ತಾವರೆಕೆರೆ ಶಿಲಾಮಠದಲ್ಲಿ ಅರ್ಚಕರ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ

| Published : Sep 12 2025, 01:00 AM IST

ತಾವರೆಕೆರೆ ಶಿಲಾಮಠದಲ್ಲಿ ಅರ್ಚಕರ ಪ್ರಶಿಕ್ಷಣ ಶಿಬಿರಕ್ಕೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ತಾವರೆಕೆರೆ ಗ್ರಾಮದ ಶಿಲಾಮಠದಲ್ಲಿ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ, ಹೊದಿಗೆರೆಯ ದೈವ ಸಂಸ್ಕೃತಿ ಪ್ರತಿಷ್ಠಾನ ಸಹಯೋಗದಲ್ಲಿ ಅರ್ಚಕರಿಗೆ ಹಮ್ಮಿಕೊಂಡಿದ್ದ 3 ದಿನಗಳ ತರಬೇತಿ ಶಿಬಿರಕ್ಕೆ ಮಂಗಳವಾರ ಸಂಜೆ ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ತಾವರೆಕೆರೆ ಗ್ರಾಮದ ಶಿಲಾಮಠದಲ್ಲಿ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ, ಹೊದಿಗೆರೆಯ ದೈವ ಸಂಸ್ಕೃತಿ ಪ್ರತಿಷ್ಠಾನ ಸಹಯೋಗದಲ್ಲಿ ಅರ್ಚಕರಿಗೆ ಹಮ್ಮಿಕೊಂಡಿದ್ದ 3 ದಿನಗಳ ತರಬೇತಿ ಶಿಬಿರಕ್ಕೆ ಮಂಗಳವಾರ ಸಂಜೆ ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿದರು.

197 ರಾಷ್ಟ್ರಗಳಿರುವ ವಿಶ್ವಕ್ಕೆ ಪೂಜಾ ಮನೆಯಂತಿರುವುದು ಭಾರತ ದೇಶವಾಗಿದೆ. ಧಾರ್ಮಿಕ ಆಚರಣೆ ಮತ್ತು ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಧಾರ್ಮಿಕ ವಿಚಾರ ಧಾರೆಗಳನ್ನು ಈ ದೇಶ ಹೊಂದಿದೆ ಎಂದರು.

ಕಲ್ಲು ಬಂಡೆ ಶಿಲ್ಪವಾಗಬೇಕಾದರೆ ಶಿಲ್ಪಿಯ ಕೈ ಚಳಕ ಅಗತ್ಯ. ಅದರಂತೆ ಅರ್ಚಕರಾದವರು ಶಾಸ್ತ್ರೋಕ್ತವಾಗಿ ಮಂತ್ರ ಪಠಣ ಮಾಡಲು ಹಾಗೂ ವಿಧಿ-ವಿಧಾನಗಳೊಂದಿಗೆ ಪೂಜೆ, ಪುನಸ್ಕಾರ ನೆರವೇರಿಸಬೇಕಾದರೆ ಪ್ರಶಿಕ್ಷಣ ಅವಶ್ಯಕವಾಗಿ ಬೇಕಾಗಿದೆ. ಆ ನಿಟ್ಟಿನಲ್ಲಿ ಈ ಶಿಬಿರ ಅರ್ಚಕರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸರಿಸುಮಾರು 2.50 ಲಕ್ಷ ದೇವಾಲಯಗಳಿದ್ದು, ಅವುಗಳಲ್ಲಿ 33.563 ಮುಜರಾಯಿ ದೇವಾಲಯಗಳಿವೆ. ಕೆಲವರು ಅವರ ಪರಂಪರೆಯಿಂದಲೇ ಅರ್ಚಕ ವೃತ್ತಿಯಲ್ಲಿ ತೊಡಗಿದ್ದರೂ ಶಾಸ್ತ್ರಗಳ ಜ್ಞಾನದ ಕೊರತೆ ಇದೆ. ಇಂತಹ ಅರ್ಚಕರಿಗೆ ಉಚಿತ ತರಬೇತಿ ನೀಡಲು ದೇವಾಲಯ ಸಂವರ್ಧನಾ ಸಮಿತಿ ಮುಂದಾಗಿದೆ ಎಂದರು.

ದೇವಾಲಯಗಳ ಸಂವರ್ಧನಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮನೋಹರ ಮಠದ್ ಮಾತನಾಡಿ. ಅರ್ಚಕರಾದವರೇ ದೇವಾಲಯಗಳಿಗೆ ಶಕ್ತಿ ತುಂಬುವಂತವರಾಗಿದ್ದಾರೆ. ಅವರಿಗೆ ಈ ತರಬೇತಿ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಸಂಯೋಜಕ ವಸಂತ ಕುಮಾರ್, ತಾಲೂಕು ಸಂಯೋಜಕ ಕೃಷ್ಣಮೂರ್ತಿ ಕಶ್ಯಪ್, ದೈವ ಸಂಸ್ಕೃತಿ ಪ್ರತಿಷ್ಠಾನ ಅಧ್ಯಕ್ಷ ಹೊದಿಗೆರೆ ಬೂದಿಸ್ವಾಮಿ, ಮಂಜುನಾಥ್, ಗುರುಮೂರ್ತಿ, ದೇವರಾಜ್ ಉಪಸ್ಥಿತರಿದ್ದರು.

- - -

-10ಕೆಸಿಎನ್‌ಜಿ3.ಜೆಪಿಜಿ:

ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದ ಶಿಲಾಮಠದಲ್ಲಿ ಅರ್ಚಕರ ತರಬೇತಿ ಶಿಬಿರಕ್ಕೆ ಎಡೆಯೂರು ಶ್ರೀಗಳು ಚಾಲನೆ ನೀಡಿದರು.