ಎಂಎಸ್‌ಪಿ ದರದಲ್ಲಿ ಖರೀದಿ ಕೇಂದ್ರ, ಭೂಮಾಪನಾ ಇಲಾಖೆಯಲ್ಲಿನ ಪಹಣಿ ಒಟ್ಟುಗೂಡಿಸುವುದು ಹಾಗೂ ಕನಿಷ್ಠ 8 ಅಳತೆ ಯಂತ್ರ, ವಿದ್ಯುತ್ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್, ಗುಮ್ಮಗೋಳ ಗ್ರಾಮದ ಹಳ್ಳದ ಹೂಳು ತೆಗೆದು ಬೆಟಸೂರ ಗ್ರಾಮದ ಮೂಲಕ ತಾಲೂಕಿನ ಎಲ್ಲ ಕೆರೆ ತುಂಬಿಸಿ ಕೆರೆಗಳ ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ನವಲಗುಂದ:

ತಾಲೂಕಿನಾದ್ಯಂತ ರೈತರ ಹತ್ತು- ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದಾರೆ. ಕೂಡಲೇ ರೈತರ ಸಮಸ್ಯೆಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಪರಿಹರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತದ ತಾಲೂಕು ಘಟಕದಿಂದ ತಹಸೀಲ್ದಾರ್‌ ಮುಖಾಂತರ ಮಂಗಳವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಎಂಎಸ್‌ಪಿ ದರದಲ್ಲಿ ಖರೀದಿ ಕೇಂದ್ರ, ಭೂಮಾಪನಾ ಇಲಾಖೆಯಲ್ಲಿನ ಪಹಣಿ ಒಟ್ಟುಗೂಡಿಸುವುದು ಹಾಗೂ ಕನಿಷ್ಠ 8 ಅಳತೆ ಯಂತ್ರ, ವಿದ್ಯುತ್ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್, ಗುಮ್ಮಗೋಳ ಗ್ರಾಮದ ಹಳ್ಳದ ಹೂಳು ತೆಗೆದು ಬೆಟಸೂರ ಗ್ರಾಮದ ಮೂಲಕ ತಾಲೂಕಿನ ಎಲ್ಲ ಕೆರೆ ತುಂಬಿಸಿ ಕೆರೆಗಳ ಸಂರಕ್ಷಣೆ ಸೇರಿದಂತೆ ವಿವಿಧ 12 ಬೇಡಿಕೆಗಳ ಜ್ವಲಂತ ಸಮಸ್ಯೆಗಳನ್ನು ಸಂಪೂರ್ಣವಾಗಿ ಚರ್ಚಿಸಿ ಕಾರ್ಯರೂಪಕ್ಕೆ ತರಲು ನಿರ್ಣಯ ಕೈಗೊಳ್ಳಬೇಕು. ಒಂದು ವೇಳೆ ಬೇಡಿಕೆಗಳನ್ನು ಪರಿಗಣಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಮಗ್ರವಾಗಿ ರಾಜ್ಯಾದ್ಯಂತ ರೈತರು ಆಯಾ ಇಲಾಖೆಯ ಸಚಿವರ ಮನೆಯ ಮುಂದೆ ಸರದಿ ಅಥವಾ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ವೇಳೆ ಜಿಲ್ಲಾಧ್ಯಕ್ಷ ಗುರುನಾಥಗೌಡ ಅರಳಿಹೊಂಡ, ಮುಖ್ಯ ಸಂಚಾಲಕ ಪುಟ್ಟಸ್ವಾಮೀಜಿ, ತಾಲೂಕು ಅಧ್ಯಕ್ಷ ಚಂದ್ರಗೌಡ ಫಕ್ಕೀರಗೌಡ್ರ, ಕಾರ್ಯದರ್ಶಿ ಬಸವರಾಜ ಮನಮಿ, ನಾಗಣ್ಣ ಬೆಳ್ಳಿಗಟ್ಟಿ, ಗೋಪಾಲ ದಿವಟೆ, ಸಿದ್ದನಗೌಡ ಕುಲಕರ್ಣಿ, ಹನುಮಂತಗೌಡ ಪಾಟೀಲ, ಗುರುನಾಥ ನೇಗಿನಹಾಳ, ಗೂಳಪ್ಪ ಹಿತ್ತಲಮನಿ ಸೇರಿದಂತೆ ಹಲವರಿದ್ದರು.