ಸಾರಾಂಶ
ಹುಬ್ಬಳ್ಳಿ:
ಸ್ವಾತಂತ್ರ್ಯಪೂರ್ವದಲ್ಲಿದ್ದ ಸ್ವ'''''''' ಭಾವ ಇಂದು ಕ್ಷೀಣಿಸಿದೆ. ಈಗಲಾದರೂ ಜಾಗೃತರಾಗಿ ಪ್ರತಿಯೊಬ್ಬರಲ್ಲೂ ಸ್ವದೇಶಿ ಬಳಕೆ ನಮ್ಮ ಸ್ವಭಾವವಾಗಬೇಕಿದೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.ಅವರು ಸ್ವದೇಶಿ ಜಾಗರಣ ಮಂಚ್ ವತಿಯಿಂದ ಇಲ್ಲಿನ ಕಲ್ಲೂರು ಲೇಔಟ್‌ನಲ್ಲಿ ಬುಧವಾರ ಆಯೋಜಿಸಿದ್ದ `ಸ್ವದೇಶಿ ಮೇಳ''''''''''''''''ದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ ಮತ್ತು ವೀರ ಸಾವರ್ಕರ್ ಅವರು ಸ್ವದೇಶಿ ಉತ್ಪನ್ನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಆದರೆ, ಸ್ವಾತಂತ್ರ್ಯಾ ನಂತರ ಭಾರತೀಯರು ನಮ್ಮತನವನ್ನು ಬದಿಗೊತ್ತಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.ಅಮೆರಿಕ, ಜಪಾನ್, ಫ್ರಾನ್ಸ್ ಹಾಗೂ ಚೀನಾ ತಮ್ಮ ಸ್ವಂತಿಕೆ ಬಿಟ್ಟುಕೊಟ್ಟಿಲ್ಲ. ಅನ್ಯ ಭಾಷೆ ಬಳಸದೇ ತಮ್ಮ ನೆಲದ ಭಾಷೆಯನ್ನೇ ವ್ಯಾವಹಾರಿಕವಾಗಿ ಬಳಸುತ್ತಿದ್ದಾರೆ ಎಂದ ಅವರು, ಹಿಂದೊಂದು ಕಾಲದಲ್ಲಿ ಮದುವೆ ಮನೆಯಲ್ಲಿ ವಧು-ವರರು ವಿದೇಶಿ ವಸ್ತು ಧರಿಸಿದ್ದರೆ ಪುರೋಹಿತರು ಪೌರೋಹಿತ್ಯ ಮಾಡುತ್ತಿರಲಿಲ್ಲ. ಅಗಸರು ವಿದೇಶಿ ವಸ್ತು ಒಗೆಯುತ್ತಿರಲಿಲ್ಲ. ವಿದೇಶಿ ವಸ್ತು ಬಳಸುವುದೇ ಅಪರಾಧ ಎಂಬ ಭಾವನೆ ಇತ್ತು. ಆದರೆ, ಸ್ವಾತಂತ್ರ್ಯ ನಂತರ ಎಲ್ಲವೂ ಬದಲಾಗಿದೆ ಎಂದರು.
ಉದ್ಯಮಿ ಡಾ. ವಿಜಯ ಸಂಕೇಶ್ವರ ಮಾತನಾಡಿ, ಸ್ವದೇಶಿ ಎಂಬುದು ಕೇವಲ ನಾಲ್ಕೈದು ದಿನಗಳ ಮೇಳಕ್ಕೆ ಸೀಮಿತವಾಗಬಾರದು. ಮೇಳದ ನಂತರವೂ ಜನರಿಗೆ ವಸ್ತುಗಳು ಲಭ್ಯವಾಗುವ ನಿಟ್ಟಿನಲ್ಲಿ ಮಳಿಗೆ ಸ್ಥಾಪಿಸಬೇಕು ಎಂದರು.ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ಚೇರ್‌ಮನ್ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಸ್ವದೇಶಿ ವಸ್ತುಗಳ ಉಪಯೋಗದಿಂದ ದೇಶದ ಅಭಿವೃದ್ಧಿ ಸಾಧ್ಯ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಪ್ರತಿಯೊಂದು ರೈಲ್ವೆ ನಿಲ್ದಾಣಗಳಲ್ಲೂ ಸ್ವದೇಶಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದೆ. ವಿದೇಶಿ ವಸ್ತುಗಳು ಒಂದೇ ಸೂರಿನಡಿ ದೊರೆಯುವಂತೆ ಸ್ವದೇಶಿ ವಸ್ತುಗಳಿಗೂ ಮಾಲ್‌ಗಳು ನಿರ್ಮಾಣ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಗುರು ರೇವಣಸಿದ್ಧೇಶ್ವರ ಸಂಸ್ಥಾನ ವಿರಕ್ತಮಠದ ಅಭಿನವ ರೇವಣಸಿದ್ಧೇಶ್ವರ ಶ್ರೀ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವಿಜಯಾನಂದ ಸರಸ್ವತಿ ಶ್ರೀ ಆಶೀರ್ವಚನ ನೀಡಿದರು. ಚರಕ ನೇಯುವ, ರಾಶಿ ಸುರಿಯುವ, ಸಸಿಗೆ ನೀರೆರೆಯುವ ಮತ್ತು ಜಾಗಟೆ ನುಡಿಸುವ ಮೂಲಕ ಸ್ವದೇಶಿ ಮೇಳಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಸ್ವದೇಶಿ ಮೇಳದ ಸಂಘಟಕ ಸಂದೀಪ ಬೂದಿಹಾಳ, ಸಂಯೋಜಕ ಜಯತೀರ್ಥ ಕಟ್ಟಿ, ಸಂಚಾಲಕಿ ರಚಿತಾ ಆಕಳವಾಡಿ ಸೇರಿದಂತೆ ಹಲವರಿದ್ದರು.