ಮಕ್ಕಳನ್ನು ದೇಶ ಸೇವೆಗೆ ಸಿದ್ಧಗೊಳಿಸಿ: ನಾ.ಸೋಮೇಶ್ವರ್

| Published : Jan 19 2024, 01:47 AM IST

ಸಾರಾಂಶ

ಪೋಷಕರು ತಮ್ಮ ಮಕ್ಕಳನ್ನು ಕೇವಲ ಡಾಕ್ಟರ್, ಎಂಜಿನಿಯರ್‌ ಆಗಿಸುವ ವ್ಯಾಮೋಹ ಬಿಟ್ಟು ಭಾರತೀಯ ಸೈನ್ಯಕ್ಕೆ ಸೇರಿಸುವ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರುಗೊಳಿಸಿ ದೇಶ ಸೇವೆಗೆ ಸಿದ್ಧಗೊಳಿಸಬೇಕು ಎಂದು ಥಟ್ ಅಂತ ಹೇಳಿ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಡಾ. ನಾ.ಸೋಮೇಶ್ವರ್ ಹೇಳಿದರು.

ಜೇಸಿಐ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪೋಷಕರು ತಮ್ಮ ಮಕ್ಕಳನ್ನು ಕೇವಲ ಡಾಕ್ಟರ್, ಎಂಜಿನಿಯರ್‌ ಆಗಿಸುವ ವ್ಯಾಮೋಹ ಬಿಟ್ಟು ಭಾರತೀಯ ಸೈನ್ಯಕ್ಕೆ ಸೇರಿಸುವ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರುಗೊಳಿಸಿ ದೇಶ ಸೇವೆಗೆ ಸಿದ್ಧಗೊಳಿಸಬೇಕು ಎಂದು ಥಟ್ ಅಂತ ಹೇಳಿ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಡಾ. ನಾ.ಸೋಮೇಶ್ವರ್ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಬುಧವಾರ ಆಯೋಜಿಸಿದ್ದ 2024ನೇ ಸಾಲಿನ ನೂತನ ಪದಾಧಿಕಾರಿ ಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ 18-35 ವಯಸ್ಸಿನ ಶೇ.40ರಷ್ಟು ಯುವಜನರಿದ್ದು ಈ ಪ್ರಮಾಣ ಬೇರೆ ಯಾವ ದೇಶದಲ್ಲೂ ಇಲ್ಲ. ಪ್ರತೀ ವರ್ಷ ದೇಶದ 16 ಲಕ್ಷ ಎಂಜಿನಿಯರ್‌ಗಳು ಓದು ಮುಗಿಸಿದರೂ ಕೇವಲ 1 ಲಕ್ಷ ಜನ ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ ಎಂದರು.

ಯುವಜನರು ಸೇನೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿದರೆ ದೇಶ ಸೇವೆ ತೃಪ್ತಿ ಕೋಟಿ ಸಂಪಾದನೆ ಮಾಡಿದರೂ ಸಿಗಲ್ಲ. ಈ ಹಿನ್ನೆಲೆಯಲ್ಲಿ ಜೇಸಿ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಉಚಿತವಾಗಿ ಕೊಡಿಸಿ ಸಿದ್ಧಗೊಳಿಸಬೇಕಿದೆ. ಮೊಬೈಲ್‌ಗೆ ಹೆಚ್ಚು ಒತ್ತು ನೀಡುತ್ತಿರುವ ಯುವಜನರು ಇದರಿಂದ ಹೇಗೆ ಅಂತರ ಕಾಪಾಡಿ ಕೊಳ್ಳಬೇಕು? ಅದನ್ನು ಸೂಕ್ತವಾಗಿ ಬಳಸುವ ಕ್ರಮ, ಅದರಿಂದಾಗುವ ದುಷ್ಪರಿಣಾಮಗಳನ್ನು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತಜ್ಞರು ತರಬೇತಿ ನೀಡುತ್ತಾರೆ. ಜೇಸಿ ಸಂಸ್ಥೆ ಪ್ರತಿ ಕಾಲೇಜಿನಲ್ಲಿ ಈ ಕಾರ್ಯಕ್ರಮ ನಡೆಸಲಿ ಎಂದರು.ಮಕ್ಕಳನ್ನು ದೇಶದ ಸತ್ಪ್ರಜೆಯಾಗಿ ಮಾಡುವುದೇ ನಿಜವಾದ ಪಿತೃ ಋಣ. ಗುರು, ಆಚಾರ್ಯರು, ಹಿರಿಯ ನಾಗರಿಕರು ಉತ್ತಮ ವಾತಾವರಣದಲ್ಲಿ ಬದುಕುವಂತೆ ಮಾಡುವುದೇ ಆಚಾರ್ಯ ಋಣ ಎಂದರು. ಸ್ವಾರ್ಥ, ಪ್ರತಿಫಲ, ಗೌರವ, ಸನ್ಮಾನ ನಿರೀಕ್ಷಿಸದೆ ಮಾಡಿದ ಸಮಾಜ ಸೇವೆಗೆ ವಿಶೇಷ ಅರ್ಥ ದೊರೆಯುತ್ತದೆ ಎಂದರು.ನೂತನ ಅಧ್ಯಕ್ಷರಾಗಿ ಎನ್.ಶಶಿಧರ್ , ಕಾರ್ಯದರ್ಶಿಯಾಗಿ ಎಚ್.ಆರ್. ಶೃಜಿತ್ ,ಲೇಡಿ ಜೇಸಿ ಅಧ್ಯಕ್ಷೆಯಾಗಿ ಎಂ.ಆರ್. ಬಿಂದು , ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಅಂಕುಶ್ ಪೂಜಾರಿಅಧಿಕಾರ ಪಡೆದರು.

ಜೇಸಿ ವಲಯಾಧ್ಯಕ್ಷೆ ಆಶಾ ಜೈನ್, ಉಪಾಧ್ಯಕ್ಷೆ ವಿದ್ಯಾರಾಜು, ನಿಕಟಪೂರ್ವ ಅಧ್ಯಕ್ಷ ರಚನ್ ಜೆ.ಹುಯಿಗೆರೆ, ಕಾರ್ಯಕ್ರಮ ನಿರ್ದೇಶಕ ಯಶ್‌ಪಾಲ್, ಸ್ಥಾಪಕ ಅಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್ ಮತ್ತಿತರರು ಹಾಜರಿದ್ದರು.೧೮ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಜೇಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಥಟ್ ಅಂತ ಹೇಳಿ ಕ್ವಿಜ್ ಮಾಸ್ಟರ್ ಡಾ. ನಾ.ಸೋಮೇಶ್ವರ್ ಉದ್ಘಾಟಿಸಿದರು. ಶಶಿಧರ್, ಅಜಿತ್, ಆಶಾ ಜೈನ್, ವಿದ್ಯಾರಾಜು, ರಚನ್ ಇದ್ದರು.