ಪತ್ರಿಕಾ ದಿನಾಚರಣೆ: ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರ ಆಯ್ಕೆ

| Published : Jul 16 2024, 12:30 AM IST

ಪತ್ರಿಕಾ ದಿನಾಚರಣೆ: ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ವಿವಿಧ ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರನ್ನು ಆಯ್ಕೆ ಮಾಡಿದೆ. ಜು.೨೧ ರಂದು ನಗರದ ವರ್ತಕರ ಭವನದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ವಿವಿಧ ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರನ್ನು ಆಯ್ಕೆ ಮಾಡಿದೆ. ಜು.೨೧ ರಂದು ನಗರದ ವರ್ತಕರ ಭವನದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ನಗರದ ರಾಮಸಮುದ್ರದ ಪುಟ್ಟಮಲ್ಲಪ್ಪ ತಮ್ಮ ತಂದೆ ಮಾಜಿ ಎಂಎಲ್‌ಸಿ ದಿ.ಆರ್.ಪಿ.ರೇವಣ್ಣ ನೆನಪಿನಾರ್ಥ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಗೆ ದೂರದರ್ಶನ ನ್ಯೂಸ್‌ ಜಿಲ್ಲಾ ವರದಿಗಾರ ಗೂಳೀಪುರ ನಂದೀಶ್ ಅವರ ’ಬಾಳೆ ಮೌಲ್ಯವರ್ಧನೆಯಲ್ಲಿ ಉಮ್ಮತ್ತೂರಿನ ಪ್ರಗತಿಪರ ರೈತ ಮಹಿಳೆ ವರ್ಷರವರ ಸಾಧನೆ’ ಕುರಿತ ವಿಶೇಷ ಕೃಷಿ ವರದಿ ಆಯ್ಕೆಯಾಗಿದೆ. ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶಕುಮಾರ್ ಅವರು ದಿ.ಆರ್.ಸಿದ್ದೇಗೌಡ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿಗೆ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಎಸ್.ಎನ್.ವಿಜಯಕುಮಾರ್ ಅವರ ’ವಾಲೆ ಮಾದಮ್ಮ’ ಎಂಬ ವರದಿ ಆಯ್ಕೆಯಾಗಿದೆ. ನಗರದ ವಿದ್ಯುತ್ ಗುತ್ತಿಗೆದಾರ ಹೊಸೂರು ಜಗದೀಶ್ ತಮ್ಮ ತಂದೆಯ ಸ್ಮರಣಾರ್ಥ ಸ್ಥಾಪಿಸಿರುವ ದಿ.ಸಿದ್ದಲಿಂಗದೇವರು ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಟಿವಿ೯ ವಿಡಿಯೋ ಜರ್ನಲಿಸ್ಟ್‌ ಎ.ಆರ್. ಸಂಜಯ್‌ಕುಮಾರ್ ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಉತ್ತಮ ಸೇವೆಯನ್ನು ಪರಿಗಣಿಸಿ ವಿಶೇಷ ದತ್ತಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಬಾರಿ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ತಮ್ಮ ತಂದೆ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಗೆ ಗುಂಡ್ಲುಪೇಟೆಯ ಪ್ರಜಾನುಡಿ ವರದಿಗಾರ ಎನ್.ರಾಜೇಶಭಟ್ ಆಯ್ಕೆಯಾಗಿದ್ದಾರೆ. ಯಳಂದೂರು ತಾಲೂಕು ಮಾಂಬಳ್ಳಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತಗಾರ ಎಚ್.ಫಲ್ಗುಣ ಅವರು ತಮ್ಮ ತಂದೆ ಎನ್.ಹೊಂಬಾಳಯ್ಯ, ತಾಯಿ ಪುಟ್ಟನಂಜಮ್ಮ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಗೆ ರೇಷ್ಮೆನಾಡು ಪತ್ರಿಕೆಯ ಯಳಂದೂರು ವರದಿಗಾರ ಎನ್.ನಾಗೇಂದ್ರ ಆಯ್ಕೆಯಾಗಿದ್ದಾರೆ. ಗುತ್ತಿಗೆದಾರರಾದ ಕಾಗಲವಾಡಿ ಮಹದೇವಸ್ವಾಮಿ ತಮ್ಮ ತಂದೆ ಯಜಮಾನ್ ಟಿ.ಮಹದೇವಯ್ಯ, ತಾಯಿ ಎಂ.ಎಸ್.ಸೀತಮ್ಮ ಹೆಸರಿನಲ್ಲಿ ಸ್ಥಾಪಿಸಿರು ದತ್ತಿ ಪ್ರಶಸ್ತಿಗೆ ಪ್ರಜಾವಾಣಿಯ ಹನೂರು ತಾಲೂಕು ವರದಿಗಾರ ಬಸವರಾಜು, ಮಾಜಿ ಸಚಿವ ಎನ್.ಮಹೇಶ್ ತಮ್ಮ ಪತ್ನಿ ಹಾಗೂ ಲೇಖಕಿ ದಿ.ಎಚ್.ಕೆ.ವಿಜಯಾ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಗೆ ಆಂದೋಲನದ ಚಾ.ನಗರ ವರದಿಗಾರ ಬದನಗುಪ್ಪೆ ಪ್ರಸಾದ್, ಯಳಂದೂರಿನ ಅಶ್ವಿನಿ ಆಸ್ಪತ್ರೆಯ ಮಾಲೀಕರಾದ ಡಾ.ಶಶಿಕಲಾ-ಡಾ.ರಮೇಶ್‌ಉಡುಪ ವೈದ್ಯ ದಂಪತಿ ಸ್ಥಾಪಿಸಿರುವ ಅಶ್ವಿನಿ ಆಸ್ಪತ್ರೆ ದತ್ತಿ ಪ್ರಶಸ್ತಿಗೆ ವಿಜಯವಾಣಿಯ ಯಳಂದೂರು ವರದಿಗಾರ ಡಿ.ಪಿ.ಮಹೇಶ್ ಆಯ್ಕೆಯಾಗಿದ್ದಾರೆ. ಮಾಜಿ ಶಾಸಕ ಎಸ್.ಬಾಲರಾಜು ತಮ್ಮ ತಂದೆ ಮದ್ದೂರಿನ ಎಂ.ಸಂಜೀವಯ್ಯ, ತಾಯಿ ಎಸ್.ವಿ.ಲಕ್ಷಮ್ಮ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಸ್ಮಾರಕ ಪ್ರಶಸ್ತಿಗೆ ಪ್ರಜಾನುಡಿಯ ಕೊಳ್ಳೇಗಾಲ ತಾಲೂಕು ವರದಿಗಾರ ಸತ್ತೇಗಾಲ ಎಸ್.ರಾಜಶೇಖರ್, ಯಳಂದೂರು ತಾಲೂಕಿನ ವಡಗೆರೆ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಎ.ಕುಮಾರ್ ತಮ್ಮ ತಾತನ ಸ್ಮರಣಾರ್ಥ ಸ್ಥಾಪಿಸಿರುವ ವಡಗೆರೆ ದಿ.ಪಟೇಲ್‌ಚಾಮೇಗೌಡ ಸ್ಮಾರಕ ದತ್ತಿ ಪ್ರಶಸ್ತಿಗೆ ಹನೂರು ತಾಲೂಕಿನ ಮೈಸೂರು ಮಿತ್ರ ವರದಿಗಾರ ಸೋಮಶೇಖರ್ ಆಯ್ಕೆಯಾಗಿದ್ದಾರೆ. ಚಾಮರಾಜನಗರದ ರೇಷ್ಮೆನಾಡು ಪತ್ರಿಕೆ ಸಂಪಾದಕಿ ಸವಿತಾ ಜಯಂತ್ ತಮ್ಮ ತಂದೆ ದಿ.ಸದಾಶಿವಗಟ್ಟವಾಡಿಪುರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಗೆ ಆಂದೋಲನ ದಿನಪತ್ರಿಕೆ ವಿತರಕ ಎಲ್.ಶಿವಲಿಂಗಮೂರ್ತಿ, ಸಂತೇಮರಹಳ್ಳಿಯ ಎಂ.ಪಿ. ಮಾದಪ್ಪ ತಮ್ಮ ತಂದೆ ಹೊಸಹಟ್ಟಿ ಪುಟ್ಟಸುಬ್ಬಪ್ಪ, ತಾಯಿ ದಿ.ರೇವಮ್ಮ ಸ್ಮಾರಕ ಪ್ರಶಸ್ತಿಗೆ ಗುಂಡ್ಲುಪೇಟೆ ತಾಲ್ಲೂಕಿನ ಮೈಸೂರುಮಿತ್ರ ವರದಿಗಾರ ಸೋಮಶೇಖರ್ ಆಯ್ಕೆಯಾಗಿದ್ದಾರೆ. ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ತಮ್ಮ ತಂದೆ ಬಿ.ರಾಚಯ್ಯ, ತಾಯಿ ಶ್ರೀಮತಿ ಗೌರಮ್ಮ ಎಜುಕೇಷನಲ್ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಕೊಳ್ಳೇಗಾಲದ ನಿಂಪುವಾರ್ತೆ ಪತ್ರಿಕೆಯ ಸಂಪಾದಕ ನಿಂಪುರಾಜೇಶ್ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್‌ ಲಕ್ಕೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.