ಮಹಾಮಾರಿ ರೋಗಗಳಿಗೆ ಮುಂಜಾಗ್ರತೆ ಮದ್ದು: ಡಾ ಸಂಗೀತಾ

| Published : Jul 19 2024, 12:54 AM IST

ಸಾರಾಂಶ

ಡೆಂಘೀಯ ಹಾವಳಿಯಿಂದ ತೊಲಗಿಸಲು, ತೊಟ್ಟಿಗಳಲ್ಲಿ ಮತ್ತು ಪಾತ್ರೆಗಳಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೀತೆನಹುಳಿ ತಡೆಯುವ ಏಜೆಂಟ್‍ಗಳನ್ನು ಉಪಯೋಗಿಸಬೇಕು. ಮನೆಯೊಳಗೆ ಮತ್ತು ಹೊರಗೆ ತೊಲೆತಿಂಟೋಲ್ ಅಥವಾ ಮುಲಾಮುಗಳನ್ನು ಬಳಸಿ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಾನಿಯಿಂದ ಮುಕ್ತವಾಗಿಡಲು ಶ್ರಮಿಸಬೇಕೆಂದರು.

ಕನ್ನಡಪ್ರಭ ವಾರ್ತೆ ಆಳಂದ

ನೆರೆ ಹೊರೆಯಲ್ಲಿನ ಅಸ್ವಚ್ಛತೆ ಮತ್ತು ಕಾಲಕಾಲಕ್ಕೆ ಹವಾಮಾನದಲ್ಲಾಗುವ ಬದಲಾವಣೆ, ಸೇವಿಸುವ ನೀರು ಆಹಾರದಲ್ಲಿನ ಕಲಬೇರಕೆ ದುಷ್ಪರಿಣಾಮದಿಂದ ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಮುಂಜಾಗೃತೆ ಮದ್ದಾಗಿದ್ದು ಈ ಕ್ರಮವನ್ನು ಅನುಸರಿಸಬೇಕು ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗೀತಾ ಪಾಟೀಲ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ಹೆಬಳಿ ರಸ್ತೆಯಲ್ಲಿನ ಹೊಸ ಬಾಳನಗಲ್ಲಿಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡ ಮಲೇರಿಯಾ ವಿರೊಧಿ ಮಾಸಾಚರಣೆ ಅಂಗವಾಗಿ ಡೆಂಘೀ ಸೇರಿ ವಿವಿಧ ರೋಗಗಳ ತಡೆ ಜಾಗೃತೆ ಕಾರ್ಯಕ್ರಮದಲ್ಲಿ ಇಲಾಖೆಯ ಜಾಗೃತಿ ಕರಪತ್ರವನ್ನು ಬಿಡುಗಡೆ ಕೈಗೊಂಡು ಅವರು ಮಾತನಾಡಿದರು.

ಡೆಂಘೀಯ ಹಾವಳಿಯಿಂದ ತೊಲಗಿಸಲು, ತೊಟ್ಟಿಗಳಲ್ಲಿ ಮತ್ತು ಪಾತ್ರೆಗಳಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೀತೆನಹುಳಿ ತಡೆಯುವ ಏಜೆಂಟ್‍ಗಳನ್ನು ಉಪಯೋಗಿಸಬೇಕು. ಮನೆಯೊಳಗೆ ಮತ್ತು ಹೊರಗೆ ತೊಲೆತಿಂಟೋಲ್ ಅಥವಾ ಮುಲಾಮುಗಳನ್ನು ಬಳಸಿ. ನಾಗರಿಕರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಹಾನಿಯಿಂದ ಮುಕ್ತವಾಗಿಡಲು ಶ್ರಮಿಸಬೇಕೆಂದರು.

ಮಲೇರಿಯಾ ಜಿಲ್ಲಾ ಮೇಲ್ವಿಚಾರಕ ಶಫಿರ ಪಟೇಲ್, ತಾಲೂಕು ಮೇಲ್ವಿಚಾರಕ ಸಂಜೀವಕುಮಾರ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಶಿವಮ್ಮ ಪಾಟೀಲ, ಮಂಜುಳಾ, ಇಂದಿರಾ, ಉಮಾ, ಸೌಭಾಗ್ಯ, ಅರ್ಚನಾ, ವಂದನಾ, ರೇಣುಕಾ, ನಿರೀಕ್ಷಣಾಧಿಕಾರಿ ಕರಬಸಪ್ಪ ಮತ್ತು ಅರ್ಚನ, ಗ್ರೂಪ್ ಡಿ. ಶ್ರೀಶೈಲ, ಔಷಧಿ ವಿತರಣಾಕಾರ ಅವಿನಾಶ ಸಿಂಧೆ, ಸ್ಟಾಪ್‍ನರ್ಸ್ ಇಂದುಮತಿ ಉಪಸ್ಥಿತರಿದ್ದರು.