ಗರ್ಭಿಣಿ ಬಾಣಂತಿಯರು ಸಮತೋಲಿತ ಆಹಾರ ಸೇವಿಸಿ

| Published : Oct 11 2025, 12:02 AM IST

ಸಾರಾಂಶ

ನಾವು ಹೆಚ್ಚಾಗಿ ಬೇಕರಿ ತಿನಿಸಿಗಳು, ಮೈದಾದಿಂದ ಮಾಡಿದ ಆಹಾರ ಸೇವನೆ ಮಾಡುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೊಟ್ಟೆಯಿಂದ ಅಮೈನೋ ಆಸಿಡ್ ಲಭಿಸುತ್ತದೆ.

ಕನ್ನಡಪ್ರಭ ವಾರ್ತೆ ಯಳಂದೂರುಗರ್ಭಿಣಿ, ಬಾಣಂತಿಯರ ಆಹಾರದಲ್ಲಿ ಹೆಚ್ಚು ಪೌಷ್ಠಿಕಾಂಶ, ಸತ್ವಯುತ ಆಹಾರವನ್ನು ಸೇವನೆ ಮಾಡಬೇಕು, ಯಾವುದೇ ಕಾರಣಕ್ಕೂ ಆಹಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಜೊತೆಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಹಾಗೂ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದು ಎನ್‌ಆರ್‌ಎಲ್‌ಎಂನ ವ್ಯವಸ್ಥಾಪಕ ಶ್ರೀಕಾಂತ್ ಕರೆ ನೀಡಿದರು.ಅವರು ತಾಲೂಕಿನ ಯರಿಯೂರು ಗ್ರಾಮದ ಅಂಬೇಡ್ಕರ್ ಭವನದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳ ವತಿಯಿಂದ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾವು ಹೆಚ್ಚಾಗಿ ಬೇಕರಿ ತಿನಿಸಿಗಳು, ಮೈದಾದಿಂದ ಮಾಡಿದ ಆಹಾರ ಸೇವನೆ ಮಾಡುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೊಟ್ಟೆಯಿಂದ ಅಮೈನೋ ಆಸಿಡ್ ಲಭಿಸುತ್ತದೆ. ಬೆಣ್ಣೆ, ಸೊಪ್ಪು ತರಕಾರಿ, ಒಣ ಹಣ್ಣುಗಳು, ಪ್ರತಿ ನಿತ್ಯ 8 ಲೋಟಕ್ಕೂ ಹೆಚ್ಚು ನೀರು ಸೇವಿಸುವುದರಿಂದ ನಾರಿನಾಂಶ, ಪ್ರೋಟಿನ್, ಶರ್ಕರ, ಪಿಷ್ಠಾಧಿಗಳು ದೇಹಕ್ಕೆ ಲಭಿಸುತ್ತದೆ. ಈ ಬಗ್ಗೆ ವೈದ್ಯರ ಸಲಹೆಯೊಂದಿಗೆ ಆಹಾರದ ಚಾರ್ಟ್ ಮಾಡಿಕೊಂಡು ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಇದರಿಂದ ತಾಯಿ ಹಾಗೂ ಮಗು ಹೆಚ್ಚು ಆರೋಗ್ಯವಂತವಾಗಿರುತ್ತಾರೆ. ಆಹಾರದಲ್ಲಿ ಸಕ್ಕರೆ ಹಾಗೂ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು. ಅಡುಗೆ ಎಣ್ಣೆಯನ್ನು ಆದಷ್ಟು ನಿಗಧಿತವಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ, ಮಕ್ಕಳಿಗೆ ಅನ್ನಪ್ರಾಶನ ಹಾಗೂ ಅಕ್ಷರಭ್ಯಾಸ ಮಾಡಿಸಿ ಮಾಡಿಸಲಾಯಿತು. ಗ್ರಾಪಂ ಸದಸ್ಯರಾದ ಪ್ರವೀಣ್, ಮಹದೇವಯ್ಯ, ಆಶಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸರಸ್ವತಿ, ಆರೋಗ್ಯ ಕಾರ್ಯಕರ್ತೆ ಗೀತಾ ಮುಖಂಡರಾದ ಮಹದೇವಯ್ಯ, ರವಿ, ಅಂಗನವಾಡಿ ಕಾರ್ಯಕರ್ತೆಯರಾದ ಶಶಿ, ಜ್ಯೋತಿ, ರಾಜೇಶ್ವರಿ, ನಾಗಮ್ಮ, ನಂಜಮ್ಮಣಿ, ಶೋಭಾ, ಮಲ್ಲಾಜಮ್ಮ, ಜಿ. ಮಹದೇವಮ್ಮ, ಮಾಲಾ ಸೇರಿದಂತೆ ಅನೇಕರು ಇದ್ದರು. ೧೦ವೈಎಲ್‌ಡಿಚಿತ್ರ೦೨

ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ್ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಯಿತು.