ಅರಣ್ಯ ಸಂಪತ್ತು ಉಳಿಸಲು ಪರಿಸರ ಶಿಕ್ಷಣಕ್ಕೆ ಆದ್ಯತೆ ನೀಡಿ

| Published : Mar 31 2024, 02:02 AM IST

ಅರಣ್ಯ ಸಂಪತ್ತು ಉಳಿಸಲು ಪರಿಸರ ಶಿಕ್ಷಣಕ್ಕೆ ಆದ್ಯತೆ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯವನ್ನು ಸಂರಕ್ಷಿಸುವುದರ ಜೊತೆಗೆ ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಾತಾವರಣ ಕಲುಷಿತಗೊಳ್ಳುತ್ತಿರುವುದರಿಂದ ಪ್ರಕೃತಿ ಸಮತೋಲನ ಕಾಪಾಡುವಲ್ಲಿ ವಿಫಲವಾಗುತ್ತಿದೆ.

ಹಗರಿಬೊಮ್ಮನಹಳ್ಳಿ: ಪ್ರಾಥಮಿಕ ಹಂತದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ಪರಿಣಾಮಕಾರಿಯಾದ ಶಿಕ್ಷಣ ವ್ಯವಸ್ಥೆ ಜಾರಿಗೊಳ್ಳಬೇಕು ಎಂದು ಗುತ್ತಿಗೆದಾರ ಸಿವಿಲ್ ಎಂಜಿನಿಯರ್ ಜಿ.ವಿಕ್ರಮ್ ತಿಳಿಸಿದರು.

ತಾಲೂಕಿನ ತಂಬ್ರಹಳ್ಳಿಯಲ್ಲಿ ರೈತ ಪಿ.ಶೇಕ್‌ ಶಾವಲಿ ಅವರ ಮಗ ಮಹಮದ್ ಉಸ್ಮಾನ್ ಘನಿ ಅವರ "ಅಕಿಕಾ " ಹೆಸರಿನ ವಿಶೇಷ ಕಾರ್ಯಕ್ರಮದಲ್ಲಿ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅರಣ್ಯವನ್ನು ಸಂರಕ್ಷಿಸುವುದರ ಜೊತೆಗೆ ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ವಾತಾವರಣ ಕಲುಷಿತಗೊಳ್ಳುತ್ತಿರುವುದರಿಂದ ಪ್ರಕೃತಿ ಸಮತೋಲನ ಕಾಪಾಡುವಲ್ಲಿ ವಿಫಲವಾಗುತ್ತಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರು ಪರಿಸರ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕು. ಅರಣ್ಯ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ. ಮಗನ ಅಕಿಕಾ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಸಸಿಗಳನ್ನು ವಿತರಿಸಿ ಶೇಕ್‌ ಶಾವಲಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಪಿ.ಶೇಕ್‌ ಶಾವಲಿ ಕುಟುಂಬದವರು ಅಕಿಕಾ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಜನರಿಗೆ ಸಸಿಗಳನ್ನು ವಿತರಿಸಿ ಬೆಳೆಸಲು ಸೂಚಿಸಿದರು.

ರಂಜಾನ್ ತಿಂಗಳ ನಿಮಿತ್ತ ಉಪವಾಸವಿದ್ದ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಗ್ರಾಪಂ ಸದಸ್ಯರಾದ ಮೈಲಾರ ಶಿವಕುಮಾರ, ಆನೇಕಲ್ ದೊಡ್ಡಬಸಪ್ಪ, ಮುಖಂಡರಾದ ಹುಡೇದ ಗುರುಬಸವರಾಜ, ಅಬೂಬಕರ್, ಗೌರಜ್ಜನವರ ಗಿರೀಶ್, ರೆಡ್ಡಿ ಮಂಜುನಾಥ ಪಾಟೀಲ್, ಸುಣಗಾರ ಪರುಶುರಾಮ, ಏಣಿಗಿ ರಾಜಭಕ್ಷಿ, ಪಿ.ಕೊಟ್ರೇಶ, ಚಿಂತ್ರಪಳ್ಳಿ ದೇವೆಂದ್ರ, ಪಟ್ಟಣಶೆಟ್ಟಿ ಸುರೇಶ, ಲೈನ್‌ಮ್ಯಾನ್ ಇಂದರಗಿ ಯಮನೂರ, ರಾಮನಮಲಿ, ಸೋಮಶೇಖರ ಪಾಟೀಲ್, ಪಿ.ರಾಜಭಕ್ಷಿ, ಯಮನೂರ್‌ಸಾಬ್, ಮಂಜಣ್ಣ ಇತರರಿದ್ದರು.