ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ತನ್ನದೆ ಸರ್ಕಾರದ ವಿರುದ್ದ ಶಾಸಕ ಕೊತ್ತೂರು ಮಂಜುನಾಥ್ ಅಸಮಾಧಾನ ಹೊರ ಹಾಕಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರದ ಕಾರ್ಯ ವೈಖರಿ ಹಾಗೂ ನಡೆತೆ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. ನಾನು ಶಾಸಕಾನಾಗಿ ಸರ್ಕಾರದ ಒಂದು ಭಾಗ, ಇವತ್ತು ಬೆಲೆ ಏರಿಕೆ ಜನರಿಗೆ ಹೊರೆಯಾಗುತ್ತಿರುವುದು ನಿಜ, ಟ್ಯಾಕ್ಸ್, ಜಿಎಸ್‌ಟಿ ಸೇರಿ ಮುದ್ರಾಂಕ ಶುಲ್ಕ ಹೆಚ್ಚಾಗಿದೆ ಎಂದರು.ವಿದ್ಯುತ್, ನೀರು ಎಲ್ಲವೂ ಹೆಚ್ಚಾಗಿದೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲಾ ಜಾಸ್ತಿಯಾಗುತ್ತಿರುವುದು ಒಳ್ಳೆಯದು, ಸರ್ಕಾರ ನಡಿಯಬೇಕಲ್ಲಾ, ಅಭಿವೃದ್ಧಿ ಆಗಬೇಕಾದರೆ ಇದೆಲ್ಲಾ ಬೆಲೆ ಏರಿಕೆ ಆಗಲೇಬೇಕು, ಇದೆಲ್ಲಾ ಗ್ಯಾರೆಂಟಿಗಳ ಎಫೆಕ್ಟ್ ಅಲ್ಲ ಎಂದು ಹೇಳಿದರು.ಸ್ಪೀಕರ್ ಸ್ಥಾನ ಗೌರವಿಸಬೇಕು
ಶಾಸಕ ಹರೀಶ್ ಪೂಂಜಾ ಸ್ಪೀಕರ್ ಕುರಿತು ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಧಾನಸಭೆ ಒಳಗೆ ಯಾವುದೇ ಜಾತಿ ಇರುವುದಿಲ್ಲ ಹೊರಗಡೆ ಜಾತಿ ಇರಬಹುದು, ಬಿಜೆಪಿ ಶಾಸಕರು ಮಾಡಿದ್ದು ಸರಿನಾ, ಸ್ಪೀಕರ್ ಎಂದರೆ ಗೌರವವಿಲ್ಲವಾ, ಅವರ ಮುಂದೆ ಹೋಗಿ ಪೇಪರ್ ಹರಿದು ಹಾಕುವುದು ಸರಿನಾ ಎಂದು ಪ್ರಶ್ನಿಸಿದರು.ಮುಸ್ಲಿಂ ಯಾರು ಸ್ಪೀಕರ್ ಆಗಬಾರದಾ ಸಂವಿಧಾನದಲ್ಲಿ ಆ ರೀತಿ ಇದ್ದೀಯಾ. ಯಾರ ಬೇಕಾದರೂ ಸ್ಪೀಕರ್ ಸ್ಥಾನದಲ್ಲಿ ಕುಳಿತುಕೊಳ್ಳಬಹುದು, ಇದಕ್ಕೆ ಜಾತಿ ಇಲ್ಲ, ಮುಸ್ಲಿಂ ಅವರು ಸ್ಪೀಕರ್ ಸ್ಥಾನದಲ್ಲಿ ಕುಳಿತುಕೊಂಡು ಇರುವುದಕ್ಕೆ ಬೇಕಾಗಿಯೇ ಬಿಜೆಪಿ ಟಾರ್ಗೆಟ್ ಏನಾದರೂ ಮಾಡಿದ್ದರಾ, ಸ್ಪೀಕರ್ ಸಾಕಷ್ಟು ಸಮಾಧಾನ ಮಾಡಿದರು ಬಿಜೆಪಿ ಶಾಸಕರು ಕೇಳಿಲ್ಲ, ಸ್ಪೀಕರ್ ಮಾಡಿರುವುದು ಸರಿ ಇದೆ ಎಂದರು.ವಕ್ಪ್ ಕಾಯ್ದೆ ಜಾರಿಗೆ ನನ್ನ ವಿರೋಧ ಇದೆ, ಅಲ್ಲಿ ಜಾರಿಯಾದ್ರು ಸಹ ರಾಜ್ಯದಲ್ಲಿ ವಿರೋಧ ಮಾಡುತ್ತೇವೆ ಎಂದು ಹೇಳಿದರು.