ಎಲ್ಲರಿಗೂ ಸದೃಢ ಬದುಕು ಕಟ್ಟಿಕೊಡುವುದು ಪ್ರಧಾನಿ ಮೋದಿ ಗ್ಯಾರಂಟಿ-ಬೊಮ್ಮಾಯಿ

| Published : Mar 31 2024, 02:06 AM IST

ಎಲ್ಲರಿಗೂ ಸದೃಢ ಬದುಕು ಕಟ್ಟಿಕೊಡುವುದು ಪ್ರಧಾನಿ ಮೋದಿ ಗ್ಯಾರಂಟಿ-ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲರಿಗೂ ಸದೃಢ ಬದುಕು ಕಟ್ಟಿಕೊಡುವುದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿಯಾಗಿದೆ. ಈಗಾಗಲೇ ಎರಡು ಪಕ್ಷದ ನಡುವೆ ರಾಷ್ಟ್ರ ಮಟ್ಟದಲ್ಲಿ ಮೈತ್ರಿಯಾಗಿದೆ. ಅದರಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ಎಲ್ಲರಿಗೂ ಸದೃಢ ಬದುಕು ಕಟ್ಟಿಕೊಡುವುದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿಯಾಗಿದೆ. ಈಗಾಗಲೇ ಎರಡು ಪಕ್ಷದ ನಡುವೆ ರಾಷ್ಟ್ರ ಮಟ್ಟದಲ್ಲಿ ಮೈತ್ರಿಯಾಗಿದೆ. ಅದರಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.ನಗರದ ಪಿ.ಬಿ. ರಸ್ತೆಯ ಜೆಡಿಎಸ್ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಹಾವೇರಿ ಗದಗ ಲೋಕಸಭಾ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶ- ವಿದೇಶಗಳಲ್ಲಿ ನಿರಂತರ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ 91ರ ವಯಸ್ಸಿನಲ್ಲೂ ಅತ್ಯಂತ ಉತ್ಸಾಹದಿಂದ ರಾಜ್ಯ ಪ್ರವಾಸ ಮಾಡಲು ಸಿದ್ಧರಾಗಿರುವ ಎಚ್.ಡಿ. ದೇವೇಗೌಡರು ನಮಗೆಲ್ಲ ಆದರ್ಶಪ್ರಾಯ. ಎಚ್.ಡಿ. ದೇವೇಗೌಡರು ಕೂಡ ಹಾವೇರಿಗೆ ಬಂದು ನನ್ನ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರೂ ಮತ್ತು ಮುಖಂಡರು ಪ್ರಧಾನಿ ಮಂತ್ರಿಯವರ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಮತದಾರರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ನಿಮ್ಮ ಎಲ್ಲಾ ಕಷ್ಟ ನೋವುಗಳಿಗೆ ಸದಾ ನಿಮ್ಮ ಜೊತೆ ಇದ್ದೇನೆ, ಯಾವುದೇ ಆತಂಕ ಪಡದೇ ಒಗ್ಗಟ್ಟಿನಿಂದ ಚುನಾವಣೆ ಮಾಡೋಣ ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ಈಗಾಗಲೇ ಜೆಡಿಎಸ್, ಬಿಜೆಪಿ ಜೊತೆ ಮೈತಿ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಬಿಜೆಪಿ ಅಭ್ಯರ್ಥಿಯಾದ ಬಸವರಾಜ ಬೊಮ್ಮಾಯಿ ಅವರ ಗೆಲುವಿಗೆ ಶ್ರಮವಹಿಸಬೇಕು. ಮುಂದಿನ ವಾರದಿಂದ ಜಿಲ್ಲಾದ್ಯಾಂತ ಜೆಡಿಎಸ್‌ನಿಂದ ಬೃಹತ್ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಚಂದ್ರು ಭರಮಗೌಡ್ರ, ರಾಮನಗೌಡ ಪಾಟೀಲ, ಮಲ್ಲಿಕಾರ್ಜುನ ಅರಳಿ, ಹಮ್ಮಗಿ, ಅಮೀರಜಾನಾ ಬೇತರಿ, ಷಣ್ಮುಖಪ್ಪ ಪಡಿವೆಪ್ಪನವರ, ಹನುಮಂತಗೌಡ ಗಂಗನಗೌಡ್ರ, ಮೌನೇಶ ಕಮ್ಮಾರ, ಉಜ್ಜಪ್ಪ ಹಲಗೇರಿ, ಬಸವರಾಜ ಕೊಪ್ಪದ, ಸುನೀಲ ದಂಡೆಮ್ಮನವರ, ಜ್ಯೋತಿ ಜಿಗಳಿ, ಶಿಲ್ಪಾ ಮುದಿಗೌಡ್ರ, ದೀಪಾ ದಳವಾಯಿ, ಸಿದ್ದಪ್ಪ ಗುಡಿಮುದಣ್ಣನವರ, ಬಿ.ಎಸ್. ಪಾಟೀಲ, ರವೀಂದ್ರ ಶಿವಪ್ಪನವರ, ಸೋಮರೆಡ್ಡಿ ಹಾದಿಮನಿ, ಮಾರುತಿ ಮುಂಡರಗಿ ಮತ್ತಿತರರು ಇದ್ದರು.