ಸಾರಾಂಶ
ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆ 27ಕ್ಕೆ ಬೃಹತ್ ಸಮಾವೇಶ
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು
ಮಹಾತ್ಮಗಾಂಧಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಕಾಂಗ್ರೆಸ್ ನ ಅಧಿವೇಶನವು ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುನ್ನಡಿಯಾಗಿತ್ತೆಂದು ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬೆಳಗಾವಿಯಲ್ಲಿ ಮಹಾತ್ಮಗಾಂಧಿಯವರ ನೇತೃದಲ್ಲಿ ನಡೆದ ಅಧಿವೇಶನ ನಡೆದು 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ನಡೆಯಲಿರುವ ಶತಮಾನೋತ್ಸವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ಮಹಾತ್ಮಗಾಂಧಿ ನೇತೃತ್ವದಲ್ಲಿ ನಡೆದ ಐತಿಹಾಸಿಕ ಅಧಿವೇಶನ ಸ್ವಾತಂತ್ರ್ಯ ಹೋರಾಟಗಾರರಿಗೆ ಹೊಸ ಹುಮ್ಮಸ್ಸು ತಂದಿತ್ತು. ಅನೇಕ ಹೋರಾಟಗಾರರಿಗೆ ಸ್ಫೂರ್ತಿ ನೀಡಿತ್ತು. ಅದರ ಸವಿ ನೆನಪಿಗಾಗಿ ಇದೇ ಡಿ.27 ರಂದು ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದೆ ಎಂದು ತಿಳಿಸಿದರು.ಈ ಸಮಾವೇಶಕ್ಕೆ ಕರ್ನಾಟಕ ಸೇರಿದಂತೆ ದೇಶದ ಮೇಘಾಲಯ, ಸಿಕ್ಕಿಂ, ಮಣಿಪುರ, ಅರುಣಾಚಲ ಪ್ರದೇಶ , ಕನ್ಯಾಕುಮಾರಿ, ಗುಜರಾತ್, ಕಾಶ್ಮೀರ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಿಂದ ಲಕ್ಷಾಂತರ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು.
ಸಂಸತ್‌ನಲ್ಲಿ ಬಿಜೆಪಿಯ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಖಂಡನೀಯವಾದುದು. ಅಮಿತ್ ಶಾ ಗೆ ಮನುಸ್ಮೃತಿ ಬಗ್ಗೆ ಗೊತ್ತೇ ಹೊರತು ಸಂವಿಧಾನದ ಬಗ್ಗೆ ಅರಿವಿಲ್ಲ, ಸಂವಿಧಾನದ ಬಗ್ಗೆ ಪ್ರಾಮುಖ್ಯತೆ, ಕರಡು ಬಗ್ಗೆ ತಿಳಿದಿಲ್ಲ. ಬಾಬಾ ಸಾಹೇಬರನ್ನೇಕೆ ಸ್ಮರಣೆ ಮಾಡುವ ಬದಲು ದೇವರನ್ನು ಸ್ಮರಣೆ ಮಾಡಿರೆಂದು ಅವಮಾನ ಮಾಡಿರುವುದು ವಿರೋಧಿ ಕೃತ್ಯವಾಗಿದೆ. ಇದು ಸಂವಿಧಾನವನ್ನೇ ಬುಡಮೇಲು ಮಾಡುವಂತ ಹೇಳಿಕೆಯಾಗಿದೆ. ಇವರ ಹೇಳಿಕೆಯ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು. ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಗೊಳಿಸದಂತೆ ಈ ಸಮಾವೇಶದ ಯಶಸ್ವಿಗೆ ಶ್ರಮಿಸುವಂತೆ ಕೋರಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ತುಮಕೂರು ಗ್ರಾಮಾಂತರ ಅಭ್ಯರ್ಥಿ ಷಣ್ಮುಖಪ್ಪ, ಕಾರ್ಯದರ್ಶಿ ಸಂಪತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ಕೆ.ಕಲೀಂವುಲ್ಲಾ, ನಾಗೇಶ್ ರೆಡ್ಡಿ, ಮಾಜಿ ಅಧ್ಯಕ್ಷ ಪಟೇಲ್ ಜಿ ಪಾಪನಾಯಕ, ಜಿ.ಪ್ರಕಾಶ್, ಸತ್ಯನಾರಾಯಣ, ಕೆ.ಬಸವರಾಜ್, ಚಂದ್ರಶೇಖರ, ನಾಗರಾಜ್, ಟಿ.ಎಸ್.ಪಾಲಯ್ಯ, ಎಂ.ತಿಪ್ಪೇಸ್ವಾಮಿ, ಟಿ.ಎಸ್.ಮೂರ್ತಿ, ಮಾರಣ್ಣ, ಅಂಜಿನಪ್ಪ, ತಿಪ್ಪೇರುದ್ರಪ್ಪ, ಜಿಯಾವುಲ್ಲಾ, ಮಹಮದ್ ಇಕ್ಬಾಲ್ ಇದ್ದರು.