ಸಾರಾಂಶ
- ಲೋಕಪಾಲ್, ಲೋಕಾಯುಕ್ತರ ಕಾಯಿದೆ-2013 ಕಾರ್ಯಗಾರ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತರ ಕಾಯಿದೆ ಜಾರಿಗೆ ತರಲಾಗಿದೆ. ಈ ಕಾಯ್ಕೆಗೆ ಸಂಸತ್ತು ಅಂಗೀಕಾರ ನೀಡಿದ್ದು, ಸಾಮಾನ್ಯ ನೌಕರರಿಂದ ಹಿಡಿದು ಪ್ರಧಾನಿ ಸಹ ಲೋಕಪಾಲ್ ಪ್ಯಾಪ್ತಿಗೆ ಬರುತ್ತಾರೆ ಎಂದು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹೇಳಿದರು.
ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಐಕ್ಯೂಎಸಿ ನೇತೃತ್ವದಲ್ಲಿ ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತರ ಕಾಯಿದೆ-2013 ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾರತದಲ್ಲಿ ಲೋಕಪಾಲ್ ಮಸೂದೆ ಅಡಿ ಭ್ರಷ್ಟಾಚಾರ ಕಾನೂನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸಲಾಗಿದೆ. ಈ ಲೋಕಪಾಲ್ ಸಂಸ್ಥೆ ಸರ್ಕಾರದ ಅನುಮತಿ ಇಲ್ಲದೇಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೆ ಒಳಪಡಿಸುವ ಅಧಿಕಾರ ಹೊಂದಿದೆ. ಚುನಾವಣಾ ಆಯೋಗದಂತೆ ಸ್ವತಂತ್ರ ಸಂಸ್ಥೆಯಾಗಿದೆ. ಭ್ರಷ್ಟಾಚಾರ ನಿಗ್ರಹಿಸುವ ಮತ್ತು ಮಾಹಿತಿದಾರರನ್ನು ರಕ್ಷಿಸುವ ಸಲುವಾಗಿ ಈ ಕಾಯ್ದೆಯಡಿ ಸಾಧ್ಯವಾಗಿದೆ ಎಂದು ಪ್ರತಿಪಾದಿಸಿದರು.
ಮುಖ್ಯ ಅತಿಥಿ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಸರ್ಕಾರದ ಇಲಾಖೆಗಳಲ್ಲಿ ಲಂಚದ ಹಾವಳಿ ತಡೆಯುವ ಬಗ್ಗೆ ಚರ್ಚೆಗಳು ನಡೆದು ಸಮಿತಿ ರಚನೆಯಾಗಿ ತದ ನಂತರ 2013ರಲ್ಲಿ ಭಾರದ ಸಂಸತ್ತು ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಯನ್ನು ಅಂಗೀಕರಿಸಿತು. ಸರ್ಕಾರದ ವ್ಯವಸ್ಥೆಯಲ್ಲಿ ಲಂಚದ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಕೇಂದ್ರದ ಮಟ್ಟದಲ್ಲಿ ಲೋಕಪಾಲ್ ಸಂಸ್ಥೆ, ರಾಜ್ಯಗಳ ಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸಲಾಯಿತು ಎಂದು ತಿಳಿಸಿದರು.ಅಧ್ಯಕ್ಷತೆಯನ್ನು ಆರ್.ಎಲ್. ಕಾನೂನು ಕಾಲೇಜು ಪ್ರಾಂಶುಪಾಲ ಡಾ. ಜಿ.ಎಸ್. ಯತೀಶ್, ಐಕ್ಯೂಎಸಿ ಸಂಚಾಲಕ ಬಸವನಗೌಡ ಬಿ.ಪಿ. ಕಾರ್ಯಕ್ರಮದ ಸಂಯೋಜಕರಾದ ಡಾ.ಪಂಕಜಾ ಟಿ.ಸಿ, ಸಹಾಯಕ ಪ್ರಾಧ್ಯಾಪಕ ವಿಧ್ಯಾಧರ ವೇದಮೂರ್ತಿ ಟಿ., ನಿವೃತ್ತ ಪ್ರಾಚಾರ್ಯ ಸೋಮಶೇಖರ್ ಇತರರು ಇದ್ದರು.
- - --23ಕೆಡಿವಿಜಿ39ಃ:
ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಉದ್ಘಾಟಿಸಿದರು.