ಡಿಸೆಂಬರ್ 5ರಿಂದ ಡಿಸಂಬರ್ 8ರವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ. ಡಿ. 15ರಂದು ಮಂಗಳವಾರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ಇರುವುದರಿಂದ ಡಿ. 8ರಿಂದ ಡಿ. 19 ರವರೆಗೆ 12 ದಿನಗಳ ಕಾಲ ಪ್ರತಿನಿತ್ಯ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯದಲ್ಲಿ ನಡೆಯಲಿವೆ. ಡಿ. 8ರಂದು ಮಂಗಳವಾರ ಪರಾಭವ ಸಂವತ್ಸರದ ಕಾರ್ತಿಕ ಕರಷ ಅಮಾವಾಸ್ಯೆ ರಾತ್ರಿ ಯಾಗಶಾಲಾ ಪ್ರವೇಶ, ಸ್ವಸ್ತವಾಚನ ಪೂರ್ವಕ ಅಂಕುರಾರ್ಪಣೆ, ಧಾರ್ಮಿಕ ವಿಧಾನಗಳು ಪ್ರಾರಂಭವಾಗಲಿವೆ.
ಕನ್ನಡಪ್ರಭ ವಾರ್ತೆ ರಾಮನಾಥಪುರ ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ ಡಿಸೆಂಬರ್ 15ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಅಭಿಜನ್ ಮುಹೂರ್ತದಲ್ಲಿ ಪ್ರಸನ್ನ ಶ್ರೀಸುಬ್ರಮಣ್ಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ ಎಂದು ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ವ್ಯವಸ್ಥಾಪಕರಾದ ವೇಣುಗೋಪಾಲ್ ಆಚಾರ್ಯ ತಿಳಿಸಿದರು. ರಾಮನಾಥಪುರದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಹಾಪೂಜೆ ನಂತರ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರುಗಳಿಗೆ ರಥೋತ್ಸವದ ಆಹ್ವಾನ ಪತ್ರಿಕೆ ನೀಡಿ ಮಾತನಾಡಿದ ಅವರು ಡಿಸೆಂಬರ್ 5ರಿಂದ ಡಿಸಂಬರ್ 8ರವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ. ಡಿ. 15ರಂದು ಮಂಗಳವಾರ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ಇರುವುದರಿಂದ ಡಿ. 8ರಿಂದ ಡಿ. 19 ರವರೆಗೆ 12 ದಿನಗಳ ಕಾಲ ಪ್ರತಿನಿತ್ಯ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯದಲ್ಲಿ ನಡೆಯಲಿವೆ. ಡಿ. 8ರಂದು ಮಂಗಳವಾರ ಪರಾಭವ ಸಂವತ್ಸರದ ಕಾರ್ತಿಕ ಕರಷ ಅಮಾವಾಸ್ಯೆ ರಾತ್ರಿ ಯಾಗಶಾಲಾ ಪ್ರವೇಶ, ಸ್ವಸ್ತವಾಚನ ಪೂರ್ವಕ ಅಂಕುರಾರ್ಪಣೆ, ಧಾರ್ಮಿಕ ವಿಧಾನಗಳು ಪ್ರಾರಂಭವಾಗಲಿವೆ. ಡಿ. 9ರಂದು ಬುಧವಾರ ಮಾರ್ಗಶಿರ ಶುದ್ಧ ಪಾಡ್ಯ ಹಗಲು ಬೆಳ್ಳಿ ರಥೋತ್ಸವ, ರಾತ್ರಿ ಮಯೂರ ವಾಹನೋತ್ಸವ ನಡೆಯಲಿದೆ. ಡಿ. 10ರಂದು ಗುರುವಾರ ಹಗಲುಸೇವೆ ಬೆಳ್ಳಿರಥೋತ್ಸವ, ರಾತ್ರಿ ಹಂಸ ವಾಹನೋತ್ಸವ, ಡಿ. 11 ರಂದು ಶುಕ್ರವಾರ ಹಗಲು ಬೆಳ್ಳಿ ರಥೋತ್ಸವ, ರಾತ್ರಿ ಅಶ್ವ ವಾಹನೋತ್ಸವ - ಡಿ. 12ರಂದು ಶನಿವಾರ ಹಗಲು ಬೆಳ್ಳಿರಥೋತ್ಸವ ರಾತ್ರಿ ಶೇಷ ವಾಹನೋತ್ಸವ, ಡಿ. 13ರಂದು ಭಾನುವಾರ ಹಗಲು ಬೆಳ್ಳಿ ರಥೋತ್ಸವ, ಮಾರ್ಗಶಿರ ಶುದ್ಧ ಚತುರ್ಥಿ ರಾತ್ರಿ ಗಜವಾಹನೋತ್ಸವ. ಡಿ. 14ರಂದು ಸೋಮವಾರ ಮಾರ್ಗಶುದ್ಧ ಪಂಚಮಿ ಗಜನೋತ್ಸವ ಪೂರ್ವಕ ತೈಲಾಭ್ಯಂಜನ ಸೇವೆ ಬೆಳ್ಳಿ ರಥೋತ್ಸವ ಪಂಚಮಿ ಉತ್ಸವ, ರಾತ್ರಿ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಬೆಳ್ಳಿ ರಥೋತ್ಸವ, ಡಿಸಂಬರ್ 15ರಂದು ಮಂಗಳವಾರ ಮಾರ್ಗಶಿರ ಶುದ್ದ ಪಂಚಮಿ ಶುದ್ಧ ಷಷ್ಠಿ - ಮದ್ಯಾಹ್ನ 12 ಗಂಟೆಗೆ ( ಅಭಿಜನ್ ಮುಹೂರ್ತದಲ್ಲಿ) ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ಅಂದು ರಾತ್ರಿ ಬೆಳ್ಳಿ ರಥ, ಶಾಂತೋತ್ಸವ, ಹಾಗೂ ರಂದು ಪುಪ್ಪಾಂದೋಳಿಕೋತ್ಸವ ರಾತ್ರಿ ವಾಹನೋತ್ಸವ, ಡಿ. 16 ಬುಧವಾರ ಬೆಳಿಗ್ಗೆ ತೈಲಾಭ್ಯಂಜನ ಸ್ನಾನ, ರಾತ್ರಿ ವಾಹನೋತ್ಸವ, ಡಿ. 17 ರಂದು ಗುರುವಾರ ಬೆಳಿಗ್ಗೆ ಅವಭೃತೋತ್ಸವ ಸ್ನಾನ ರಾತ್ರಿ ತೆಪ್ಪೋತ್ಸವ, ಡಿ. 18ರಂದು ಶುಕ್ರವಾರ ರಾತ್ರಿ ತೆಪ್ಪೋತ್ಸವ, ಡಿ. 19ರಂದು ರಾತ್ರಿ ತೆಪ್ಪೋತ್ಸವ ಸಹಿತ ದವನ ಮಂಟಪೋತ್ಸವ ನಡೆಯಲಿದೆ. ದೇವಸ್ಥಾನದಲ್ಲಿ ನಡೆಯುವ ಸೇವೆಗಳು ಮತ್ತು ಮಹಾ ರಥೋತ್ಸವಕ್ಕೆ ಹೆಚ್ಚಿನ ರೀತಿಯಲ್ಲಿ ಭಕ್ತರುಗಳು ಭಾಗವಹಿಸಿ ಈ ರಥೋತ್ಸವಗಳಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿಕೊಡಬೇಕೆಂದು ಎಂದು ವ್ಯವಸ್ಥಾಪಕರು ಶ್ರೀ ವೇಣುಗೋಪಾಲ್ ಆಚಾರ್ಯ ಅವರು ವಿನಂತಿಸಿದರು. ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವೇ. ಸೋಮಶೇಖರ್, ವೇ. ಶ್ರೀನಾಥ್, ಶಿರದನಹಳ್ಳಿ ಶ್ರೀ ಶನೇಶ್ವರಸ್ವಾಮಿ ದೇವಾಲಯದ ವ್ಯವಸ್ಥಾಪಕರು ಶ್ರೀ ನಾಗರಾಜಸ್ವಾಮಿ, ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಯುವಘಟಕದ ಅಧ್ಯಕ್ಷರು ಅರ್.ಕೆ. ಶ್ರೀನಿವಾಸ್, ಲೋಕೇಶ್, ಮಂಜು, ನಾಗೇಂದ್ರ ಮುಂತಾದವರು ಉಪಸ್ಥಿತರಿದ್ದರು.