ಶನಿವಾರಸಂತೆ: ಶಾಲಾ ವಜ್ರಮಹೋತ್ಸವ ಕುರಿತು ಪೂರ್ವಭಾವಿ ಸಭೆ

| Published : Apr 04 2025, 12:48 AM IST

ಸಾರಾಂಶ

ಶಾಲೆಯನ್ನು 1950ರಲ್ಲಿ ಸ್ಥಾಪಿಸಲಾಗಿದೆ. ಈಗ ಶಾಲೆಗೆ 75 ವರ್ಷ ತುಂಬಿದೆ. ಈ ಹಿನ್ನೆಲೆ ವಜ್ರಮಹೋತ್ಸವ ಆಚರಿಸುವ ಕುರಿತಾಗಿ ಸಭೆ ಕರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಸಮೀಪದ ಆಲೂರುಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 75 ವರ್ಷ ತುಂಬಿದ ಹಿನ್ನಲೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಅದ್ಧೂರಿಯಾಗಿ ಶಾಲಾ ವಜ್ರಮಹೋತ್ಸವನ್ನು ಆಚರಿಸುವ ಕುರಿತಾಗಿ ಬುಧವಾರ ಶಾಲಾ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಪೂರ್ವಭಾವಿ ಸಭೆಯನ್ನು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಹೇಮಾನಂದ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು

ಪೂರ್ವಭಾವಿ ಸಭೆಯಲ್ಲಿ ಶಾಲಾ ಮುಖ್ಯ ಶಿಕ್ಷಕ ಉದಯ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸದರಿ ಶಾಲೆಯನ್ನು 1950 ರಲ್ಲಿ ಸ್ಥಾಪಿಸಲಾಗಿದ್ದು ಈಗ ಶಾಲೆಗೆ 75 ವರ್ಷ ತುಂಬಿದೆ. ಈ ಹಿನ್ನಲೆಯಲ್ಲಿ ಇಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ಹಿರಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ವಜ್ರಮಹೋತ್ಸವವನ್ನು ಆಚರಿಸುವ ಕುರಿತು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದರು.

ಹಿರಿಯ ವಿದ್ಯಾರ್ಥಿ ಎಚ್.ಎಸ್.ಪ್ರೇಮ್‍ನಾಥ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳು, ಶಾಲೆಯಲ್ಲಿ ಪಾಠ ಮಾಡಿರುವ ಹಿರಿಯ ಶಿಕ್ಷಕರು ಸಮ್ಮಿಲನಗೊಳ್ಳುವ ಅವಕಾಶ ಯಾವಾಗಲು ಬರುವುದಿಲ್ಲ. ಶಾಲೆಯ ವಜ್ರಮಹೋತ್ಸವದಲ್ಲಿ ಹಿರಿಯ ವಿದ್ಯಾರ್ಥಿಗಳ ಪಾಠ ಮಾಡಿದ ಗುರುಗಳಿಗೆ ಈ ಶಾಲೆಯಲ್ಲಿ ಓದಿ ಈಗ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ವೇದಿಕೆ ಇದಾಗಬೇಕಿದೆ ಎಂದರು.

ಕಾರ್ಯಕ್ರಮ ರೂವಾರಿ ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ ವಜ್ರಮಹೋತ್ಸವ ಕಾರ್ಯಕ್ರಮ ರೂಪುರೇಷೆ ಕುರಿತು ಮಾತನಾಡಿ, ವಜ್ರಮಹೋತ್ಸವವನ್ನು ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಆಚರಣೆ ಮಾಡಬೇಕಿದೆ. ಶಾಲೆಯ ವಜ್ರಮಹೋತ್ಸವ ಆಚರಣೆ ಮಾಡುವ ಅವಕಾಶ ನಮಗೆ ಕೂಡಿಬಂದಿರುವುದರಿಂದ ಆಚರಣೆಯನ್ನು ಅದ್ದೂರಿಯಾಗಿ ಮೂರು ದಿನಗಳ ವರೆಗೆ ಆಚರಿಸಬೇಕಿದೆ ಆಚರಣೆ ಅಂಗವಾಗಿ ಹಲವಾರು ಕಾರ್ಯಕ್ರಮಗಳು ನಡೆಯುವುದರಿಂದ ಅಂದಾಜು 15 ರಿಂದ 20 ಲಕ್ಷ ವರೆಗೆ ಬೇಕಾಗುತ್ತದೆ. ಹಣ ಕ್ರೋಢಿಕರಣ ಸೇರಿದಂತೆ ರೂಪರೇಷೆಯ ಬಗ್ಗೆ ಮುಂದಿನ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕಿದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ವಜ್ರಮಹೋತ್ಸವವನ್ನು ಅದ್ದೂರಿಯಾಗಿ ನಡೆಸುವಂತೆ ಒಪ್ಪಿಗೆ ಸೂಚಿಸಿದರು, ಮುಂದಿನ ಪೂರ್ವಸಭೆಯು ಮೇ 13 ರಂದು ನಡೆಯಲಿದ್ದು ಅಂದು ನಡೆಯುವ ಸಭೆಯಲ್ಲಿ ಮುಂದಿನ ರೂಪುರೇಷೆಗಳ ಬಗ್ಗೆ ಮತ್ತು ಜನರ ಸಲಹೆ ಸಹಕಾರ ತೆಗೆದುಕೊಳ್ಳುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ವೇದಿಕೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಕಡ್ಯದ ಮಾಚಯ್ಯ, ಅಂಬ್ರಾಟಿ ಮಾದಪ್ಪ, ಹಳೆ ವಿದ್ಯಾರ್ಥಿ ಮತ್ತು ಗ್ರಾ.ಪಂ.ಸದಸ್ಯ ಪಿ.ಎಸ್.ಸತೀಶ್‍ಕುಮಾರ್ ಎಸ್‍ಡಿಎಂಸಿ ಅಧ್ಯಕ್ಷ ಹೇಮಾನಂದ್ ಹಾಜರಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕರುಂಬಯ್ಯ ಮೊ.ನಂ.9449402462 ಅವರನ್ನು ಸಂಪರ್ಕಿಸಬಹುದಾಗಿದೆ