ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಉಚಿತ ಕೊಡವ ಜಾನಪದ ಕಲೆಯಾದ ವಾಲಗತಾಟ್ ಕಲಿಕಾ ಶಿಬಿರದಲ್ಲಿ 100ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡರು.

ಶ್ರೀಮಂಗಲ: ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಉಚಿತ ಕೊಡವ ಜಾನಪದ ಕಲೆಯಾದ ವಾಲಗತಾಟ್ ಕಲಿಕಾ ಶಿಬಿರದಲ್ಲಿ 100ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡರು.

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಮಂಗಳವಾರ ನಡೆದ ಶಿಬಿರವನ್ನು ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಜಾನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಉದ್ಘಾಟಿಸಿ ಮಾತನಾಡಿ,. ಕೊಡವ ಜಾನಪದ ಕುಣಿತವಾದ ಪುತ್ತರಿ ಕೋಲಾಟ್, ಪರೆಯಕಳಿ, ಕಪ್ಪೆಯಾಟ್ ಇದೆಲ್ಲದರ ಮೂಲ ಬೇರು ವಾಲಗತಾಟ್ ಆಗಿದೆ. ನಮ್ಮ ಮಕ್ಕಳು ಇದನ್ನು ಕಲಿತು ಬೆಳೆಸಬೇಕು, ಹಿರಿಯರಿಂದ ಮಕ್ಕಳು ಕಲಿತು ಅನುಸರಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಜಾನಪದ ಕಲೆ ಹಸ್ತಾಂತರವಾಗುತ್ತದೆ ಎಂದರು.

ತೂಕ್ ಬೊಳಕ್ ಕಲೆ ಮತ್ತು ಸಾಹಿತ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಇಂತಹ ಶಿಬಿರದಿಂದ ಮೂಲ ವಾಲಗತಾಟ್ ಕಲಿತು ಆ ಪರಂಪರೆ ಮುಂದುವರಿಸಲು ಸಹಕಾರಿಯಾಗುತ್ತದೆ ಎಂದರು.

ಕೊಡವ ಜಾನಪದ ಪರಿಣತ ಕಲಾವಿದರಾದ ಮೈಸೂರಿನ ಕೂತoಡ ಮೊಣ್ಣಪ್ಪ, ಕುಲ್ಲಚಿರ ವಿನುತಾ ಕೇಸರಿ, ಸ್ಥಳೀಯರಾದ ಸುಳ್ಳಿಮಾಡ ಶಿಲ್ಪಾ, ಮೂಕಳೆರ ರಮೇಶ್, ಮಾಚಿಮಾಡ ಮಂದಣ್ಣ, ಕೊಣಿಯಂಡ ಮಂಜು ಮಾದಯ್ಯ ತರಬೇತಿ ನೀಡಿದರು.ಪೊನ್ನಂಪೇಟೆ ಸಂತ ಅಂತೋನಿ, ಅಪ್ಪಚ್ಛಕವಿ, ಟಿ. ಶೆಟ್ಟಿಗೇರಿಯ ರೂಟ್ಸ್, ಶ್ರೀಮಂಗಲ ಜೆ.ಸಿ. ಶಾಲೆ, ಅರ್ವತೋಕ್ಲುವಿನ ಸರ್ವ ದೈವತಾ ಶಾಲೆಯ 100ಕ್ಕೂ ಅಧಿಕ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಕೊಡವ ಸಮಾಜದ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೆಮಾಡ ಸುಧೀರ್, ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ ನಿರ್ದೇಶಕರಾದ ಕಳ್ಳಿಚಂಡ ಚಿಪ್ಪ ದೇವಯ್ಯ, ಕೊಣಿಯಂಡ ಸಂಜು ಸೋಮಯ್ಯ, ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ಮೂಕಳೆರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಗಂಗಮ್ಮ ಹಾಗೂ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ಗೌರವ ಕಾರ್ಯದರ್ಶಿ ಬಲ್ಲಡಿಚಂಡ ಕಸ್ತೂರಿ ಸೋಮಯ್ಯ, ಜಂಟಿ ಕಾರ್ಯದರ್ಶಿ ಮೂಕಳೆರ ಆಶಾ ಪೂಣಚ್ಚ, ಖಜಾಂಚಿ ಮೂಕಳೆರ ಪಟ್ಟು ಲೀಲಾವತಿ, ನಿರ್ದೇಶಕಿಯರಾದ, ಚೆಕ್ಕೇರ ವಾಣಿ ಸಂಜು, ಮಾಣಿಯಪಂಡ ಪಾರ್ವತಿ ಜೋಯಪ್ಪ, ಬಲ್ಯಮೀದೇರಿರ ಆಶಾ ಶಂಕರ್ ಹಾಜರಿದ್ದರು.