ಹೃದಯ ಕಾಯಿಲೆ ತಡೆಗೆ ಮುಂಜಾಗ್ರತೆ ಅತ್ಯಗತ್ಯ

| Published : Apr 22 2025, 01:46 AM IST

ಸಾರಾಂಶ

ಮನುಷ್ಯನ ಜೀವನ ಯಾಂತ್ರಿಕತೆಯತ್ತ ಸಾಗಿದೆ. ಹೀಗಾಗಿ ಇಂದು ಅನೇಕ ರೀತಿಯ ಕಾಯಿಲೆಗಳಿಗೆ ಒಳಗಾಗುತ್ತಿದ್ದೇವೆ. ಆದ್ದರಿಂದ ಸಣ್ಣವರು, ದೊಡ್ಡವರು ಎನ್ನದೇ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ಹೃದಯ ತಪಾಸಣೆಗೆ ಒಳಪಡಬೇಕಾದ ಅಗತ್ಯವಿದೆ ಎಂದು ವಿಜಯಪುರದ ಆರೋಗ್ಯ ಧಾಮದ ಆಸ್ಪತ್ರೆಗೆ ಮುಖ್ಯಸ್ಥರು ಹಾಗೂ ಖ್ಯಾತ ಹೃದಯ ರೋಗ ತಜ್ಞರಾದ ಡಾ.ಶಂಕರಗೌಡ ಪಾಟೀಲ(ಯಾಳಗಿ) ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮನುಷ್ಯನ ಜೀವನ ಯಾಂತ್ರಿಕತೆಯತ್ತ ಸಾಗಿದೆ. ಹೀಗಾಗಿ ಇಂದು ಅನೇಕ ರೀತಿಯ ಕಾಯಿಲೆಗಳಿಗೆ ಒಳಗಾಗುತ್ತಿದ್ದೇವೆ. ಆದ್ದರಿಂದ ಸಣ್ಣವರು, ದೊಡ್ಡವರು ಎನ್ನದೇ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ಹೃದಯ ತಪಾಸಣೆಗೆ ಒಳಪಡಬೇಕಾದ ಅಗತ್ಯವಿದೆ ಎಂದು ವಿಜಯಪುರದ ಆರೋಗ್ಯ ಧಾಮದ ಆಸ್ಪತ್ರೆಗೆ ಮುಖ್ಯಸ್ಥರು ಹಾಗೂ ಖ್ಯಾತ ಹೃದಯ ರೋಗ ತಜ್ಞರಾದ ಡಾ.ಶಂಕರಗೌಡ ಪಾಟೀಲ(ಯಾಳಗಿ) ಹೇಳಿದರು.

ತಾಲೂಕಿನ ಯಾಳವಾರ ಗ್ರಾಮದ ಸೋಮೇಶ್ವರ ನವ ಕುಟೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ವಿಜಯಪುರದ ಆರೋಗ್ಯಧಾಮ ಹೃದಯ ಆಸ್ಪತ್ರೆ, ಶರಣಮ್ಮ ಗೌಡತಿ ಗು.ನಾಡಗೌಡ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದೇವಸ್ಥಾನ ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಹಾಗೂ ಹೃದಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು ಇಂದಿನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಆರೋಗ್ಯ ರಕ್ಷಣೆ ಕುರಿತಂತೆ ಯಾರು ಚಿಂತಿಸುವುದಿಲ್ಲ. ಹಣ ಸಾಕಷ್ಟು ಗಳಿಸಬಹುದು. ಆದರೆ, ಹೋದ ಪ್ರಾಣವನ್ನು ಎಷ್ಟೇ ಹಣ ಕೊಟ್ಟರು ಮರಳಿ ತರಲು ಸಾಧ್ಯವಾಗಲಾರದು. ಎಲ್ಲರೂ ಪ್ರಾಥಮಿಕ ಹಂತದಲ್ಲಿ ಮುಂಜಾಗ್ರತಾ ಕ್ರಮವಾಗಿ ತಪಾಸಣೆಗೊಳಪಡಬೇಕು ಎನ್ನುವ ಸದುದ್ದೇಶದಿಂದ ಯಾವುದೇ ಆರ್ಥಿಕ ವೆಚ್ಚವಿಲ್ಲದೆ ನಮ್ಮ ಸಂಸ್ಥೆ ಕ್ಷೇತ್ರದ ಹಲವಾರು ಭಾಗಗಳಲ್ಲಿ ತಂದೆಯವರ ಮಾರ್ಗದರ್ಶನದಲ್ಲಿ ಇಂತಹ ಶಿಬಿರಗಳ ಮೂಲಕ ಸಂಪೂರ್ಣ ಸಮಾಜ ಸೇವಾ ಕಾರ್ಯಕ್ಕೆ ಮುಂದಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.ಸಂದರ್ಭದಲ್ಲಿ ಡಾ.ಎಸ್.ಎಸ್.ಪಾಟೀಲ, ಡಾ.ಕಾಚೂರ ಹಾಗೂ ಮುಖಂಡರಾದ ಸಂಗನಗೌಡ ಹರನಾಳ ಮಾತನಾಡಿ, ಗ್ರಾಮೀಣ ಭಾಗದ ಜನರು ಹೃದಯಕ್ಕೆ ಸಂಬಂಧಿಸಿದ ಯಾವುದೇ ರೀತಿಯಲ್ಲಿ ಕಾಯಿಲೆಯ ಲಕ್ಷಣಗಳು ಕಂಡು ಬಂದಲ್ಲಿ, ನಿರಾಸಕ್ತಿ ತೋರದೆ ತಕ್ಷಣವೇ ವೈದ್ಯರ ಬಳಿ ತಪಾಸಣೆಗೊಳಪಡಬೇಕು. ಇದರಿಂದ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬಹುದಾಗಿದೆ ಹಾಗೂ ಈ ರೀತಿಯ ಉಚಿತ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಿಬಿರದಲ್ಲಿ ಉಚಿತ ರಕ್ತ ತಪಾಸಣೆ, ಇಸಿಜಿ, ಬಿಪಿ, ಅವಶ್ಯವಿದ್ದವರಿಗೆ ಮಾತ್ರೆಗಳ ಉಚಿತ ವಿತರಣೆ ಹಾಗೂ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಜನರು ಉಚಿತ ಶಿಬಿರದ ತಪಾಸಣೆಯ ಸದುಪಯೋಗಪಡಿಸಿಕೊಂಡರು.ಕಾರ್ಯಕ್ರಮದ ಉದ್ಘಾಟನೆಯನ್ನು ಮುಖಂಡರಾದ ರಾಜುಗೌ ಡ ನಾಡಗೌಡರು ನೆರವೇರಿಸಿ ಮಾತನಾಡಿದ ಅವರು, ರಕ್ತದಾನ ಶ್ರೇಷ್ಠದಾನ ಎಂಬುವುದನ್ನು ಅರಿತು ರಕ್ತದಾನ ಮಾಡಿದ ಎಲ್ಲರಿಗೂ ಅಭಿನಂದನೆಯ ಪತ್ರ ವಿತರಣೆ ಮಾಡಿದರು ಹಾಗೂ ಶಿಬಿರದಲ್ಲಿ ಸುಮಾರು 35 ಯುನಿಟ್ ರಕ್ತವನ್ನು ದಾನ ಮಾಡಿದರು ಎಂದು ಮಾಹಿತಿ ನೀಡಿದರು.ರಾತ್ರಿ ನಾಟಕ ಕಲಿಯುಗದಲ್ಲಿ ಘರ್ಜಿಸಿದ ಕರ್ಣಾರ್ಜುನರು ಎಂಬ ಸುಂದರ ಸಾಮಾಜಿಕ ನಾಟಕವನ್ನು ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ) ಉದ್ಘಾಟಿಸಿ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ದೇವೇಂದ್ರ ಬಡಿಗೇರ, ಡಾ.ಶ್ವೇತಾ ತೋಳಬಂದಿ, ಎಸ್.ಎನ್.ತಬ್ಬಣ್ಣವರ, ಗ್ರಾಮದ ಪ್ರಮುಖರು, ಗಣ್ಯರು, ಶಿಬಿರಾರ್ಥಿಗಳು, ದೇವಸ್ಥಾನ ಕಮಿಟಿಯ ಸದಸ್ಯರು, ವಿಜಯಪುರದ ಆರೋಗ್ಯಧಾಮ ಆಸ್ಪತ್ರೆಯ ಸಿಬ್ಬಂದಿ ವರ್ಗ, ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ವರ್ಗದವರು ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.