ಸಾರಾಂಶ
ಹೊಳೆನರಸೀಪುರ ಪಟ್ಟಣದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ತಾಲೂಕಿನಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಹೂ, ಹಣ್ಣು, ಆಭರಣ, ಸಲಂಕಾರಿಕ ವಸ್ತುಗಳ ವ್ಯಾಪಾರ ಜೋರಾಗಿ ನಡೆದಿದೆ. ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕಾಗಿ ಜನರು ಉತ್ಸಾಹದಿಂದ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಹೊಳೆನರಸೀಪುರ: ಪಟ್ಟಣದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ತಾಲೂಕಿನಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಹೂ, ಹಣ್ಣು, ಆಭರಣ, ಸಲಂಕಾರಿಕ ವಸ್ತುಗಳ ವ್ಯಾಪಾರ ಜೋರಾಗಿ ನಡೆದಿದೆ. ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕಾಗಿ ಜನರು ಉತ್ಸಾಹದಿಂದ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಹಬ್ಬದ ಆಚರಣೆಗೆ ಪಟ್ಟಣ ತಾಲೂಕಿನಾದ್ಯಂತ ಬಿರುಸಿನ ಸಿದ್ಧತೆ ನಡೆದಿವೆ. ಹಿಂದೂ ಧರ್ಮದವರು ವಿಜೃಂಭಣೆಯಿಂದ ಆಚರಿಸುವ ಈ ಹಬ್ಬದ ನಿಮಿತ್ತ ಪಟ್ಟಣದ ಸುಭಾಷ್ ವೃತ್ತ, ಮಹಾತ್ಮಗಾಂಧಿ ವೃತ್ತ, ಡಾ. ಜಗಜೀವನ್ ರಾಂ ವೃತ್ತ, ಮಾರಮ್ಮಗುಡಿ ವೃತ್ತ, ಪೇಟೆ ಮುಖ್ಯ ರಸ್ತೆ, ಕೋಟೆ ಮುಖ್ಯ ರಸ್ತೆಯಲ್ಲಿ ಬಾಳೆ ಎಲೆ, ಬಾಳೆಕಂದು, ಚೆಂಡು ಹೂ, ಸೇವಂತಿಗೆ, ಮಲ್ಲಿಗೆ, ಕನಕಾಂಬರ, ಕಾಕಡ, ತೆಂಗಿನಕಾಯಿ, ಬಾಳೆಹಣ್ಣು, ಮಾವಿನಸೊಪ್ಪು, ಸೇರಿದಂತೆ ವಿವಿಧ ದಿನಬಳಕೆಯ ವಸ್ತುಗಳನ್ನು ಜನರು ಖರೀದಿಸಿದರು. ಆಧುನಿಕತೆ ಜತೆಗೆ ತಂತ್ರಜ್ಞಾನದ ನಡುವೆಯೂ ದೀಪದ ಹಣತೆಗಳನ್ನು ಜನರು ಖರೀದಿಸಿ, ಪೂರ್ವಿಕರ ಆಚರಣೆ ಹಾಗೂ ಸಂಪ್ರದಾಯಕ ಶೈಲಿಯಲ್ಲಿ ಹಬ್ಬ ಆಚರಿಸಲು ಸಜ್ಜಾದರು.