ಪ್ರಾಥಮಿಕ ಶಿಕ್ಷಕರ ಸಂಘದ ಚುನಾವಣೆ

| Published : Feb 14 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಅಖಂಡ ಬಸವನಬಾಗೇವಾಡಿ ತಾಲೂಕಾ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹೊನ್ನಪ್ಪ ಗೊಳಸಂಗಿ, ಉಪಾಧ್ಯಕ್ಷರಾಗಿ ಭಾಷಾಸಾಬ ಮನಗೂಳಿ ಅವಿರೋಧ ಆಯ್ಕೆಯಾಗಿದ್ದಾರೆ. ಎರಡು ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಅಖಂಡ ಬಸವನಬಾಗೇವಾಡಿ ತಾಲೂಕಾ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಹೊನ್ನಪ್ಪ ಗೊಳಸಂಗಿ, ಉಪಾಧ್ಯಕ್ಷರಾಗಿ ಭಾಷಾಸಾಬ ಮನಗೂಳಿ ಅವಿರೋಧ ಆಯ್ಕೆಯಾಗಿದ್ದಾರೆ. ಎರಡು ಸ್ಥಾನಗಳಿಗೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ ಹೇಳಿದರು.ಇತ್ತೀಚೆಗೆ ಸೊಸಾಯಿಟಿಗೆ ಜರುಗಿದ ಚುನಾವಣೆಯಲ್ಲಿ ಆದರ್ಶ ಶಿಕ್ಷಕರ ವೇದಿಕೆ, ಸಮಾನ ಮನಸ್ಕರ ವೇದಿಕೆ, ಹೊನ್ನಪ್ಪ ಗೊಳಸಂಗಿ ಅವರ ಫೆನಲ್‌ನ ಅಭ್ಯರ್ಥಿಗಳು ಸೊಸಾಯಿಟಿಯ ಒಟ್ಟು ೧೩ ಸದಸ್ಯ ಬಲದಲ್ಲಿ ೧೧ ಸದಸ್ಯರು ಆಯ್ಕೆಯಾಗಿದ್ದರು. ಚುನಾವಣೆಯ ಪ್ರಕ್ರಿಯೆ ನಂತರ ಆದರ್ಶ ಶಿಕ್ಷಕರ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳಿಂದ ನೂತನ ಅಧ್ಯಕ್ಷರ, ಉಪಾಧ್ಯಕ್ಷರನ್ನು, ನಿರ್ದೇಶಕ ಮಂಡಳಿಯನ್ನು ಸನ್ಮಾನಿಸಲಾಯಿತು.ಈ ವೇಳೆ ನೂತನ ಅಧ್ಯಕ್ಷ ಹೊನ್ನಪ್ಪ ಗೊಳಸಂಗಿ ಮಾತನಾಡಿ, ಅಖಂಡ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ನಮ್ಮ ಫೆನಲ್ ಮೇಲೆ ಭರವಸೆ ಇಟ್ಟು ತಂಡಕ್ಕೆ ಸಹಕಾರ ನೀಡಿದ್ದಾರೆ. ಸಮಸ್ತ ಶಿಕ್ಷಕರಿಗೆ ಸೊಸಾಯಿಟಿಯು ಸದುಪಯೋಗವಾಗುವಂತೆ ನೂತನ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತದೆ. ಮುಂದಿನ ದಿನಗಳಲ್ಲಿ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವ ಮೂಲಕ ಸೊಸಾಯಿಟಿಯ ಅಭಿವೃದ್ಧಿಗೆ ಗಮನ ಹರಿಸಲಾಗುವದು. ನಮ್ಮ ಎಲ್ಲ ನಿರ್ದೇಶಕ ಮಂಡಳಿಯು ಭತ್ಯೆಯನ್ನು ತೆಗೆದುಕೊಳ್ಳದೇ ಈ ಹಣವನ್ನು ಸಹ ಸೊಸಾಯಿಟಿಯ ಅಭಿವೃದ್ಧಿ ತೊಡಗಿಸಲಾಗುವುದು. ಮುಂಬರುವ ದಿನಗಳಲ್ಲಿ ಬಡ್ಡಿ ದರವನ್ನು ಕಡಿಮೆ ಮಾಡಲಾಗುವದು. ಜಿಪಿಟಿ ಪದವೀಧರರ ಶಿಕ್ಷಕರಿಗೂ ಸೊಸಾಯಿಟಿಯ ಸದಸ್ಯತ್ವ ಕೊಡಲಾಗುವುದು. ರಾಜ್ಯದಲ್ಲಿಯೇ ಇದನ್ನು ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತೇವೆ. ಇದಕ್ಕೆ ಎಲ್ಲ ಶಿಕ್ಷಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕವಲಗಿ ಮಾತನಾಡಿ, ಅಖಂಡ ತಾಲೂಕಿನ ಶಿಕ್ಷಕರು ನಮ್ಮ ವೇದಿಕೆಯ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟು ನಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ನಾವು ನಿಸ್ವಾರ್ಥದಿಂದ ಸೇವೆ ಮಾಡಲು ಸದಾ ಬದ್ಧ. ಎಲ್ಲರ ಸಹಕಾರದೊಂದಿಗೆ ಸೊಸಾಯಿಟಿಯನ್ನು ರಾಜ್ಯದಲ್ಲಿ ಉತ್ತಮ ಸಾಧನೆ ಮಾಡುವಂತೆ ಗಮನ ಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ನಿರ್ದೇಶಕರಾದ ಬಸವರಾಜ ಚಿಂಚೋಳಿ, ಶಿವಪ್ಪ ಮಡಿಕೇಶ್ವರ, ಸಂಗಣ್ಣ ಹುನಗುಂದ, ನಿಂಗೇಶ ಕಾಳಗಿ, ಶಂಕ್ರಮ್ಮ ಕವಿಶೆಟ್ಟಿ, ಪಾರ್ವತೆವ್ವ ಹೊಸಮಠ, ಮಹೇಶ ಪೂಜಾರಿ, ಸುರೇಶ ಹುರಕಡ್ಲಿ, ಕೃಷ್ಣಾ ರಜಪೂತ, ಮಲ್ಲಿಕಾರ್ಜುನ ರಾಜನಾಳ, ಸೊಸಾಯಿಟಿಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ವಡವಡಗಿ, ಸಿಬ್ಬಂದಿಗಳಾದ ದುಂಡು ನುಚ್ಚಿ, ಶ್ರೀಧರ ಕುದರಕರ, ಯಾಸೀನ ಸಂಕನಾಳ, ಅಶೋಕ ನಾಡಗೌಡ, ಶಿಕ್ಷಕರಾದ ಎಚ್.ಬಿ.ಬಾರಿಕಾಯಿ, ಎಂ.ಎನ್.ಯಾಳವಾರ, ಎಸ್.ಬಿ.ಮುತ್ತಗಿ, ಅಶೋಕ ಗಿಡ್ಡಪ್ಪಗೋಳ, ಪಿ.ಎಸ್.ಗಂಡಾನವರ, ಶಿವಲಿಂಗ ತಾಳಿಕೋಟಿ, ಸುರೇಶ ಸಜ್ಜನ, ಎಂ.ಎ.ಪಾಟೀಲ, ಸಿದ್ದಪ್ಪ ಅವಜಿ, ಗೋಪಾಲ ಲಮಾಣಿ, ಎನ್.ಎಸ್.ಕಾಳಗಿ, ಸಲೀಂ ದಡೇದ, ಎಂ.ಆರ್‌.ಮಕಾನಾದರ, ಎಂ.ಎಂ.ಲಷ್ಕರಿ, ಎಸ್.ಐ.ಬಿರಾದಾರ, ಎಸ್.ಎನ್.ಬಿರಾದಾರ, ಬಿ.ವ್ಹಿ.ಚಕ್ರಮನಿ, ಐ.ಎಂ.ಅಳ್ಳಗಿ, ಸಿದ್ದು ಬಾಗೇವಾಡಿ, ಸೇರಿದಂತೆ ಇತರರು ಇದ್ದರು.