ಅಲ್ಪಸಂಖ್ಯಾತರಿಗೆ ತೃಪ್ತಿ ತಂದ ಪ್ರಧಾನಿ ಮೋದಿ ಕೆಲಸ

| Published : May 04 2024, 12:32 AM IST

ಅಲ್ಪಸಂಖ್ಯಾತರಿಗೆ ತೃಪ್ತಿ ತಂದ ಪ್ರಧಾನಿ ಮೋದಿ ಕೆಲಸ
Share this Article
  • FB
  • TW
  • Linkdin
  • Email

ಸಾರಾಂಶ

10 ವರ್ಷಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸಗಳು ಅಲ್ಪಸಂಖ್ಯಾತರಿಗೆ ತೃಪ್ತಿ ತಂದಿವೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನೀಲ ಥಾಮಸ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

10 ವರ್ಷಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸಗಳು ಅಲ್ಪಸಂಖ್ಯಾತರಿಗೆ ತೃಪ್ತಿ ತಂದಿವೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನೀಲ ಥಾಮಸ್ ಹೇಳಿದರು.

ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಭಾರತದ ಆರ್ಥಿಕತೆಯನ್ನು 5ನೇ ಸ್ಥಾನಕ್ಕೆ ತಂದಿದ್ದಾರೆ. ಈಗ ಮುಂದಿನ 5 ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಕೇವಲ ಹಿಂದುಗಳ ಪಕ್ಷವಲ್ಲ. ಅಲ್ಪಸಂಖ್ಯಾತರು ಕೂಡ ಪ್ರಧಾನಿ ಮೋದಿ ಜಾರಿಗೊಳಿಸಿದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಎಲ್ಲ ಅಲ್ಪಸಂಖ್ಯಾತರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿದ್ದಾರೆ. ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ. ನಾವು ಕೂಡಾ ಪ್ರಧಾನಿಯಾಗಿ ಮೋದಿ ಅವರನ್ನೇ ನೋಡಬಯಸುತ್ತಿದ್ದೇವೆಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೀತಲಕುಮಾರ ಓಗಿ, ಮಜರ ಇನಾಮದಾರ, ಸೈಯ್ಯದ ನಿಡೋಣಿ, ಅಬ್ದುಲ ಸತ್ತಾರ ಸೇರಿದಂತೆ ಹಲವರು ಇದ್ದರು.