ಕುಡಿಯುವ ನೀರು, ನಗರ ನೈರ್ಮಲ್ಯಕ್ಕೆ ಆದ್ಯತೆ: ನಾಗರಾಜ ಭಟ್‌

| Published : Feb 21 2025, 12:48 AM IST

ಕುಡಿಯುವ ನೀರು, ನಗರ ನೈರ್ಮಲ್ಯಕ್ಕೆ ಆದ್ಯತೆ: ನಾಗರಾಜ ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾವರ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ ಆಯ-ವ್ಯಯ ಮುಂಗಡಪತ್ರವನ್ನು ಪಪಂ ಅಧ್ಯಕ್ಷ ನಾಗರಾಜ ಭಟ್‌ ಇತ್ತೀಚೆಗೆ ಮಂಡಿಸಿದರು.₹15.62 ಕೋಟಿ ಅಂದಾಜು ಆದಾಯ ಮತ್ತು ₹೧೫.58 ಕೋಟಿ ವೆಚ್ಚ ಸೇರಿ ₹4.54 ಲಕ್ಷ ಉಳಿತಾಯದ ಆಯ-ವ್ಯಯ ಸಿದ್ಧಪಡಿಸಲಾಗಿದೆ.

ಹೊನ್ನಾವರ: ಇಲ್ಲಿಯ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ ಆಯ-ವ್ಯಯ ಮುಂಗಡಪತ್ರವನ್ನು ಪಪಂ ಅಧ್ಯಕ್ಷ ನಾಗರಾಜ ಭಟ್‌ ಇತ್ತೀಚೆಗೆ ಮಂಡಿಸಿದರು.₹15.62 ಕೋಟಿ ಅಂದಾಜು ಆದಾಯ ಮತ್ತು ₹೧೫.58 ಕೋಟಿ ವೆಚ್ಚ ಸೇರಿ ₹4.54 ಲಕ್ಷ ಉಳಿತಾಯದ ಆಯ-ವ್ಯಯ ಸಿದ್ಧಪಡಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು, ನಗರ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥಿತ ನಿರ್ವಹಣೆ ಹಾಗೂ ನಗರ ಸೌಂದರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಪಪಂ ಆದಾಯ ಮೂಲಗಳಾದ ಆಸ್ತಿ ತೆರಿಗೆ, ನೀರು ಸರಬರಾಜು ಶುಲ್ಕ, ಉದ್ದಿಮೆ ಪರವಾನಗಿ, ಮಳಿಗೆಗಳ ಬಾಡಿಗೆ ಹಾಗೂ ಇತರ ಮೂಲಗಳಿಂದ ನಿರೀಕ್ಷಿಸಲಾದ ಆದಾಯದ ಮೇಲೆ ಆಯ-ವ್ಯಯ ತಯಾರಿಸಿದ್ದು, ಸರ್ಕಾರದ ವಿವಿಧ ಅನುದಾನಗಳ ಮೊತ್ತಕ್ಕನುಗುಣವಾಗಿ ಹೊಸ ಯೋಜನೆಗಳನ್ನು ಅಳವಡಿಸಿಕೊಂಡಿರುವುದಾಗಿ ಮಾಹಿತಿ ನೀಡಿದರು.

ಬಜೆಟ್ ಚರ್ಚೆಯಲ್ಲಿ ಸದಸ್ಯರಾದ ವಿಜಯ್ ಕಾಮತ್ ಮಾತನಾಡಿ, ಮಾವಿನಕುರ್ವಾದಲ್ಲಿ ನಿರ್ಮಾಣ ಆಗುತ್ತಿರುವ ಖಾಸಗಿ ಉದ್ಯಮಕ್ಕೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಆಜಾದ್ ಅಣ್ಣಿಗೇರಿ, ನೀರು ಪೂರೈಸುವುದಕ್ಕೆ ಅನುಮತಿ ನೀಡಿದ್ದೀರಾ? ಅಥವಾ ಈ ವಿಚಾರದಲ್ಲಿ ಏನಾದರೂ ಒಳ ಒಪ್ಪಂದ ಆಗಿದೆಯೇ? ಆಗಿದ್ದರೆ ಸಭೆಗೆ ತಿಳಿಸಿ ಎಂದರು.

ಸದಸ್ಯರಾದ ತಾರಾ ಕುಮಾರಸ್ವಾಮಿ, ಮೇಧಾ ನಾಯ್ಕ ಮಾತನಾಡಿ, ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಮೊದಲು ಇಲ್ಲಿನ ಜನರಿಗೆ ಸರಿಯಾಗಿ ನೀರು ಪೂರೈಸಲು ವ್ಯವಸ್ಥೆ ಆಗಬೇಕು ಎಂದರು.

ನಾವು ಯಾವುದಕ್ಕೂ ಅನುಮತಿ ನೀಡಿಲ್ಲ. ಯಾವ ಒಳ ಒಪ್ಪಂದವೂ ಆಗಿಲ್ಲ ಎಂದು ಪಪಂ ಮುಖ್ಯಾಧಿಕಾರಿ ಏಸು ಬೆಂಗಳೂರು ಹೇಳಿದರು.

ಪಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸ್ಥಾಯಿ‌ ಸಮಿತಿ ಅಧ್ಯಕ್ಷ ಮಹೇಶ ಮೇಸ್ತ, ಸದಸ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.