ಮಾತೃಭಾಷೆಗೆ ಆದ್ಯತೆ ನೀಡಿ, ಇತರ ಭಾಷೆ ಕಲಿಯಿರಿ

| Published : Nov 18 2024, 12:04 AM IST

ಮಾತೃಭಾಷೆಗೆ ಆದ್ಯತೆ ನೀಡಿ, ಇತರ ಭಾಷೆ ಕಲಿಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂತರಾಷ್ಟ್ರೀಯ ಉರ್ದು ದಿನಾಚರಣೆ ಹಮ್ಮಿಕೊಂಡಿರುವುದು ಶ್ಲಾಘನೀಯ

ಹರಪನಹಳ್ಳಿ: ಪ್ರತಿಯೊಬ್ಬರು ಮಾತೃಭಾಷೆಗೆ ಆದ್ಯತೆ ನೀಡಿ, ಇತರ ಭಾಷೆಗಳನ್ನು ಕಲಿಯಬೇಕು ಎಂದು ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ ತಿಳಿಸಿದ್ದಾರೆ.

ಅವರು ಪಟ್ಟಣದ ಅಂಜುಮನ್ ಸಭಾಂಗಣದಲ್ಲಿ ರಾಜ್ಯ ಉರ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಭಾಷಾ ಅಲ್ಪ ಸಂಖ್ಯಾತರ ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕರ ಸಂಘ ತಾಲೂಕು ಘಟಕಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಉರ್ದು ದಿನಾಚರಣೆ ಮತ್ತು ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದರು.

ಇಂದು ನಮ್ಮ ಭಾಷೆ ಮರೆತು ಆಂಗ್ಲ ಭಾಷಾ ವ್ಯಾಮೋಹ ಜಾಸ್ತಿಯಾಗುತ್ತಲಿದೆ. ಇಂತಹ ದಿನಗಳಲ್ಲಿ ಅಂತರಾಷ್ಟ್ರೀಯ ಉರ್ದು ದಿನಾಚರಣೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ, ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಆ ಮಗುವಿಗೆ ಮೂಲ ಶಿಕ್ಷಣ ನೀಡಬೇಕು ಎಂದು ಹೇಳಿದರು. ಮೌಲಾನಾ ಅಬ್ದುಲ್ಕಲಾಂ ಅವರು ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾದ್ಯಕ್ಷ ಬಸವರಾಜ ಸಂಗಪ್ಪನವರ್‌ ಮಾತನಾಡಿ, ಭಾಷೆ ಎಂಬುದು ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮಾಧ್ಯಮ, ಸಂವಿಧಾನದ ಅಂಗೀಕೃತ ಭಾಷೆ ಉರ್ದು ಭಾಷೆಯಾಗಿದೆ. ನಮ್ಮ ಭಾಷೆ ಪ್ರೀತಿಸುತ್ತಾ ಬೇರೆ ಭಾಷೆಯನ್ನು ಕಲಿಯಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಶಿಗ್ಗಾವ್ ತಾಲೂಕಿನ ಸಿಆರ್ ಪಿ ಇದಾಯುತುಲ್ಲಾ ಸಹ ಪಠ್ಯ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.

ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾದ್ಯಕ್ಷೆ ಜಿ.ಪದ್ಮಲತಾ ಮಾತನಾಡಿ, ಅಬ್ದುಲ್ ಕಲಾಂ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುದಾರಣೆ ತಂದ ಮಹಾನ್‌ ವ್ಯಕ್ತಿ ಎಂದ ಅವರು, ಶಿಕ್ಷಣ ಕೇವಲ ಓದುವುದು ಮಾತ್ರವಲ್ಲ ಇತರರಿಗೆ ಕಲಿಸುವುದು ಎಂದರು. ಅಮಾನ್ ಬೀ ಅಧ್ಯಕ್ಷತೆ ವಹಿಸಿದ್ದರು.

ಬಡ ಮಕ್ಕಳಿಗೆ ಬಟ್ಟೆ, ಪುಸ್ತಕಗಳನ್ನು ವಿತರಿಸಲಾಯಿತು, ಉತ್ತಮ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರಶಸ್ತಿಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಶಿಕ್ಷಕ ಮೆಹಬೂಬ್‌ ಬಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುರಸಭಾ ಅಧ್ಯಕ್ಷೆ ಎಂ.ಫಾತಿಮಾಬಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾದ್ಯಕ್ಷ ಎಚ್‌.ಕೊಟ್ರೇಶ, ಸದಸ್ಯರಾದ ಅಬ್ದುಲ್‌ ರಹಿಮಾನ್, ಲಾಟಿ ದಾದಾಪೀರ, ಉದ್ದಾರ ಗಣೇಶ, ಜಾಕೀರ ಹುಸೇನ್, ಮುಖಂಡರಾದ ಎ.ಮೂಸಾಸಾಹೇಬ್, ಸೈಯದ್‌ ಇರ್ಫಾನ್, ಇಸ್ಮಾಯಿಲ್‌ ಎಲಿಗಾರ, ಎಂ.ಜಾವೇದ್, ರಿಜ್ವಾನ್, ಅಸ್ಲಂ, ದಾದಾಪೀರ, ಮನ್ಸೂರು ಅಹ್ಮದ್‌, ದೈಹಿಕ ಪರಿವೀಕ್ಷಕ ಷಣ್ಮೂಖಪ್ಪ, ಎಂ.ದಾದಖಲಂದರ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಶೇಖರ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಿ.ಚಂದ್ರಮೌಳಿ, ಎಸ್‌.ರಾಮಪ್ಪ, ಮಾದಿಹಳ್ಳಿ ಮಂಜುನಾಥ, ರಮೇಶ, ಎನ್‌ ಪಿ ಎಸ್‌ ಸಂಘದ ಅಧ್ಯಕ್ಷ ಅಂಜಿನಪ್ಪ, ರಮೇಶ ಉಪಸ್ಥಿತರಿದ್ದರು.

ಹರಪನಹಳ್ಳಿ ಪಟ್ಟಣದ ಅಂಜುಮನ್‌ ಸಭಾಂಗಣದಲ್ಲಿ ಬಡ ಮಕ್ಕಳಿಗೆ ಬಟ್ಟೆ, ಪುಸ್ತಕಗಳನ್ನು ಕೊಡುವ ಮೂಲಕ ಅಂತರಾಷ್ಟ್ರೀಯ ಉರ್ದು ದಿನಾಚರಣೆ ಮತ್ತು ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಭಿ ಉದ್ಘಾಟಿಸಿದರು.