ಕೃಷ್ಣ ಪತ್ನಿ ಪ್ರೇಮಾಗೆ ಭಾವುಕಪತ್ರ ಬರೆದ ಪ್ರಧಾನಿ ಮೋದಿ

| Published : Dec 11 2024, 12:46 AM IST

ಸಾರಾಂಶ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಪ್ರೇಮಾ ಕೃಷ್ಣ ಅವರಿಗೆ ಪ್ರಧಾನಿ ಮೋದಿ ಅವರು ಪತ್ರ ಬರೆದು ನುಡಿ ಸಾಂತ್ವಾನ ಹೇಳಿದ್ದಾರೆ. ಕೃಷ್ಣಾರ ಅಗಲಿಕೆ ತುಂಬಲಾರದ ನಷ್ಟ ಎಂದಿರುವ ಮೋದಿ, ಅವರ ವ್ಯಕ್ತಿತ್ವ ಹಾಗೂ ರಾಜಕೀಯ ಜೀವನವನ್ನು ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ. ‘ಎಸ್‌.ಎಂ.ಕೃಷ್ಣ ಅವರ ನಿಧನದ ಸುದ್ದಿಯನ್ನು ಅತ್ಯಂತ ದುಃಖ ಮತ್ತು ನೋವಿನಿಂದ ಸ್ವೀಕರಿಸಿದ್ದೇನೆ. ಈ ಸಾ

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಪ್ರೇಮಾ ಕೃಷ್ಣ ಅವರಿಗೆ ಪ್ರಧಾನಿ ಮೋದಿ ಅವರು ಪತ್ರ ಬರೆದು ನುಡಿ ಸಾಂತ್ವಾನ ಹೇಳಿದ್ದಾರೆ. ಕೃಷ್ಣಾರ ಅಗಲಿಕೆ ತುಂಬಲಾರದ ನಷ್ಟ ಎಂದಿರುವ ಮೋದಿ, ಅವರ ವ್ಯಕ್ತಿತ್ವ ಹಾಗೂ ರಾಜಕೀಯ ಜೀವನವನ್ನು ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ.

‘ಎಸ್‌.ಎಂ.ಕೃಷ್ಣ ಅವರ ನಿಧನದ ಸುದ್ದಿಯನ್ನು ಅತ್ಯಂತ ದುಃಖ ಮತ್ತು ನೋವಿನಿಂದ ಸ್ವೀಕರಿಸಿದ್ದೇನೆ. ಈ ಸಾವಿನಿಂದ ಸೃಷ್ಟಿಯಾದ ಶೂನ್ಯವನ್ನು ಎಂದಿಗೂ ಭರಿಸಲು ಸಾಧ್ಯವಿಲ್ಲ. ದೂರದೃಷ್ಟಿಯುಳ್ಳ ಹಾಗೂ ಅಸಾಧಾರಣ ನಾಯಕರಾಗಿದ್ದ ಎಸ್‌.ಎಂ.ಕೃಷ್ಣ, ಎಲ್ಲಾ ರಾಜಕೀಯ ವಲಯಗಳಲ್ಲೂ ಗೌರವಿಸಲ್ಪಡುತ್ತಿದ್ದರು. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಲ್ಲಾ ವರ್ಗಗಳ ಜನರ ಏಳಿಗೆಗೆ ಶ್ರಮಿಸಿದರು. ಅದರಲ್ಲೂ ಮುಖ್ಯವಾಗಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಸ್ತರಣೆಯಿಂದ ಬೆಂಗಳೂರು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ಬೆಳೆದು ನಿಲ್ಲಲು ಸಾಧ್ಯವಾಯಿತು’.

‘ಅವರ ಅಸಾಧಾರಣ ವ್ಯಕ್ತಿತ್ವದಿಂದಾಗಿ ವಿದೇಶಾಂಗ ಸಚಿವ ಸೇರಿದಂತೆ ಅನೇಕ ಹುದ್ದೆಗಳಿಗೆ ಏರಿದರು. ಒಳ್ಳೆಯ ಓದುಗ ಹಾಗೂ ಚಿಂತಕರಾಗಿದ್ದ ಕೃಷ್ಣ, ಜನರ ಜೀವನದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದರು. ಇಷ್ಟು ವರ್ಷ ಅವರೊಂದಿಗೆ ನಡೆದ ಮಾತುಕತೆಗಳನ್ನು ಸದಾ ನೆನಪಿಟ್ಟುಕೊಳ್ಳುತ್ತೇನೆ’

‘ಈ ಕಷ್ಟದ ಸಮಯದಲ್ಲಿ, ಅವರೊಂದಿಗೆ ಕಳೆದ ಸಮಯ ನಿಮಗೆ ಸಮಾಧಾನ ನೀಡಲಿ. ಬಂಧು- ಮಿತ್ರರು ಹಾಗೂ ಹಿತೈಶಿಗಳ ಹೃದಯದಲ್ಲಿ ಅವರು ಸದಾ ನೆಲೆಸಿರುತ್ತಾರೆ’.