ಚಿತ್ರತಂಡದ ಸಂಕಲನಕಾರ ಹರ್ಷಿತ್ಪ್ರಭು ಚಿತ್ರ ಯಶಸ್ಸಿಗೆ ಖುಷಿಯಾಗಿದ್ದರು. ಪ್ರೇಮದ ಊರಲಿ ಚಿತ್ರದ ನಂತರ ಮತ್ತೊಂದು ಚಿತ್ರ ನಿರ್ಮಾಣದ ಬಗ್ಗೆ ಚಿತ್ರತಂಡ ಉತ್ಸುಕತೆ ಹೊಂದಿರುವ ಬಗ್ಗೆ ಮುನ್ಸೂಚನೆ ಕೊಟ್ಟ ಅವರು, ಮುಂದಿನ ಚಿತ್ರ ಬೇರೆಯದೆ ಕಥೆ ಹೊಂದಿರುತ್ತದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರು
ವಿಶ್ವವಿಖ್ಯಾತ ಬೇಲೂರು ಚೆನ್ನಕೇಶವ ದೇಗುಲಕ್ಕೆ ಪ್ರೇಮದ ಊರಲಿ ಚಿತ್ರ ತಂಡ ಭೇಟಿ ನೀಡಿ ದರ್ಶನ ಪಡೆದರು.`ಪ್ರೇಮದ ಊರಲಿ’ ಯಶಸ್ವಿ ಚಲನಚಿತ್ರದ ನಿರ್ದೇಶಕ ಮನೋಜ್ಕುಮಾರ್ ತಾಯಿ ರಾಧಮ್ಮ
ಚಿತ್ರತಂಡದೊಂದಿಗೆ ಆಗಮಿಸಿದ್ದರು. ಪತ್ರಿಕೆಯೊಂದಿಗೆ ಮಾತನಾಡಿ, ಚಿತ್ರ ಚನ್ನಾಗಿ ಓಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ನನ್ನ ಮಗ ಈ ಹಿಂದೆ ಕಣ್ಣಿನ ಬಗ್ಗೆ ಅಕ್ಷಿ ಚಿತ್ರವನ್ನು ನಿರ್ದೇಶಿಸಿ ಅದಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಈಗ ಪ್ರೇಮದ ಊರಲಿ ಚೆನ್ನಾಗಿ ತೆಗೆದಿದ್ದಾನೆ, ಜನರೂ ಒಪ್ಕೊಂಡಿದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಚಿತ್ರತಂಡದ ಸಂಕಲನಕಾರ ಹರ್ಷಿತ್ಪ್ರಭು ಚಿತ್ರ ಯಶಸ್ಸಿಗೆ ಖುಷಿಯಾಗಿದ್ದರು. ಪ್ರೇಮದ ಊರಲಿ ಚಿತ್ರದ ನಂತರ ಮತ್ತೊಂದು ಚಿತ್ರ ನಿರ್ಮಾಣದ ಬಗ್ಗೆ ಚಿತ್ರತಂಡ ಉತ್ಸುಕತೆ ಹೊಂದಿರುವ ಬಗ್ಗೆ ಮುನ್ಸೂಚನೆ ಕೊಟ್ಟ ಅವರು, ಮುಂದಿನ ಚಿತ್ರ ಬೇರೆಯದೆ ಕಥೆ ಹೊಂದಿರುತ್ತದೆ ಎಂದು ತಿಳಿಸಿದರು.
ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಮಮತಾ ದೇವೇಂದ್ರ, ಸಹ ನಿರ್ದೇಶಕಿ ಮೀನಾ ರಘು ಇದ್ದರು.ಪ್ರೇಮದ ಊರಲಿ ಚಿತ್ರ ನಿರ್ದೇಶಕ ಮನೋಜ್ಕುಮಾರ್, ೨೦೨೧ ರಲ್ಲಿ ನೇತ್ರದಾನದ ಮಹತ್ವ ಕುರಿತಾದ `ಅಕ್ಷಿ’ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಲನಚಿತ್ರವೆಂದು ೬೭ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಲಭಿಸಿತ್ತು. ಈ ಚಿತ್ರಕ್ಕೆ ಎಚ್.ಪಿ.ಬಾಲಸುಬ್ರಹ್ಮಣ್ಯ ಅವರು ಹಾಡಿದ ಹಾಡೇ ಅವರ ಬದುಕಿನ ಕೊನೆಯ ಕನ್ನಡ ಹಾಡು. ಚಿತ್ರ ಉತ್ತಮವಾಗಿದ್ದರೂ ಅದೇ ವೇಳೆ ಕೋವಿಡ್ ರಂಪಾಟ ಇದ್ದುದರಿಂದ ಚಿತ್ರ ಹೆಚ್ಚು ಓಡಲಿಲ್ಲ. ಚಿತ್ರ ಯಶಸ್ವಿಗೆ ತಂಡದ ತಾಂತ್ರಿಕ ವರ್ಗ, ನಿರ್ಮಾಪಕ ಬಳಗ, ಕಲಾವಿದರೆಲ್ಲರ ಸಹಕಾರ ಸ್ಮರಿಸಿಕೊಳ್ಳುವುದರ ಜೊತೆಗೆ `ನಾಡಿಗೆ ಕೊಡುಗೆ ನೀಡಿದ ಸೀಗೆ ಗುಡ್ಡ’ದ ನೆನೆಪು ಮರೆಯುವುದಿಲ್ಲ ಎಂದರು.