ಅರ್ಚಕನ ಮೇಲೆ ಮಹಿಳೆಯರಿಂದ ಹಲ್ಲೆ

| Published : Aug 25 2025, 01:00 AM IST

ಸಾರಾಂಶ

ಕುಂಕುಮ ಇಡಲು ಹಣೆಯ ಮುಟ್ಟಿದಾಗ ಅಸಭ್ಯವಾಗಿ ವರ್ತಿಸಿದ್ದಾರೆಂದು ಅರ್ಚಕನ ಮೇಲೆ ಮಹಿಳೆಯರು ಹಲ್ಲೆ ನಡೆಸಿರುವ ಘಟನೆ ದೇವರಾಯನದುರ್ಗದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ, ತುಮಕೂರುಕುಂಕುಮ ಇಡಲು ಹಣೆಯ ಮುಟ್ಟಿದಾಗ ಅಸಭ್ಯವಾಗಿ ವರ್ತಿಸಿದ್ದಾರೆಂದು ಅರ್ಚಕನ ಮೇಲೆ ಮಹಿಳೆಯರು ಹಲ್ಲೆ ನಡೆಸಿರುವ ಘಟನೆ ದೇವರಾಯನದುರ್ಗದಲ್ಲಿ ನಡೆದಿದೆ. ತುಮಕೂರು ಹೊರವಲಯದ ದೇವರಾಯನದುರ್ಗ ನರಸಿಂಹಸ್ವಾಮಿ ದೇವಸ್ಥಾನದ ನಾಗಭೂಷಣಾಚಾರ್ಯ ಎಂಬ ಅರ್ಚಕ ದೇವಸ್ಥಾನದ ಮೆಟ್ಟಿಲ ಬಳಿ ಮಹಿಳೆಯರಿಗೆ ಕುಂಕುಮ ಇಡುವಾಗ ಅನುಚಿತವಾಗಿ ವರ್ತಿಸಿದ್ದಾರೆಂದು ದೂರಿ ಮೂವರು ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಕಳೆದ ಮೂರು ದಿವಸಗಳ ಹಿಂದೆಯೇ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.