ಪ್ರಧಾನಿ ಜಾತಿಗಣತಿ ತೀರ್ಮಾನ ಮಹತ್ವದ್ದು: ಬಿಜೆಪಿ ಮುಖಂಡ ಆಲೂರು ನಿಂಗರಾಜು

| Published : May 03 2025, 12:18 AM IST

ಪ್ರಧಾನಿ ಜಾತಿಗಣತಿ ತೀರ್ಮಾನ ಮಹತ್ವದ್ದು: ಬಿಜೆಪಿ ಮುಖಂಡ ಆಲೂರು ನಿಂಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿದ್ದ ಜನಗಣತಿ ಇದುವರೆಗೂ ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಇದು ಸ್ವಾಗತಾರ್ಹ ಎಂದು ತಾಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಆಲೂರು ನಿಂಗರಾಜು ಹೇಳಿದ್ದಾರೆ.

ದಾವಣಗೆರೆ: ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿದ್ದ ಜನಗಣತಿ ಇದುವರೆಗೂ ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಇದು ಸ್ವಾಗತಾರ್ಹ ಎಂದು ತಾಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಆಲೂರು ನಿಂಗರಾಜು ಹೇಳಿದ್ದಾರೆ.

ಇದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಗೊತ್ತಾಗುತ್ತದೆ. ಆದರೆ. ಓಲೈಕೆಗಾಗಿ ಕಾಂಗ್ರೆಸ್ ನವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ನಡೆಸಿರುವ ಸಮೀಕ್ಷಾ ವರದಿಯನ್ನು ಯಾಕೆ ಬಿಡುಗಡೆ ಮಾಡಲು ಮೀನಮಿಷ ಎಣಿಸುತ್ತಿದ್ದಾರೆ. 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ. ಆ ಸಂದರ್ಭದಲ್ಲಿ ಜಾತಿಗಣತಿ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಲಿಲ್ಲ. ಆದರೆ ಬಿಜೆಪಿಯ ಮೋದಿ ಸರ್ಕಾರ ಜಾತಿ ಗಣತೆ ನಡೆಸಲು ದಿಟ್ಟ ನಿರ್ಧಾರ ತೆಗೆದು ಕೊಂಡಿರುವುದನ್ನು ಸ್ವಾಗತ ಮಾಡುವುದನ್ನು ಬಿಟ್ಟು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಅನ್ನು ಟೀಕಿಸಿದ್ದಾರೆ.

ಕಾಂಗ್ರೆಸ್‌ನವರು ಸ್ಥಿಮಿತತೆ ಕಳೆದುಕೊಂಡು ಪ್ರಧಾನಿಗಳು ಕಾಣೆಯಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಅನಂತರ ಸಾರ್ವಜನಿಕರ ಅಕ್ರೋಶ ಹೊರ ಹಾಕುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಮೋದಿಯವರು ತೆಗೆದುಕೊಂಡ ನಿರ್ಧಾರದಿಂದಾಗಿ ಇಡೀ ಪಾಕಿಸ್ತಾನ ರಾಷ್ಟ್ರದಲ್ಲಿ ಬೆಂಕಿ ಹತ್ತಿಕೊಂಡಿದೆ. ಸೈನ್ಯದ ಮುಖ್ಯಸ್ಥ ಓಡಿ ಹೋಗಿದ್ದಾರೆ. ಅಲ್ಲಿನ ಪ್ರಧಾನಿ ಆಸ್ಪತ್ರೆ ಸೇರಿದ್ದಾರೆ ಆದರೆ ಮೋದಿಯವರ ಹಿಂದೆ ಇಡೀ ಜಗತ್ತು ಬೆಂಬಲವಾಗಿ ನಿಂತಿದೆ ಎಂದು ತಿಳಿಸಿದ್ದಾರೆ.

ವಿಧಾನಸಭೆಯ ಒಳಗಡೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮಗೊಳ್ಳಲು ತೋರಿದ ವಿಳಂಬ, ರಾಜ್ಯದಲ್ಲಿ ನಡೆದ ಮತಾಂಧ ಕಿಡಿಗೇಡಿಗಳ ಕೃತ್ಯದ ಬಗ್ಗೆ ಸರ್ಕಾರದ ಮೌನ, ಏಕೆ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.