ಅಂಜನಾದ್ರಿಯಲ್ಲಿ ಅರ್ಚಕರಿಗೆ ಪೂಜೆ ಮೊಟಕು: ಡಿಸಿ ವಿರುದ್ಧ ಸುಪ್ರೀಂ-ಹೈಕೋರ್ಟ್‌, ಸಿಎಸ್‌ಗೆ ದೂರು

| Published : Jul 07 2025, 11:48 PM IST

ಅಂಜನಾದ್ರಿಯಲ್ಲಿ ಅರ್ಚಕರಿಗೆ ಪೂಜೆ ಮೊಟಕು: ಡಿಸಿ ವಿರುದ್ಧ ಸುಪ್ರೀಂ-ಹೈಕೋರ್ಟ್‌, ಸಿಎಸ್‌ಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ಪೂಜೆ ಮಾಡಲು ಅವಕಾಶ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕೆಂದು ಕೋರ್ಟ್‌ ಆದೇಶಿಸಿದೆ. ಆದರೂ ಸಹ ಭಾನುವಾರ ಅಂಜನಾದ್ರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅವರು ಬೇರೆ ಅರ್ಚಕರಿಂದ ಪೂಜೆ ಮಾಡಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಸಿಎಸ್‌ ಹಾಗೂ ಸುಪ್ರೀಂ ಕೋರ್ಟ್‌, ಧಾರವಾಡ ಹೈಕೋರ್ಟ್‌ಗೆ ತಮ್ಮ ವಕೀಲರಿಂದ ವಿದ್ಯಾದಾಸ್‌ ಬಾಬಾ ದೂರು ಸಲ್ಲಿಸಿದ್ದಾರೆ.

ಗಂಗಾವತಿ:

ಅಂಜನಾದ್ರಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ವಿದ್ಯಾದಾಸ್‌ ಬಾಬಾ ಅವರಿಂದ ಪೂಜೆ ಮಾಡಿಸದೆ ಮುಜರಾಯಿ ಇಲಾಖೆಯಿಂದ ನೇಮಕಗೊಂಡ ಅರ್ಚಕರಿಂದ ಪೂಜೆ, ಸಂಕಲ್ಪ ಮಾಡಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ವಿರುದ್ಧ ವಿದ್ಯಾದಾಸ ಬಾಬಾ ಸುಪ್ರೀಂಕೋರ್ಟ್‌, ಹೈಕೋರ್ಟ್‌ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.

ನನಗೆ ಪೂಜೆ ಮಾಡಲು ಅವಕಾಶ ಮತ್ತು ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕೆಂದು ಕೋರ್ಟ್‌ ಆದೇಶಿಸಿದೆ. ಆದರೂ ಸಹ ಭಾನುವಾರ ಅಂಜನಾದ್ರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅವರು ಬೇರೆ ಅರ್ಚಕರಿಂದ ಪೂಜೆ ಮಾಡಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಸಿಎಸ್‌ ಹಾಗೂ ಸುಪ್ರೀಂ ಕೋರ್ಟ್‌, ಧಾರವಾಡ ಹೈಕೋರ್ಟ್‌ಗೆ ತಮ್ಮ ವಕೀಲರಿಂದ ವಿದ್ಯಾದಾಸ್‌ ಬಾಬಾ ದೂರು ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿ ಬೇರೆ ಅರ್ಚಕರಿಂದ ಪೂಜೆ ಮಾಡಿಸುವುದನ್ನು ವಿದ್ಯಾದಾಸ್‌ ಬಾಬಾ ವೀಡಿಯೋ ಮಾಡುತ್ತಿದ್ದಾಗ ಜಿಲ್ಲಾಧಿಕಾರಿ ಆಕ್ಷೇಪಿಸಿದ್ದಾರೆ. ನಂತರ ತಪ್ಪು ಅರಿತುಕೊಂಡು ಪುನಃ ಪೂಜೆ ಮಾಡುವಂತೆ ಬಾಬಾ ಅವರಿಗೆ ಹೇಳಿದ್ದಾರೆ. ಆಗ, ನೀವು ಪೂಜೆ ಹಾಗೂ ಸಂಕಲ್ಪಕ್ಕೆ ಮುಜರಾಯಿ ಇಲಾಖೆಯಿಂದ ನೇಮಕಗೊಂಡ ಅರ್ಚಕರನ್ನು ಕರೆದುಕೊಂಡು ಬಂದಿದ್ದೀರಿ. ಈ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದೀರಿ. ನಾನು ಪೂಜೆ ಮಾಡುವುದಿಲ್ಲ. ಕರೆದುಕೊಂಡು ಬಂದ ಅರ್ಚಕರಿಂದಲೇ ಪೂಜೆ ಮಾಡಿಸಿಕೊಳ್ಳಿ ಎಂದು ಹೇಳಿದ್ದರು.ನನಗೆ ಪೂಜೆ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ ಮುಜರಾಯಿ ಇಲಾಖೆಯಿಂದ ನೇಮಕಗೊಂಡ ಅರ್ಚಕರನ್ನು ಕರೆಯಿಸಿ ಪೂಜೆ ಮಾಡಿಸಿದ್ದಾರೆ. ಇದರಿಂದ ನ್ಯಾಯಾಂಗದ ಆದೇಶ ಉಲ್ಲಂಘನೆಯಾಗಿದ್ದು ಜಿಲ್ಲಾಧಿಕಾರಿಗಳ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನ್ಯಾಯಾಲಯಕ್ಕೆ ದೂರು ನೀಡಿದ್ದೇನೆ.

ವಿದ್ಯಾದಾಸ್‌ ಬಾಬಾ, ಅರ್ಚಕರು ಅಂಜನಾದ್ರಿ