ ಮಹಿಳಾ ಅಧ್ಯಕ್ಷ ಮಾಲಾ ಪಾಟೀಲ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಶಿವಾನಂದ ಮಾಯಣ್ಣವರ, ವಿಜಯ ಬಡಿಗೇರ, ವಾಸು ಹೆಬ್ಬಾಳ, ನಾಗಪ್ಪ ದೊಡಮನಿ, ವಿಠ್ಠಲ ಬಾರಕೇರ, ಯೋಗೇಶ ತಳವಾರ, ಚನ್ನಬಸಪ್ಪ ಹೊಸರಣ್ಣವರ, ಚಂದ್ರು ಪಾಟೀಲ, ಕೃಷ್ಣಾ, ಮಾದೆವ ಆಸೆದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.