ಸಾರಾಂಶ
ತುಮಕೂರು: ವಿಶ್ವ ಹಿಂದೂ ಪರಿಷತ್, ಭಜರಂಗದಳದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಷ್ಠಾಪಿಸುವ 8ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವದ ಸಿದ್ಧತೆ ನಡೆದಿದೆ.
ತುಮಕೂರು: ವಿಶ್ವ ಹಿಂದೂ ಪರಿಷತ್, ಭಜರಂಗದಳದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಷ್ಠಾಪಿಸುವ 8ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವದ ಸಿದ್ಧತೆ ನಡೆದಿದೆ. ಸಮಿತಿಯ ಕಾರ್ಯದರ್ಶಿ ಕೋರಿ ಮಂಜುನಾಥ್ ಶನಿವಾರ ನಗರದ ಕೃಷ್ಣಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಭದ್ರಮ್ಮ ವೃತ್ತ ಪಕ್ಕದ ಸೋಮೇಕಟ್ಟೆ ಮಠದ ಆವರಣದಲ್ಲಿ ಗಣಪತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ತಿಂಗಳ 27ರಂದು ಗಣೇಶಚತುರ್ಥಿಯಂದು ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ನೆರವೇರಲಿದೆ.11 ದಿನಗಳ ಮಹೋತ್ಸವದಲ್ಲಿ ಪ್ರತಿದಿನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಿರಂತರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಸಾಂಸ್ಕೃತಿಕವಾಗಿ ಸಾಮೂಹಿಕ ಸೌಂದರ್ಯ ಲಹರಿ ಪಠಣ, ರುದ್ರಪಾರಾಯಣ, ಸಾಮೂಹಿಕ ಗಣಹೋಮ, ವಿಷ್ಣ ಸಹಸ್ರನಾಮ ಪಾರಾಯಣ ಮುಂದಾದ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ಭಜನೆ, ರಾಷ್ಟ್ರಚಿಂತನೆ ಭಾಷಣಗಳು ನಡೆಯಲಿವೆ. ವಿಸರ್ಜನೆ ದಿನ ರಾಜಬೀದಿಗಳಲ್ಲಿ ವೈಭವದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು. ಸಮಿತಿ ಗೌರವಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿದರು. ಸಮಿತಿಅಧ್ಯಕ್ಷ ಬಿ.ಎಸ್.ಮಂಜುನಾಥ್, ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಬಿ.ಜಿ.ಪ್ರದೀಪ್, ಮಾಜಿಅಧ್ಯಕ್ಷ ಜಿ.ಕೆ.ಶ್ರೀನಿವಾಸ ಮೊದಲಾದವರು ಭಾಗಹಿಸಿದ್ದರು.