ಹಾನಗಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಹಾವೇರಿ ವೈದ್ಯಕೀಯ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ೬೦ಕ್ಕೂ ಜನರು ರಕ್ತದಾನ ಮಾಡಿದರು.

ಹಾನಗಲ್ಲ: ಬಡರೋಗಿಗಳಿಗೆ ಸಕಾಲಿಕವಾಗಿ ರಕ್ತ ಲಭ್ಯವಾಗಬೇಕಾದ ತೀರಾ ಅಗತ್ಯವಿದ್ದು, ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠವಾಗಿದೆ ಎಂದು ಪ್ರಗತಿಪರ ಸಂಘಟನೆ ಸದಸ್ಯ ಅಶೋಕ ದಾಸರ ಹೇಳಿದರು.

ಇಲ್ಲಿಯ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಹಾವೇರಿ ವೈದ್ಯಕೀಯ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಸಮಾಜಮುಖಿಯಾಗಿ ಸೇವೆ ಸಲ್ಲಿಸುವವರೆಲ್ಲ ಮುಖ್ಯವಾಗಿ ರಕ್ತದಾನಕ್ಕೆ ಆದ್ಯತೆ ನೀಡಬೇಕು. ರಕ್ತದಾನಕ್ಕೆ ಜನಸಾಮಾನ್ಯರನ್ನು ಪ್ರೋತ್ಸಾಹಿಸಬೇಕು. ಇದರಿಂದ ಆರೋಗ್ಯಕ್ಕೆ ಲಾಭವಿದೆಯೇ ಹೊರತು ಯಾವುದೇ ತೊಂದರೆ ಇಲ್ಲ ಎಂಬ ತಿಳಿವಳಿಕೆ ನೀಡಬೇಕು. ಬಡವರಿಗಾಗಿ ಅಗತ್ಯವಿರುವಾಗ ಕೂಡಲೇ ರಕ್ತ ದೊರೆಯುವಂತೆ ಲಕ್ಷ್ಯವಹಿಸಬೇಕಾಗಿದೆ ಎಂದರು.

ಪ್ರಗತಿಪರ ಸಂಘಟನೆ ಗೌರವಾಧ್ಯಕ್ಷ ಡಾ. ಎನ್.ಎಫ್. ಕಮ್ಮಾರ ಮಾತನಾಡಿ, ರಕ್ತ ಹೀರುವ ಸಮಾಜದ ನಡುವೆ ರಕ್ತದಾನ ಮಾಡುವ ಮಹನೀಯರು ನಿಜಕ್ಕೂ ಅಭಿನಂದನೀಯರು. ಆರೋಗ್ಯ ಸಮಸ್ಯೆಗಳು ಬಂದಾಗ ರಕ್ತದಾನ ಮಾಡುವವರನ್ನು ಹುಡುಕುವ ಸಂದರ್ಭಕ್ಕಿಂತ ರಕ್ತವನ್ನು ಸಂಗ್ರಹಿಸಿಟ್ಟುಕೊಳ್ಳುವುದು ತೀರಾ ಅಗತ್ಯವಿದೆ. ಆಸ್ಪತ್ರೆಗಳು ಕೂಡ ರಕ್ತ ಸಂಗ್ರಹಕ್ಕೆ ಆದ್ಯತೆ ನೀಡಬೇಕು. ಸಮರೋಪಾದಿಯಲ್ಲಿ ದಾನಿಗಳಿಂದ ರಕ್ತ ಪಡೆಯಬೇಕು ಎಂದು ಹೇಳಿದರು.

೬೦ಕ್ಕೂ ಜನರು ರಕ್ತದಾನ ಮಾಡಿದರು. ಆರೋಗ್ಯ ಇಲಾಖೆಯ ಡಿ. ಮಲ್ಲೇಶ ೩೨ನೇ ಬಾರಿ ರಕ್ತದಾನ ಮಾಡಿದರು. ರೇವತಿ ಪ್ರಜಾರ ೧೨ನೇ ಬಾರಿ, ಅನಿತಾ ಡಿಸೋಜಾ ೧೦ ಬಾರಿ, ಮುಸ್ತಾಕಲಿ ಪಾಣಿಗಟ್ಟಿ ೭ನೇ ಬಾರಿ, ಪ್ರಶಾಂತ ಶಂಕ್ರಿಕೊಪ್ಪ, ಪ್ರವೀಣಗೌಡ ಪಾಟೀಲ ೬ನೇ ಬಾರಿ ರಕ್ತದಾನ ಮಾಡಿದರು.

ರೋಶನಿ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ, ಬಸವರಾಜ ಕೋತಂಬರಿ, ಎನ್.ಎಂ. ಪೂಜಾರ, ಬಿ.ಆರ್. ಶೆಟ್ಟರ, ಫೈರೋಜಅಹಮ್ಮದ್ ಶಿರಬಡಗಿ, ಖಲೀಂಅಲಿ ಮಾಸನಕಟ್ಟಿ, ಗೀತಾ ತಳವಾರ, ಕಲ್ಲಪ್ಪ ನಾಯ್ಕರ, ಮಂಗಳಾ ಬೆಣ್ಣಿ, ಮುನಿರ್‌ಅಹಮ್ಮದ್ ಕಲ್ಲಾಪುರ, ಮಂಜಣ್ಣ ಡೊಳ್ಳೇಶ್ವರ, ಪಾಲಾಕ್ಷಯ್ಯ ಹಿರೇಮಠ ಇದ್ದರು.