೪ರಂದು ಮಾಧ್ಯಮ ಒಕ್ಕೂಟದಿಂದ ಪತ್ರಿಕಾ ದಿನಾಚರಣೆ

| Published : Aug 01 2024, 12:16 AM IST

ಸಾರಾಂಶ

Press day celebration by media union on 4th

ಚಳ್ಳಕೆರೆ: ಕರ್ನಾಟಕ ಮಾದ್ಯಮ ಮಹಾಒಕ್ಕೂಟ ಚಳ್ಳಕೆರೆ ಶಾಖೆ ವತಿಯಿಂದ ಭಾನುವಾರ ಬೆಳಗ್ಗೆ ೧೧.೩೦ಕ್ಕೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಡಿ.ನಿಂಗಪ್ಪ ತಿಳಿಸಿದ್ಧಾರೆ. ಅವರು, ಈ ಬಗ್ಗೆ ಮಾಹಿತಿ ನೀಡಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ, ಸಂಸದ ಗೋವಿಂದ ಎಂ.ಕಾರಜೋಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶಾಸಕ ಟಿ.ರಘುಮೂರ್ತಿ ನೂತನ ಶಾಖೆಯನ್ನು ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಕರುನಾಡ ಜೀಯಾವುಲ್ಲಾ, ಕಥೆಗಾರ ಮೊದೂರು ತೇಜ, ಮಾಜಿ ಸಚಿವ ಎಚ್.ಆಂಜನೇಯ, ಎಂಎಲ್‌ಸಿ ಕೆ.ಎಸ್.ನವೀನ್, ಶಾಸಕ ಕೆ.ಸಿ.ವೀರೇಂದ್ರ, ಹಿರಿಯ ಸಾಹಿತಿ ತಿಪ್ಪಣ್ಣ ಮರಿಕುಂಟೆ, ತಹಸೀಲ್ದಾರ್‌ ರೇಹಾನ್‌ ಪಾಷ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಸಂಸ್ಥಾಪಕ ಅಧ್ಯಕ್ಷ ಕೆ.ಶಿವಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಈಶ್ವರಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟ ಅಧ್ಯಕ್ಷ ಡಿ.ಗಂಗಾಧರ ವಹಿಸುವರು.

------