ಯುವ ಜನಾಂಗ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು-ಅರುಣಕುಮಾರ ಹಬ್ಬು

| Published : Jul 27 2024, 01:02 AM IST

ಯುವ ಜನಾಂಗ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು-ಅರುಣಕುಮಾರ ಹಬ್ಬು
Share this Article
  • FB
  • TW
  • Linkdin
  • Email

ಸಾರಾಂಶ

ಮುದ್ರಣ ಹಾಗೂ ದೃಶ್ಯ ಮಾಧ್ಯಮ ಜನರಿಗೆ ಜ್ಞಾನ ನೀಡುತ್ತವೆ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಹೇಳಿದರು.

ರಾಣಿಬೆನ್ನೂರು: ಮುದ್ರಣ ಹಾಗೂ ದೃಶ್ಯ ಮಾಧ್ಯಮ ಜನರಿಗೆ ಜ್ಞಾನ ನೀಡುತ್ತವೆ ಎಂದು ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಹೇಳಿದರು. ನಗರದ ಎಸ್‌ಜೆಎಂವಿ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪತ್ರಿಕೆಗಳು ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತವೆ. ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಪತ್ರಿಕೆಗಳು ಬಹುಮುಖ್ಯ ಪಾತ್ರ ವಹಿಸಿದ್ದವು. ಪತ್ರಿಕೆಗಳು ಜ್ಞಾನ ಹಂಚಿಕೆ ಮತ್ತು ನೀತಿಯನ್ನು ಕಲಿಸುತ್ತವೆ. ಪತ್ರಕರ್ತರು ಸಮಾಜದ ಒಂದು ಅಂಗವಾಗಿದ್ದು ಪ್ರಜೆಗಳ ರಕ್ಷಣೆ ಕಾರ್ಯ ನಿರ್ವಹಿಸುತ್ತಾರೆ. ಯುವ ಜನಾಂಗ ಕೇವಲ ಮನರಂಜನೆಗೆ ಒತ್ತು ನೀಡದೇ ಜೀವನ ರೂಪಿಸುವ ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು. ಉದ್ಘಾಟನೆ ನೆರವೇರಿಸಿದ ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜಕ್ಕೆ ಮುದ್ರಣ ಮಾಧ್ಯಮದ ಕೊಡುಗೆ ಅಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳಿಂದಾಗಿ ಪತ್ರಿಕೆಗಳನ್ನು ಓದುಗರ ಸಂಖ್ಯೆ ಕಡಿಮೆಯಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ನಾಡಿನ ಅಭ್ಯುದಯದಲ್ಲಿ ಪತ್ರಿಕೆಗಳ ಪಾತ್ರ ಬಹು ಮುಖ್ಯ. ಯುವ ಜನಾಂಗ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳದೇ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು. ಜಿಪಂ ಮಾಜಿ ಸದಸ್ಯ ಸಂತೋಷ ಕುಮಾರ ಪಾಟೀಲ, ಶಹರ ಸಿಪಿಐ ಡಾ. ಶಂಕರ್ ಸೈಬರ್ ಅಪರಾಧಗಳು ಹಾಗೂ ಸಾಮಾಜಿಕ ಜಾಲತಾಣಗಳ ಕುರಿತು ಮಾತನಾಡಿದರು.ಡಾ.ಎಮ್. ಈ. ಶಿವಕುಮಾರ ಹೊನ್ನಾಳಿ. ಬಿಜೆಪಿಯ ಡಾ. ಬಸವರಾಜ ಕೇಲಗಾರ, ಜೆಡಿಎಸ್‌ನ ಮಂಜುನಾಥ ಗೌಡಶಿವಣ್ಣನವರ, ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ, ಪ್ರಾ. ಡಾ.ಆರ್.ವ್ಹಿ. ಹೆಗಡಾಳ, ನಿಂಗಪ್ಪ ಚಾವಡಿ, ನಾಗರಾಜ ಕುರುವತ್ತೇರ, ಪರಸಪ್ಪ ಸತ್ಯಪ್ಪನವರ, ವೀರೇಶ ಮಡ್ಲೂರ, ಸಂತೋಷಕುಮಾರ ಮಹಾಂತಶೆಟ್ಟರ, ಎಸ್.ಜಿ. ಮಹಾನುಭಾವಿಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ತಾಲೂಕ ಕಾನಿಪ ಸಂಘದ ಅಧ್ಯಕ್ಷ ಎಸ್.ಟಿ. ವೇದಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪಿ. ರಾಮಯ್ಯ ಪ್ರಶಸ್ತಿ ಪುರಸ್ಕೃತ ಸ್ಥಳೀಯ ಪತ್ರಕರ್ತ ಮನೋಹರ ಮಲ್ಲಾಡದ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ ಹೊಸಪೇಟಿ, ಕರಿಯಪ್ಪ ಅರಳಿಕಟ್ಟಿ, ಗುರುರಾಜ ನಾಡಿಗೇರ, ಕೆ.ಎಸ್.ನಾಗರಾಜ, ಎಂ.ಚೀರಂಜೀವಿ, ಮಂಜುನಾಥ ಕುಂಬಳೂರ, ಶಿವಕುಮಾರ ಓಲೇಕಾರ, ಮಲ್ಲಿಕಾರ್ಜುನ ಕೆಂಚರೆಡ್ಡಿ, ಬಸವರಾಜ ಒಡೇರಹಳ್ಳಿ, ಗದಿಗೆಪ್ಪ ನೇಶ್ವಿ, ಮುರುಗೇಶ ಮಹಾನುಭಾವಿಮಠ, ಮುಕ್ತೇಶ ಕೂರಗುಂದಮಠ, ವಿಶ್ವನಾಥ ಕುಂಬಳೂರ, ಮಾಣಿಕಲಾಲ್ ಮೆಹರವಾಡೆ, ಬಸವರಾಜ ಸರೂರ, ಸುಮಿತ್ ಮಳಿಯೆ, ಗಿರೀಶ ಅಮ್ಮನವರ ಮತ್ತಿತರರಿದ್ದರು.