ಅದ್ಧೂರಿ ರಾಜ್ಯೋತ್ಸವಕ್ಕೆ ಸಿದ್ಧತೆ

| Published : Oct 17 2024, 12:50 AM IST

ಸಾರಾಂಶ

ಸರ್ಕಾರ ಆದೇಶದ ಮೇರೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನ.1 ರಂದು ಕರ್ನಾಟಕದ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ್ ರಾಜೇಶ ಬುರ್ಲಿಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಸರ್ಕಾರ ಆದೇಶದ ಮೇರೆಗೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನ.1 ರಂದು ಕರ್ನಾಟಕದ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ್ ರಾಜೇಶ ಬುರ್ಲಿಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪೂರ್ವಿಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷ ಅತೀ ವಿಜೃಂಭಣೆಯಿಂದ ಎಲ್ಲ ಕನ್ನಡ ಸಂಘಟನೆ ಸಹಯೋಗದೊಂದಿಗೆ ಅದ್ಧೂರಿವಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುವುದು. ಪಟ್ಟಣದ ಎಲ್ಲ ಹಿರಿಯರು ಹಾಗೂ ಕನ್ನಡ ಅಭಿಮಾನಿ ಬಂಧುಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾಗವಾಡ ಪೊಲೀಸ್‌ ಠಾಣೆಯ ಸಿಬ್ಬಂದಿಯವರು ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.

ಪಿಎಸೈ ಜಿ.ಜಿ.ಬಿರಾದರ ಮಾತನಾಡಿ, ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವುದರೊಂದಿಗೆ ಶಾಂತಿ, ಸುವವ್ಯಸ್ಥೆ ಕಾಪಾಡುವ ಕುರಿತು ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಪಿಎಸೈ ಜಿ.ಜಿ.ಬಿರಾದರ, ತಾಪಂ ಎಇಒ ಸುರೇಶ ಕದ್ದು, ಪಪಂ ಮುಖ್ಯಾಧಿಕಾರಿ ಕೆ.ಕೆ.ಗಾವಡೆ, ಕೃಷಿ ಇಲಾಖೆಯ ಅಧಿಕಾರಿ ಕಾಂತಿನಾಥ ಬಿರಾದಾರ, ಹೆಸ್ಮಾಂ ಎಇಇ ಡಿ.ಎ.ಮಾಳಿ, ಚಿಕ್ಕೋಡಿ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಪ್ರಶಾಂತ ಗಂಗಧರ, ರಾಜು ಬಡಚಿ, ಅಬಕಾರಿ ಇಲಾಖೆಯ ಅಧಿಕಾರಿ ಮಹಾಂತೇಶ ಬಂಡಗಾರ, ಕರವೇ ಅಧ್ಯಕ್ಷ ಸಿದ್ದು ಒಡಿಯರ, ಉಪಾಧ್ಯಕ್ಷ ಗಣೇಶ ಕೊಳೇಕರ, ಕಾಕಾ ಪಾಟೀಲ, ಅರುಣ ಜೋಶಿ, ವಿದ್ಯಾಧರ ಧೊಂಡಾರೆ, ಪ್ರವೀಣ ಪಾಟೀಲ, ಫಾರೂಕ್ ಅಲಾಸ್ಕರ, ರಾಜು ಪಾಟೀಲ, ಜಾವೀದ ಮುಜಾವರ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.