ಸಾರಾಂಶ
ಸಿಂದಗಿ: ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ನಾಡದೇವಿಯ ಭಾವಚಿತ್ರದೊಂದಿಗೆ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ರಾ.ಶಿ.ವಾಡೇದ ಅವರನ್ನು ಸಾರೋಟದಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ನಗರದ ಅಂಬೇಡ್ಕರ ವೃತ್ತ, ಟಿಪ್ಪು ಸುಲ್ತಾನ ವೃತ್ತದಿಂದ ಲಿಂ.ತೋಂಟದ ಡಾ. ಸಿದ್ದಲಿಂಗ ಸ್ವಾಮಿಗಳ ರಸ್ತೆ ಮಾರ್ಗವಾಗಿ ಸ್ವಾಮಿ ವಿವೇಕಾನಂದ ವೃತ್ತದಿಂದ ಎಚ್.ಜಿ.ಕಾಲೇಜಿನ ಮೈದಾನಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯ ಸಾನಿಧ್ಯವನ್ನು ಕನ್ನೋಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಆದಿಶೇಷ ಮಠದ ನಾಗರತ್ನ ರಾಜಯೋಗಿನಿ ವೀರರಾಜೇಂದ್ರ ಸ್ವಾಮೀಜಿ ವಹಿಸಿದ್ದರು.ಮೆರವಣಿಗೆಯಲ್ಲಿ ಶಾಸಕ ಅಶೋಕ ಮನಗೂಳಿ, ಗುರುಗೌಡ ಬಿರಾದಾರ, ಜಿಲ್ಲಾಧ್ಯಕ್ಷ ಹಾಸೀಂಪಿರ ವಾಲಿಕಾರ, ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಚಂದ್ರಶೇಖರ ನಾಗರಬೆಟ್ಟ, ಎಂ.ಎಂ.ಹಂಗರಗಿ, ಅಶೋಕ ಅಲ್ಲಾಪೂರ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ಗಾಯಕವಾಡ, ಅಶೋಕ ತೆಲ್ಲೂರ, ಎಸ್.ಎಂ.ಬಿರಾದಾರ, ಪಂಡಿತ ಯಂಪೂರೆ, ಸಂತೋಷ ಮಣಗಿರಿ, ಮಹಾನಂದಾ ಬಮ್ಮಣ್ಣಿ, ಸುನಂದಾ ಯಂಪೂರೆ, ಅಂಬಿಕಾ ಪಾಟೀಲ, ಶೈಲಜಾ ಸ್ತಾವರಮಠ, ಶಿಲ್ಪಾ ಕುದರಗೊಂಡ, ನೀಲಮ್ಮ ಯಡ್ರಾವಿ, ಗುರಣ್ಣಗೌಡ ಬಿರಾದಾರ, ರವಿ ನಾಯ್ಕೋಡಿ, ಶಂಕರಲಿಂಗಯ್ಯ ಹಿರೇಮಠ, ವೆಂಕಟೇಶ ಗುತ್ತೇದಾರ, ಪ್ರವೀಣ ಕಂಟಿಗೊಂಡ, ಪರುಶುರಾಮ ಕೂಚಬಾಳ, ರಾಜಕುಮಾರ ಭಾಸಗಿ, ಭೀಮು ವಾಲಿಕಾರ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.