ಸಾರಾಂಶ
ಜ್ಞಾನ ಸಂಪಾದಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕು
ಹಳಿಯಾಳ: ವಿದ್ಯಾರ್ಥಿಗಳಲ್ಲಿ ಉತ್ತಮ ಚಾರಿತ್ರ್ಯ ರೂಪುಗೊಳ್ಳಬೇಕಾದರೆ ಉತ್ತಮ ಜ್ಞಾನದ ಅವಶ್ಯಕತೆ ಇದೆ. ಅಂತಹ ಜ್ಞಾನ ಸಂಪಾದಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ವಿ.ಆರ್.ಡಿ.ಎಂ. ಟ್ರಸ್ಟ್ ಧರ್ಮದರ್ಶಿ ರಾಧಾಬಾಯಿ ಆರ್. ದೇಶಪಾಂಡೆ ಕರೆ ನೀಡಿದರು.
ಸೋಮವಾರ ಸಂಜೆ ಪಟ್ಟಣದ ತುಳಜಾ ಭವಾನಿ ದೇವಸ್ಥಾನದಲ್ಲಿ ದಿ. ಗೋವಿಂದರಾವ್ ವಿಶ್ವನಾಥರಾವ್ ದೇಶಪಾಂಡೆ ಮತ್ತು ಗೋಪಿಕಾಬಾಯಿ ಗೋವಿಂದರಾವ್ ದೇಶಪಾಂಡೆ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿ.ಎಸ್.ಬಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾಥಿ ವೇತನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ಉಪನ್ಯಾಸಕಿ ರಾಧಾ ವೇಲಂಗಿ ಮಾತನಾಡಿದರು.
ಜಿಎಸ್ಬಿ ಸಮಾಜದ 42 ವಿದ್ಯಾರ್ಥಿಗಳಿಗೆ ₹60500 ವಿದ್ಯಾರ್ಥಿವೇತನ ವಿತರಣೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಜಿಎಸ್ಬಿ ಸಮಾಜದ ಅಧ್ಯಕ್ಷ ನಿತೀನ ದೇಶಪಾಂಡೆ, ಸಮಾಜದ ಹಿರಿಯರಾದ ದಿಲೀಪ್ ಪಡ್ನೀಸ್, ಪ್ರಸಾದ ಹುಣ್ಸವಾಡಕರ, ಉಪಸ್ಥಿತರಿದ್ದರು. ಅವಿನಾಶ ಲೋಣಿ ಕಾರ್ಯಕ್ರಮ ನಿರೂಪಿಸಿದರು.