ಮಕ್ಕಳ ಕಲಿಕೆಗೆ ಪ್ರಾಥಮಿಕ ಶಿಕ್ಷಣ ಭದ್ರ ಬುನಾದಿ: ಬಿಇಒ ಸೋಮಶೇಖರಗೌಡ ಪಾಟೀಲ

| Published : Mar 07 2025, 12:52 AM IST

ಮಕ್ಕಳ ಕಲಿಕೆಗೆ ಪ್ರಾಥಮಿಕ ಶಿಕ್ಷಣ ಭದ್ರ ಬುನಾದಿ: ಬಿಇಒ ಸೋಮಶೇಖರಗೌಡ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕಲಿಕಾ ಹಬ್ಬ ಮಕ್ಕಳಲ್ಲಿ ಹೊಸ ಚೈತನ್ಯ, ಸ್ಫೂರ್ತಿ ಜತೆಗೆ ಕಲಿಕೆಗೆ ಹೆಚ್ಚು ಪೂರಕವಾಗಿದೆ. ಸರ್ಕಾರ ಇಂತಹ ಕಲಿಕಾ ಹಬ್ಬದಂತಹ ವಿನೂತನ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಿದೆ. ಪ್ರಾಥಮಿಕ ಹಂತದಲ್ಲಿ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನದ ಕಲಿಕಾ ಹಬ್ಬ ಆಯೋಜನೆ ಮಕ್ಕಳ ಕಲಿಕೆಗೆ ಹೆಚ್ಚು ಸಹಕಾರಿಯಾಗಿದೆ.

ಯಲಬುರ್ಗಾ:

ಕಲಿಕಾ ಹಬ್ಬ ಮಕ್ಕಳಲ್ಲಿ ಹೊಸ ಚೈತನ್ಯ, ಸ್ಫೂರ್ತಿ ಜತೆಗೆ ಕಲಿಕೆಗೆ ಹೆಚ್ಚು ಪೂರಕವಾಗಿದೆ ಎಂದು ಬಿಇಒ ಸೋಮಶೇಖರಗೌಡ ಪಾಟೀಲ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ನಂ. ೧ರಲ್ಲಿ ಗುರುವಾರ ನಡೆದ ಯಲಬುರ್ಗಾ ವಲಯ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಇಂತಹ ಕಲಿಕಾ ಹಬ್ಬದಂತಹ ವಿನೂತನ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಿದೆ. ಪ್ರಾಥಮಿಕ ಹಂತದಲ್ಲಿ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನದ ಕಲಿಕಾ ಹಬ್ಬ ಆಯೋಜನೆ ಮಕ್ಕಳ ಕಲಿಕೆಗೆ ಹೆಚ್ಚು ಸಹಕಾರಿಯಾಗಿದೆ ಎಂದರು.

ಪಾಲಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ಕೊಡಿಸಬೇಕು. ಮನೆಗೆ ತಳಪಾಯ ಎಷ್ಟು ಮುಖ್ಯವೋ ಅದರಂತೆ ಮಕ್ಕಳ ಕಲಿಕೆಗೆ ಪ್ರಾಥಮಿಕ ಶಿಕ್ಷಣವು ಕೂಡ ಭದ್ರ ಬುನಾದಿ ಇದ್ದಂತೆ ಎಂದು ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಬಳಿಗಾರ ಹೇಳಿದರು.

ಶುದ್ಧ ಓದು, ಸ್ಪಷ್ಟ ಬರಹ ಹಾಗೂ ಗಣಿತದ ಮೂಲ ಕ್ರಿಯೆಗಳನ್ನು ಆರಂಭದಲ್ಲಿ ಕಲಿಸುವ ಮೂಲಕ ಗುಣಾತ್ಮಕ ಕಲಿಕೆ ಸಾಧ್ಯವಿದೆ. ಇಂತಹ ಕಲಿಕಾ ಹಬ್ಬಗಳಿಂದ ಶಿಕ್ಷಕರು ಹೊಸ ಹೊಸ ಕೌಶಲ್ಯ ಅಳವಡಿಸಿಕೊಂಡು ಮಕ್ಕಳ ಕಲಿಕೆಯಲ್ಲಿ ಮತ್ತಷ್ಟು ಹೊಸತನ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದರು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಿದ್ಲಿಂಗಪ್ಪ ಶ್ಯಾಗೋಟಿ ಮಾತನಾಡಿ, ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು. ಯಾವ ಮಗು ಶಿಕ್ಷಣದಿಂದ ವಂಚಿತ ಆಗಬಾರದೆಂಬ ಸದುದ್ದೇಶದಿಂದ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರ ಉಜ್ವಲ್ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಜಗದೀಶ್ಚಂದ್ರ ಶೆಟ್ಟರ್, ಶಿಕ್ಷಕರು ಮಕ್ಕಳು ಯಾವ ಕಲಿಕಾ ಹಂತದಲ್ಲಿ ಇದ್ದಾರೆ ಎನ್ನುವುದನ್ನು ಗುರುತಿಸಿ ಅವರಿಗೆ ಓದು, ಬರಹ ಬಗ್ಗೆ ಹೆಚ್ಚು ಗಮನಹರಿಸ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಧರಣಾ, ಶಿಕ್ಷಕರಾದ ಶರಣಯ್ಯ ಸರಗಣಾಚಾರ, ಮಹೇಶ ಆರೇರ, ಬಸವರಾಜ ಮುಳಗುಂದ, ಕಳಕಮಲ್ಲಪ್ಪ ಅಂತೂರ, ಮುದಿಯಪ್ಪ ಹಿರೇಮನಿ, ಹನುಮಂತ ಬಡಿಗೇರ, ಬಸಮ್ಮ ಇಟಗಿ, ಸಂಗಮ್ಮ ಗಂದಿಹಾಳ, ಸಂಗೀತ ಹಿರೇಮಠ, ಶ್ರೀದೇವಿ, ಶಿಕ್ಷಕಿ ವಿಜಯಾ ಗಡ್ಡದ, ಕಾವ್ಯ ಹಿರೇಮಠ ಇದ್ದರು.