ಏಪ್ರಿಲ್- ಮೇ ತಿಂಗಳಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ-ಗಾಳಿ
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಆರಂಭಕ್ಕೂ ಮುನ್ನಾಸುರಿದ ಧಾರಾಕಾರ ಮಳೆ-ಗಾಳಿಗೆ ಬರೋಬ್ಬರಿ 37.54 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಡಕೆ, ತೆಂಗು, ಬಾಳೆ, ಪಪ್ಪಾಯಿ, ಮಾವು ಸೇರಿದಂತೆ ವಿವಿಧ ತರಕಾರಿ ಬೆಳೆ ನಾಶವಾಗಿ ಸುಮಾರು ₹21.37 ಲಕ್ಷ ದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ಯಕ್ಕೆ ಮುಂಗಾರು ಕೈಕೊಟ್ಟಿದೆ. ನಿರೀಕ್ಷೆ ಮಟ್ಟದಲ್ಲಿ ಮಳೆಯಾಗುತ್ತಿಲ್ಲ. ಆದರೆ, ಏಪ್ರಿಲ್- ಮೇ ತಿಂಗಳಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ-ಗಾಳಿಯಿಂದ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಈ ಕುರಿತು ಜಿಲ್ಲಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿ ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಿದ್ದಾರೆ.
ಒಟ್ಟಾರೆ ಮೇ 30ರ ವರೆಗೆ ಜಿಲ್ಲೆಯಲ್ಲಿ ಸುರಿದ ಮಳೆ ಗಾಳಿಗೆ ಸುಮಾರು ₹21.37 ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ₹7. 09 ಲಕ್ಷ ನಷ್ಟು ಪರಿಹಾರ ನೀಡಬಹುದಾಗಿದೆ ಎಂದು ತೋಟ ಗಾರಿಕೆ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
86 ರೈತರ ಬೆಳೆ ಹಾನಿ:
ಒಟ್ಟು 86 ರೈತರಿಗೆ ಸೇರಿದ ವಿವಿಧ ಬೆಳೆ ಹಾನಿಯಾಗಿದೆ. 8 ಅಡಕೆ, 10 ಬಾಳೆ, 27 ತೆಂಗು, 2 ಪಪ್ಪಾಯ, ತಲಾ ಒಬ್ಬ ಮಾವು ಹಾಗೂ ಕಲ್ಲಂಗಡಿ ರೈತ ಮತ್ತು ವಿವಿಧ ತರಕಾರಿ ಬೆಳೆದ 37 ರೈತರ ಬೆಳೆ ಹಾನಿಯಾಗಿದೆ. ಈ ರೈತರ ಪೈಕಿ ಚಿಕ್ಕಮಗಳೂರು ತಾಲೂಕಿನ 50 ರೈತರು, ಕಡೂರಿನ 25, ಎನ್,ಆರ್,ಪುರದ 9 ಹಾಗೂ ಅಜ್ಜಂಪುರದ 2 ರೈತರ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.₹3.23 ಕೋಟಿಯಷ್ಟು ಕಟ್ಟಡ, ವಿದ್ಯುತ್ ತಂತಿ, ಕಂಬಕ್ಕೆ ಹಾನಿ
ಪೂರ್ವ ಮುಂಗಾರು ಅವಧಿಯಲ್ಲಿ ಸುರಿದ ಮಳೆ-ಗಾಳಿಗೆ ತೋಟಗಾರಿಕೆ ಬೆಳೆಗಳೊಂದಿಗೆ ವಿದ್ಯುತ್ ಕಂಬ, ವಿದ್ಯುತ್ ತಂತಿ, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳಿಗೂ ಹಾನಿಯಾಗಿದೆ. ಮಳೆಯಿಂದ 1870 ವಿದ್ಯುತ್ ಕಂಬ ಧರೆಗುರುಳಿ ₹2.91 ಕೋಟಿ ನಷ್ಟವಾಗಿದೆ. 37.40 ಕಿ.ಮೀ ಉದ್ದದ ವಿದ್ಯುತ್ ತಂತಿ ಮಾರ್ಗ ಹಾಳಾಗಿದ್ದು, ಸುಮಾರು ₹27.95 ಲಕ್ಷ ನಷ್ಟು ನಷ್ಟವಾಗಿದೆ. 2 ಶಾಲಾ/ಅಂಗನವಾಡಿ ಕಟ್ಟಡಗಳು ಹಾನಿಗೆ ಒಳಾಗಿದ್ದು, ₹4 ಲಕ್ಷ ನಷ್ಟವಾಗಿದೆ. ಒಟ್ಟು ₹3.23 ಕೋಟಿ ನಷ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ.---ಬಾಕ್ಸ್--
51 ಮನೆಗಳಿಗೆ ಭಾಗಶಃ ಹಾನಿಮಳೆ ಅನಾಹುತದಿಂದ ಜಿಲ್ಲೆಯ ಒಟ್ಟು 51 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 34, ಮೂಡಿಗೆರೆ 7,ಕೊಪ್ಪ 3, ಕಡೂರು 4 ಹಾಗೂ ಎನ್.ಆರ್.ಪುರ,ತರೀಕೆರೆ ಮತ್ತು ಶೃಂಗೇರಿಯಲ್ಲಿ ತಲಾ 1 ಮನೆಗೆ ಭಾಗಶಃ ಹಾನಿಯಾಗಿದೆ. ಎನ್.ಆರ್.ಪುರ ತಾಲೂಕಿನ ಒಂದು ಮನೆ ಸಂಪೂರ್ಣವಾಗಿ ಹಾನಿಗೆ ಒಳಗಾಗಿದೆ. ಸಂಪೂರ್ಣ ಹಾನಿಯಾದ ಮನೆಗಳಿಗೆ ₹1.20 ಲಕ್ಷ ಹಾಗೂ ಭಾಗಶಃ ಹಾನಿಯಾದ ಮನೆಗೆ ₹6,500 ಪರಿಹಾರ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.-- ಬಾಕ್ಸ್---
ತಾಲೂಕುವಾರು ತೋಟಗಾರಿಕೆ ಬೆಳೆಹಾನಿ ವಿವರತಾಲೂಕು ಬೆಳೆ ಹಾನಿ ಪ್ರದೇಶ (ಹೆಕ್ಟೇರ್)ರೈತರ ಸಂಖ್ಯೆಹಾನಿ ಮೊತ್ತ (ಲಕ್ಷ ರು)ಎನ್‌ಡಿಆರ್‌ಎಫ್ ಪ್ರಕಾರ(ಲಕ್ಷ ರು) ಚಿಕ್ಕಮಗಳೂರು21.93509.993.86
ಅಜ್ಜಂಪುರ1.2821.310.23ಎನ್‌ಆರ್‌ಪುರ2.5792.640.47
ಕಡೂರು11.76257.412.51ಒಟ್ಟು37.548621.377.09---ಕೋಟ್----
ಪೂರ್ವ ಮುಂಗಾರು ಅವಧಿಯಲ್ಲಿ ಮಳೆ ಹಾನಿಯಿಂದ ತೋಟಗಾರಿಕೆ ಬೆಳೆ ಹಾಗೂ ಮನೆಗಳಿಗೆ ಹಾನಿ ಸಂಬಂದ ಈಗಾಗಲೇ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗಿದೆ. ಶೀಘ್ರದಲ್ಲಿ ರೈತರಿಗೆ ಡಿಬಿಟಿ ಮೂಲಕ, ಮನೆ ಹಾನಿ ಸಂತ್ರಸ್ತರಿಗೆ ಚಕ್ ಮೂಲಕ ಪರಿಹಾರ ವಿತರಿಸಲಾಗುವುದು.- ಭನ್ವರ್ ಸಿಂಗ್ ಮೀನಾ, ಜಿಲ್ಲಾಧಿಕಾರಿ, ಚಿಕ್ಕಮಗಳೂರು
(ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ ಫೋಟೋ ಬಳಸಿ)