ಸಾರಾಂಶ
ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ರಂಗಮಂದಿರದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಬರುವ ಕೆರೆ ಸಮಿತಿ ಆಯ್ಕೆ ಹಾಗೂ ಕೆರೆ ಹೂಳುವೆತ್ತುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಈಚೆಗೆ ಜರುಗಿತು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಡೋಣೂರ ಗ್ರಾಮದ ರಂಗಮಂದಿರದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಬರುವ ಕೆರೆ ಸಮಿತಿ ಆಯ್ಕೆ ಹಾಗೂ ಕೆರೆ ಹೂಳುವೆತ್ತುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಈಚೆಗೆ ಜರುಗಿತು.ಸಭೆಯಲ್ಲಿ ಕೆರೆ ಸಮಿತಿ ಅಧ್ಯಕ್ಷರಾಗಿ ಮಹಾಂತೇಶ ಕೆರೂಟಿ, ಉಪಾಧ್ಯಕ್ಷರಾಗಿ ಬಸವರಾಜ ಮಸಳಿ, ಕಾರ್ಯದರ್ಶಿಯಾಗಿ ನಿಜಲಿಂಗಪ್ಪ ಬಿರಾದಾರ ಆಯ್ಕೆಯಾದರು.
ಸಭೆಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮಂಜುನಾಥ ಮಾತನಾಡಿ, ಈ ಗ್ರಾಮವು ನಮ್ಮ ಯೋಜನೆಯ ಇಂಗಳೇಶ್ವರ ವಲಯದಲ್ಲಿ ಬರುತ್ತದೆ. ಡೋಣೂರು ಗ್ರಾಮ ಪಂಚಾಯತಿ ಕೆರೆ ಸಮಿತಿಗೆ ಆಯ್ಕೆಯಾದ ಸಮಿತಿ ಸದಸ್ಯರು ಕೆಲಸ ಕಾರ್ಯಗಳ ಜವಾಬ್ದಾರಿಯ ಬಗ್ಗೆ ಅರಿತುಕೊಂಡು ಗ್ರಾಮಸ್ಥರ ಸಹಕಾರ ಹಾಗೂ ಗ್ರಾಮ ಪಂಚಾಯತಿಯ ಸಹಕಾರ ಪಡೆದುಕೊಂಡು ಕೆರೆ ಹೂಳು ಎತ್ತುವ ಕಾರ್ಯ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕು. ಹೂಳು ತೆಗೆದುಕೊಂಡು ಹೋಗುವರ ಬಗ್ಗೆ, ಕೆರೆ ಕೆಲಸದ ಹಲವಾರು ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.ಕಲಬುರಗಿ ಪ್ರಾದೇಶಿಕ ವ್ಯಾಪ್ತಿಯ ಅಭಿಯಂತರ ಮಂಜುನಾಥ್.ಸಿ ಅವರು, ಜೆಸಿಬಿ ಹಿಟಾಚಿ ಅವರ ಆಯ್ಕೆ, ಹೂಳು ತೆಗೆದುಕೊಂಡು ಹೋಗುವವರ ಪಟ್ಟಿ ನೀಡುವುದು. ಕೆರೆಯ ದಾಖಲಾತಿಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಡೋಣೂರು ಗ್ರಾಮ ಪಂಚಾಯತಿ ಅಧ್ಯಕ್ಷ ಚನ್ನಪ್ಪಗೌಡ ಬಿರಾದರ, ಗ್ರಾಮ ಪಂಚಾಯತಿ ಸದಸ್ಯರಾದ ಶಂಕ್ರಪ್ಪ ಹುಲ್ಲೂರು, ಪರಶುರಾಮ ಜ್ಯೋತಿ, ಪಂಚಾಯತಿಯ ಕಾರ್ಯದರ್ಶಿ ಸುರೇಶ ಬ್ಯಾಕೋಡ ಇತರರು ಇದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಕೃಷಿ ಮೇಲ್ವಿಚಾರಕ ರವಿಕುಮಾರ ಹಂಗರಗಿ ನಡೆಸಿಕೊಟ್ಟರು.;Resize=(128,128))
;Resize=(128,128))
;Resize=(128,128))