ಜಿಲ್ಲೆ ಸಿರವಾರ ತಾಲೂಕಿನ ಹರವಿ ಹಾಗೂ ಹಿರೇಹಣಗಿ, ಕವಿತಾಳ ಪಟ್ಟಣಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ವಿಭಾಗದ ಜಂಟಿ ಕಾರ್ಯದರ್ಶಿ ಹಾಗೂ ಸಂಪೂರ್ಣತಾ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಕೇಂದ್ರ ಸರ್ಕಾರದ ಪ್ರಭಾರಿ ಜಿಲ್ಲಾ ಉಸ್ತುವಾರಿ ಉಜ್ವಲ್ ಕುಮಾರ್ ಘೋಷ್ ಅವರು ಸೋಮವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳು ಹಾಗೂ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆ ಸಿರವಾರ ತಾಲೂಕಿನ ಹರವಿ ಹಾಗೂ ಹಿರೇಹಣಗಿ, ಕವಿತಾಳ ಪಟ್ಟಣಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ವಿಭಾಗದ ಜಂಟಿ ಕಾರ್ಯದರ್ಶಿ ಹಾಗೂ ಸಂಪೂರ್ಣತಾ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಕೇಂದ್ರ ಸರ್ಕಾರದ ಪ್ರಭಾರಿ ಜಿಲ್ಲಾ ಉಸ್ತುವಾರಿ ಉಜ್ವಲ್ ಕುಮಾರ್ ಘೋಷ್ ಅವರು ಸೋಮವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳು ಹಾಗೂ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು.

ಮೊದಲಿಗೆ ಸಿರವಾರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಮಾನ್ಯರು, ಗ್ರಾಮೀಣ ಭಾಗದ ಮಹಿಳೆಯರು ತಮ್ಮ ವೈಯಕ್ತಿಕ ಅರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸುವ ದಿಶೆಯಲ್ಲಿ ಸೂಕ್ತ ಸಲಹೆ ಸೂಚನೆ, ಜಾಗೃತಿ, ಆಪ್ತ ಸಮಾಲೊಚನೆ ಕೈಗೊಳ್ಳಲು ಇದಕ್ಕಾಗಿ ಬೇಕಾಗುವ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ ಪಡೆದುಕೊಳ್ಳಬೇಕು.

ಚಿಕಿತ್ಸೆಗಾಗಿ ಆಗಮಿಸಿದ ತಾಯಂದಿರು, ಸಾರ್ವಜನಿಕರೊಂದಿಗೆ ಖುದ್ದು ಮಾತನಾಡಿದರಲ್ಲದೆ, ಹೆರಿಗೆಗೆ ಆಗಮಿಸಿದಾಗ ಗರ್ಭಿಣಿಯ ಅರೋಗ್ಯದ ಸ್ಥಿರತೆ, ಪ್ರತಿ ತಿಂಗಳು ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗರ್ಭಿಣಿಯರ ತಪಾಸಣೆಯ ಕಾರ್ಯವಿಧಾನ, ತಾಯಿಕಾರ್ಡ್‌ಗಳು, ಹೆರಿಗೆ ಕೊಠಡಿ, ವಾರ್ಡ್, ಪ್ರಯೋಗಾಲಯ, ದಾಖಲಾತಿಗಳ ನಿರ್ವಹಣೆ ಪರಿಶೀಲಿಸಿ, ಗರ್ಭಿಣಿ ತಾಯಂದಿರಲ್ಲಿ ಕಂಡು ಬರುತ್ತಿರುವ ಅಧಿಕ ರಕ್ತದೊತ್ತಡದ ನಿಯಂತ್ರಣಕ್ಕಾಗಿ, ಆಹಾರ ಪದ್ಧತಿ, ಚಿಕಿತ್ಸಾ ವಿಧಾನಗಳು ಹಾಗೂ ಜೀವನ ಶೈಲಿಯಲ್ಲಿ ಮಾಡಬಹುದಾದ ಬದಲಾವಣೆಗಾಗಿ ಈಗಾಗಲೇ ರಾಜ್ಯಮಟ್ಟದಿಂದ ಪಡೆಯುತ್ತಿರುವ ತಾಂತ್ರಿಕ ಸಹಾಯ ವನ್ನು ಪರಿಣಾಮಕಾರಿಯಾಗಿ ವಿಶ್ಲೇಷಣೆ ಕೈಗೊಂಡು, ಈ ಭಾಗದ ಜನರಿಗೆ ಹೆಚ್ಚಿನ ಜಾಗೃತಿ ನೀಡಬೇಕೆಂದು ಸೂಚಿಸಿದರು.

ಅಂಗನವಾಡಿ ಕೇಂದ್ರ - 23ಕ್ಕೆ ಭೇಟಿ ನೀಡಿ, ತೀವ್ರ ಅಪೌಷ್ಠಿಕ ತೆಯಿಂದ ಬಳಲುತ್ತಿರುವ ಮಕ್ಕಳನ್ನು ಮೇಲ್ವಿಚಾರಣೆ ಮಾಡಬೇಕು. ತೋಕ, ಮೊಟ್ಟೆ ವಿತರಣೆ ಹಾಗೂ ಪೌಷ್ಠಿಕಾಂಶವುಳ್ಳ ಪದಾರ್ಥಗಳನ್ನು ಪೂರೈಸಬೇಕು. ಗರ್ಭೀಣಿ ಬಾಣಂತಯರಿಗೆ ಸರ್ಮಪಕವಾಗಿ ಪೌಷ್ಠಿಕ ವಿತರಿಸಬೇಕು. ಶಾಲಾ ಪೂರ್ವ ಶಿಕ್ಷಣ ತರಬೇತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರತಿ ದಿನ ಮಕ್ಕಳ ಹಾಜರಾತಿ ಸಂಖ್ಯೆ ಪರಿಶೀಲಿಸಿ, ಅಂಗನವಾಡಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚಿಸಿದರು.

ವಿಬಿಜಿ ರಾಮ್ ಜಿ ಕಾಮಗಾರಿ ಪರಿಶೀಲನೆ: ಹರವಿ ಗ್ರಾಮದಲ್ಲಿ ನಡೆಯುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿ ಕಾರ್ಮಿಕರೊಂದಿಗೆ ವಿ.ಬಿ.ಜಿ. ರಾಮ್ ಜಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಕುರಿತು ಸಂವಾದ ನಡೆಸಿದರು. ದುಡಿವ ಕಾರ್ಮಿಕ ಕೈಗಳಿಗೆ ಕೆಲಸ ನೀಡಲು ಹಾಗೂ ಎಲ್ಲ ಅರ್ಹ ಬಡ ಗ್ರಾಮೀಣರಿಗೆ ಉದ್ಯೋಗ ಖಾತ್ರಿಪಡಿಸಲು ವಿಬಿ ಜಿ-ರಾಮ್ ಜಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿದ ಕೂಲಿಕಾರರ ಪ್ರತಿ ಕುಟುಂಬಕ್ಕೆ 125 ದಿನ ಕೂಲಿ ಕೆಲಸ ಒದಗಿಸಲಾಗುತ್ತಿದ್ದು, ಕೆಲಸ ಚೆನ್ನಾಗಿ ಮಾಡಬೇಕೆಂದು ಸೂಚಿಸಿದರು. ನಂತರ ಕೂಲಿಕಾರರ ಸಮಸ್ಯೆಗಳನ್ನು ಅಲಿಸಿದರು.

ತದನಂತರ ಹಿರೇಹಣಗಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಿರುವ ಪರಿಶೀಲಿಸುತ್ತ ಪ್ರತಿ ದಿನ ಕುಡಿಯುವದಕ್ಕೆ ನೀರು ಪೂರೈಕೆ ಹಾಗೂ ನಳ್ಳದ ತೆರಿಗೆ ಪಾವತಿಸುವ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.

ಮಕ್ಕಳೊಂದಿಗೆ ಸಂವಾದ: ನಂತರ ಕವಿತಾಳ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಪರಿಶೀಲಿಸುತ್ತ, ಮಕ್ಕಳಿಗೆ ಗಣಿತ ವಿಷಯದ ಬಗ್ಗೆ ಬೋಧನೆ ಮಾಡಿದರು. ಮುಂದಿನ ಎಸ್. ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಅಧ್ಯಯನ ಮಾಡಿ ತಾಲೂಕಿಗೆ ಕೀರ್ತಿ ತರಬೇಕು. ಬಿಸಿಯೂಟ ಚೆನ್ನಾಗಿರಬೇಕು, ಮೊಟ್ಟೆ, ಹಾಲು ವಿತರಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡದರು.

(ಎಟಿಎಲ್): ಅಟಲ್ ಟಿಂಕರಿಂಗ್ ಲ್ಯಾಬ್ (ಎಟಿಎಲ್) ಮಕ್ಕಳ ಮಾಡಿರುವ ಮಾದರಿಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಸೆನ್ಸರ್ , ಕ್ಯೂರ್ ಕೋಡ್, ಸ್ಮಾರ್ಟ್ ವಿದ್ಯಾಲಯ, ಮೆಕಾನಿಕ್ ಹಾಗೂ ತ್ರೀಡಿ ಪ್ರಿಂಟರ್ ಮಾದರಿಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಪಂ,ತಾಪಂ ಹಾಗೂ ಗ್ರಾಪಂನ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.