ಪತ್ರಿಕಾ ವಿತರಕರ ಸಮ್ಮೇಳನದ ಲಾಂಛನ ಬಿಡುಗಡೆ

| Published : Aug 08 2024, 01:39 AM IST

ಸಾರಾಂಶ

ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನವನ್ನು ಚಿತ್ರದುರ್ಗದ ಅನುಭವ ಮಂಟಪದಲ್ಲಿ ಸೆ. 8ರಂದು ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್‌ಮನ್​ ಡಾ. ವಿಜಯ ಸಂಕೇಶ್ವರ ಅವರಿಗೆ ಆಹ್ವಾನ ನೀಡಲಾಯಿತು.

ಹುಬ್ಬಳ್ಳಿ:

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರು, ವಿತರಕರ ಸಂಘದ ಆಶ್ರಯದಲ್ಲಿ ಪತ್ರಿಕಾ ವಿತರಕರ 4ನೇ ರಾಜ್ಯ ಸಮ್ಮೇಳನವನ್ನು ಚಿತ್ರದುರ್ಗದ ಅನುಭವ ಮಂಟಪದಲ್ಲಿ ಸೆ. 8ರಂದು ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್‌ಮನ್​ ಡಾ. ವಿಜಯ ಸಂಕೇಶ್ವರ ಅವರಿಗೆ ಆಹ್ವಾನ ನೀಡಲಾಯಿತು.

ನಗರದ ವಿಆರ್​ಎಲ್​ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಡಾ. ಸಂಕೇಶ್ವರ ಅವರನ್ನು ಭೇಟಿ ಮಾಡಿದ ಒಕ್ಕೂಟದ ಅಧ್ಯಕ್ಷ ಕೆ. ಶಂಭುಲಿಂಗ ಹಾಗೂ ಇತರ ಪದಾಧಿಕಾರಿಗಳು ಸಮ್ಮೇಳನದ ಮಾಹಿತಿ ನೀಡಿದರು. ಒಕ್ಕೂಟದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದ ಅವರು, ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ವಿತರಕರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಹಾಗೂ ಶಾಸಕರನ್ನು ಆಹ್ವಾನಿಸಲಾಗಿದೆ. ವಿತರಕರ ಹಬ್ಬವಾಗಿ ಆಚರಿಸಲಾಗುವ ಕಾರ್ಯಕ್ರಮದ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಬೇಕೆಂದು ಸಹ ಅವರು ಮನವಿ ಮಾಡಿದರು.

ಈ ವೇಳೆ ಸಮ್ಮೇಳನದ ಲಾಂಛನವನ್ನು ಡಾ. ವಿಜಯ ಸಂಕೇಶ್ವರ ಅವರು ಬಿಡುಗಡೆಗೊಳಿಸಿದರು. ಒಕ್ಕೂಟದ ಕಾರ್ಯದರ್ಶಿ ವಾಸುದೇವ ನಾದೂರ, ದಾವಣಗೆರೆ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಚಿತ್ರದುರ್ಗ ಸಂದ ಉಪಾಧ್ಯಕ್ಷ ಜಿ.ಟಿ. ಮಲ್ಲಿಕಾರ್ಜುನ, ಹುಬ್ಬಳ್ಳಿಯ ಮನೋಹರ ಪರ್ವತಿ, ಧಾರವಾಡದ ಶಿವು ಹಲಗಿ, ನಾಗರಾಜ ಕುಲಕರ್ಣಿ, ಶಿವರಾಂ ಶಿರಗುಪ್ಪಿ, ಹನಮಂತ ಮೆಣಸಿನಕಾಯಿ, ರಮೇಶ ಜಿತೂರಿ, ಸಿ.ಎಸ್​. ಹಿರೇಮಠ, ವಿನೋದ ರತನ ಇತರರು ಇದ್ದರು.