ಸಾರಾಂಶ
ಶಿಗ್ಗಾಂವಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಗಳಿಗೂ ಆದ್ಯತೆ ನೀಡಬೇಕು. ಕ್ರೀಡೆಗಳಲ್ಲಿ ಸೋಲು- ಗೆಲುವನ್ನು ಸಮಾನವಾಗಿ ಕಾಣಬೇಕು ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ತಿಳಿಸಿದರು.
ತಾಲೂಕಿನ ತಡಸದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತೇನೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ತಂದೆ- ತಾಯಿಗಳು ಇಟ್ಟ ಭರವಸೆಯನ್ನು ಹುಸಿಗೊಳಿಸಬೇಡಿ ಎಂದು ಕೋರಿದರು.
ಶಿಕ್ಷಣದ ಮೇಲಿರುವ ಕಾಳಜಿಯಿಂದ ಇದೀಗ ತಾಲೂಕಿಗೆ ೩ ಕೆಪಿಎಸ್‌ಸಿ ಶಾಲೆಗಳು ಮಂಜೂರಾಗಿವೆ. ಇದರಲ್ಲಿ ಎಲ್‌ಕೆಜಿಯಿಂದ ಪಿಯುಸಿ ವರೆಗೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬಹುದು. ತಾಲೂಕಿನ ಕೋಣನಕೇರಿ, ಹಿರೇಬೆಂಡಿಗೇರಿ, ಮಾವೂರ ಗ್ರಾಮಗಳಿಗೆ ಈ ಶಾಲೆಗಳು ಮಂಜೂರಾಗಿವೆ. ಇನ್ನೂ ಎರಡು ಶಾಲೆಗಳನ್ನು ಮಂಜೂರು ಮಾಡುವುದಾಗಿ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ ಎಂದರು.ತಡಸ ಗ್ರಾಮಕ್ಕೂ ಮೌಲಾನಾ ಆಜಾದ ಶಾಲೆ ಮಂಜೂರಾಗಿದ್ದು, ಸ್ಥಳದ ಪರಿಶೀಲನೆಯಲ್ಲಿದೆ. ಶಿಗ್ಗಾಂವಿ- ಸವಣೂರು ತಾಲೂಕು ಕ್ರೀಡಾಂಗಣಕ್ಕೆ ಒಂದು ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದರು.ಶಿಗ್ಗಾಂವಿಯ ಅಂಕಲಕೊಟಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಾಲಿ ಗುರೂಜಿ ಮಾತನಾಡಿದರು. ತಡಸ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೌಸೀಯಾ ಹುಬ್ಬಳ್ಳಿ, ಉಪಾಧ್ಯಕ್ಷ ಪ್ರಭು ನಂಜಪ್ಪನವರ, ಕಾಲೇಜು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ಮೆಹಬೂಬಸಾಬ ಇಂಗಳಗಿ, ಜಿಪಂ ಮಾಜಿ ಸದಸ್ಯ ಸಿ.ಎಸ್. ಪಾಟೀಲ್, ಶಿಗ್ಗಾಂವಿ ಪುರಸಭೆ ಸದಸ್ಯೆ ವಸಂತ ಬಾಗೂರ, ಅಬ್ದುಲ್‌ಮಜೀದ ಕೊಲ್ಲಾಪುರ, ಬಾಬಾರ ಬೂವಾಜೀ, ಸಿಖಂಧರ ಪಲ್ಲೇದ, ಆನಂದ ಲಮಾಣಿ, ಮಲ್ಲೇಶಪ್ಪ ದುಂಡಪ್ಪನವರ ಇದ್ದರು. ತಡಸ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಾರ್ವತಿ ಜೋಶಿ ಸ್ವಾಗತಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))