ಸಾರಾಂಶ
ಹಂಸ ನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘದ 7ನೇ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು 'ಪಾರಾಯಣ ಪ್ರವೀಣ ಪ್ರಶಸ್ತಿ' ನೀಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ವಿಶ್ವ ಮಧ್ವ ಮಹಾ ಪರಿಷತ್ ಕಲಬುರ್ಗಿ ಘಟಕ ಅಡಿಯಲ್ಲಿ ಹಂಸ ನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘದ 7ನೇ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ''ಪಾರಾಯಣ ಪ್ರವೀಣ ಪ್ರಶಸ್ತಿ'' ನೀಡಲಾಗುತ್ತಿದೆ.ಫೆ.5ರಂದು ವಿದ್ಯಾಧೀಶತೀರ್ಥರು ಪಲಿಮಾರುಮಠ, ವಿದ್ಯಾರಾಜೇಶ್ವರತೀರ್ಥರು ಪಲಿಮಾರು ಮಠ (ಕಿರಿಯಪಟ್ಟ) ಅವರು ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ.
ಸಂಘದ ಸದಸ್ಯರು, ಅಕಾಲಿಕ ಮರಣಹೊಂದಿರುವ ಪತ್ರಕರ್ತ ದಯತೀರ್ಥ ಕಾಗಲಕರ್ ಸ್ಮರಣಾರ್ತ ನೀಡುವ ಈ ಪುರಸ್ಕಾರಕ್ಕೆ ಈ ಬಾರಿ ಪಾರಾಯಣ ಪ್ರವೀಣ ಪ್ರಶಸ್ತಿ ಗೆ ಹರೇರಾಮ ಪಾರಾಯಣ ಸಂಘದ ಸದಸ್ಯರಾದ ಜಗನ್ನಾಥ ಸಗರ ವರ್ಧನ ನಗರ ಮತ್ತು ಶ್ರೀ ಹನುಮಾನ ಪಾರಾಯಣ ಸಂಘ, ವಿಠ್ಠಲ ನಗರದ ಸದಸ್ಯರಾದ ವಿಶ್ವನಾಥ ಕುಲಕರ್ಣಿ ಇವರು ಭಾಜನರಾಗಿದ್ದಾರೆ. ಅಂದು ಹಿರಿಯ ಪಾರಾಯಣ ಸದಸ್ಯರಾದ ಶಾಮರಾವ ಭಂಕುರ ಶ್ರೀ ಪ್ರಶಾಂತ ಹನುಮಾನ ಪಾರಾಯಣ ಸಂಘ ಮತ್ತು ಶ್ರೀ ರಾಘವೇಂದ್ರ ರಾವ ದೇಶಮುಖ ಶ್ರೀ ವಿಷ್ಣು ಸಹಸ್ರ ನಾಮ ಪಾರಾಯಣ ಸಂಘ ಮತ್ತು ಕಿರಿಯರಲ್ಲಿ ಶ್ರೀ ವಿಷ್ಣು ಭರದ್ವಾಜ ಇವರನ್ನು ಕೂಡಾ ಸನ್ಮಾನಿಸಲಾಗುತ್ತದೆ.ಫೆ 5 ರಂದು ಬೆಳಿಗ್ಗೆ 8 ಗಂಟೆಗೆ ಸಾಮೂಹಿಕ ಪಾರಾಯಣ, 9.30 ಪ್ರಶಸ್ತಿ ಸಮಾರಂಭ 10.30 ಕ್ಕೆ ಪಲಿಮಾರು ಮಠಾಧೀಶರಿಂದ ಸೀತಾಂಜನೇಯ ಲಕ್ಷ್ಮಣ ಸಮೇತ ಶ್ರೀರಾಮಚಂದ್ರ ದೇವರ ಸಂಸ್ಥಾನ ಪೂಜೆ ನಂತರ ತೀರ್ಥ ಪ್ರಸಾದ ಕಾರ್ಯಕ್ರಮವು ಕರುಣೆಶ್ವರ ನಗರದ ಶ್ರೀ ಹನುಮಾನ ಮಂದಿರದಲ್ಲಿ ಇರುತ್ತದೆ ಎಂದು ಪಾರಾಯಣ ಸಂಘಗಳ ಸಂಚಾಲಕ ರವಿ ಲಾತೂರಕರ ಮತ್ತು ಅಧ್ಯಕ್ಷರಾದ ಪದ್ಮನಾಭ ಆಚಾರ್ಯ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.